For the best experience, open
https://m.samyuktakarnataka.in
on your mobile browser.

ಕೋಟೆಧ್ವನಿ ಇಂಪ್ಯಾಕ್ಟ್: ಅಧಿಕಾರಿ ಅಮಾನತು

08:39 PM Sep 08, 2024 IST | Samyukta Karnataka
ಕೋಟೆಧ್ವನಿ ಇಂಪ್ಯಾಕ್ಟ್  ಅಧಿಕಾರಿ ಅಮಾನತು

ಬಾಗಲಕೋಟೆ: ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ೮೦೦ಕ್ಕೂ ಅಧಿಕ ಕಡತಗಳ ವಿಲೇವಾರಿಯಾಗದ ಕುರಿತು ಸಂಯುಕ್ತ ಕರ್ನಾಟಕದ "ಕೋಟೆಧ್ವನಿ" ಅಂಕಣದಲ್ಲಿ ಪ್ರಕಟಗೊಂಡ ವರದಿಯನ್ನಾಧರಿಸಿ ಸಿಬ್ಬಂದಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ.
ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಕಡತಗಳ ವಿಲೇವಾರಿಯಾಗದೆ ಮೂಲೆ ಸೇರಿರುವ ಬಗ್ಗೆ "ಉದ್ಯೋಗದಲ್ಲೂ ಅನುಕಂಪ ಬೇಕೆ" ಶೀರ್ಷಿಕೆಯಡಿಯಲ್ಲಿ ದಾಖಲೆಗಳು ಮೂಲೆ ಸೇರಿರುವ ಚಿತ್ರ ಸಹಿತ ವರದಿ ಪ್ರಕಟಿಸಲಾಗಿತ್ತು. ವರದಿ ಗಮನಿಸಿದ್ದ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಅವರು ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ್ ಅವರಿಂದ ವರದಿ ಪಡೆದಿದ್ದರು.
ವರದಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿ ಎಸ್.ಎಂ. ಬುಳ್ಳ ಅವರು ೮೦೦ ಕಡತಗಳನ್ನು ಅಭಿಲೇಖಾಲಯಕ್ಕೆ ಸಲ್ಲಿಸದೆ ಇರುವುದು, ೫೧ ಪ್ರಕರಣಗಳಲ್ಲಿ ಕ್ರಮವಹಿಸದೆ ಬಾಕಿ ಇಟ್ಟಿರುವುದು ತಿಳಿದು ಬಂದಿರುವುದರಿಂದ ಬೇಜವಾಬ್ದಾರಿ ತೋರಿರುವ ಬಗ್ಗೆ ವರದಿ ಸಲ್ಲಿಸಿದ್ದರು. ವರದಿ ಗಮನಿಸಿದ ಜಿಲ್ಲಾಧಿಕಾರಿ ೧೯೫೭ ನಿಯಮ ೧೦(೧)ರ ಅನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ವಿಚಾರಣೆಯನ್ನು ಬಾಕಿಯಿರಿಸಿ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.