ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕ್ಯಾನ್ಸರ್ ರೋಗಿಗೆ ಕೇಶ ದಾನ ಮಾಡಿದ ವಿದ್ಯಾರ್ಥಿನಿ

07:22 PM Jun 02, 2024 IST | Samyukta Karnataka

ಮಂಡ್ಯ: ತಾಲ್ಲೂಕಿನ ಬೇಲೂರು ಗ್ರಾಮದ ಶಿಲ್ಪ ಮತ್ತು ಮಹದೇವ ಅವರ ಮಗಳು ಶ್ರೀರಕ್ಷ ಬಿ.ಎಂ ಅವರು ತಮ್ಮ 20 ಇಂಚು ಕೇಶವನ್ನು ಕ್ಯಾನ್ಸರ್ ರೋಗಿಗೆ ದಾನ ಮಾಡಿದ ವಿದ್ಯಾರ್ಥಿನಿ. ಸರ್ಕಾರಿ ಪ್ರೌಢಶಾಲೆ ಬೇಲೂರಿನಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅನೇಕ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಅಸಾಧಾರಣ ಪ್ರತಿಭೆ..ನನ್ನಿಂದ ಸಮಾಜಕ್ಕೆ ಏನಾದರೂ ಉಪಯೋಗ ಮಾಡಬೇಕು ಎಂದು ಆಲೋಚನೆಯಲ್ಲಿದ್ದಾಗಲೇ ನನ್ನ ಸೋದರತ್ತೆ ಕ್ಯಾನ್ಸರ್ ಕಾಯಿಲೆಯಿಂದ ಅಸುನೀಗಿದರು ಅವರು ಕಿಮೋಥೆರಪಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಅವರ ತಲೆ ಕೂದಲು ಪೂರ್ಣ ಪ್ರಮಾಣದಲ್ಲಿ ಉದುರಿದ್ದನ್ನು ಗಮನಿಸಿದ್ದೆ.. ನಂತರ ಇದರ ಬಗ್ಗೆ ನಮ್ಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿಯಾದ ಉಷಾ ಮೇಡಂ ಅವರ ಬಳಿ ಹೇಳಿದಾಗ ಅವರು ಕೇಶ ದಾನ ಮಾಡಬಹುದು ಕ್ಯಾನ್ಸರ್ ರೋಗಿಗಳಿಗೆ ನಿಮ್ಮ ಕೇಶದಿಂದ ವಿಗ್ ಮಾಡಿ ಅವರಿಗೆ ಉಚಿತವಾಗಿ ನೀಡುತ್ತಾರೆ ಎಂದು ತಿಳಿಸಿದರು.ನಂತರ ಅವರ ಮಾರ್ಗದರ್ಶನದಲ್ಲಿ ನಾನು ನನ್ನ ಕೇಶವನ್ನು ಬಹಳ ಸಂತೋಷದಿಂದ ದಾನ ಮಾಡಿರುವುದಾಗಿ ತಿಳಿಸಿದ್ದಾರೆ.

Next Article