ಗಂಡನನ್ನೇ ಕೊಲ್ಲುವ ಸ್ತ್ರೀಯರಿದ್ದಾರೆ..!
ಸತ್ಯಭಾಮೆಗೆ ದ್ರೌಪತಿಯು ಹೇಳುವ ಸ್ತ್ರೀಧರ್ಮದಲ್ಲಿ ಅನೇಕ ವಿಷಯಗಳು ಉಲ್ಲೇಖವಾಗುತ್ತವೆ. ಅಂದಿನ ಉದಾಹರಣೆಗಳನ್ನು ವರ್ತಮಾನದ ಸಂದರ್ಭದಲ್ಲಿ ಅನ್ವಯವಾಗುವಂಥವವೇ ಆಗಿವೆ. ಕೆಲವು ಸ್ತ್ರೀಯರ ಸ್ವಭಾವ ವಿವಿಧ ಹಂತದಲ್ಲಿ ಆಗುವ ಪರಿಣಾಮಕತೆಯಿಂದ ಜಾಗೃತ ವಹಿಸಲು ಕೂಡ ದ್ರೌಪದಿ ಹೇಳುತ್ತಾಳೆ.
ಪತಿ-ಪತ್ನಿಯ ನಡುವೆ ಅನ್ಯೋನ್ಯತೆ ಏರ್ಪಡದೇ ಹೋದಲ್ಲಿ ಅದಕ್ಕೆ ಕಾರಣಗಳು ಇಬ್ಬರಲ್ಲಿಯೂ ಇರಬಹುದು. ಆದರೆ ಸ್ತಿçಯರಲ್ಲಿ ಕಾರಣಗಳೇನೆಂದರೆ. ತಾನು ಹೇಳಿದ ಮಾತನ್ನು ಕೇಳುವುದಿಲ್ಲವೆಂಬ ದೃಷ್ಟಿಯಿಂದ ಕೆಲವು ಸ್ತ್ರೀಯರು ಗಂಡನನ್ನೇ ಕೊಲ್ಲುವವರೂ ಈ ಜಗತ್ತಿನಲ್ಲಿದ್ದಾರೆ ಎನ್ನುತ್ತಾಳೆ.
ಗಂಡನಲ್ಲಿ ನಂಬಿಗೆ ಇಲ್ಲದೇ ಹೋದಲ್ಲಿ ಗಂಡನಿಗೆ ಆಗದವರು ಯಾರಿದ್ದಾರೆ ಎಂಬುದನ್ನು ಹುಡುಕುತ್ತಾರೆ. ಅವರ ಜೊತೆ ಸಖ್ಯ ಬೆಳೆಸುತ್ತಾರೆ. ತಾವೂ ಕೂಡ ಗಂಡನ ವಿರೋಧಿಗಳ ಜೊತೆ ಸೇರಿಕೊಳ್ಳುತ್ತಾರೆ. ವಿಷವನ್ನು ತರಿಸಿ ಇದು ಔಷಧಿ, ಇದರಿಂದ ಆರೋಗ್ಯ ಬರುತ್ತದೆಂದು ಸುಳ್ಳು ಹೇಳಿ ಪತಿಗೆ ತಾವೇ ವಿಷವನ್ನು ನೀಡುತ್ತಾರೆ. ಹೆಂಡತಿಯನ್ನು ನಂಬಿದ ಪತಿಯು ಔಷಧಿಯೆಂದು ಅದನ್ನು ಸೇವಿಸುತ್ತಾನೆ ಅಥವಾ ಚರ್ಮದ ಮೇಲೆ ಲೇಪಿಸುತ್ತಾನೆ. ಅಷ್ಟರಿಂದಲೇ ಅವನು ಮರಣ ಹೊಂದುತ್ತಾನೆ ಅಥವಾ ಆರೋಗ್ಯವನ್ನು ಕಳೆದುಕೊಳ್ಳುತ್ತಾನೆ.
ಆಗ ಕಾಣುವ ಬಗೆಯೇ ಬೇರೆಯಾಗಿರುತ್ತದೆ. ಜಲೋದರ ರೋಗ, ಬಿಳಿಚು ರೋಗ, ವೃದ್ಧಾಪ್ಯ ಅಥವಾ ಬೇರೆ ಯಾವುದೇ ದೀರ್ಘಕಾಲೀನವಾದ ಅನಾರೋಗ್ಯಗಳು ಬಂದರೆ ಅಂತಹ ಪತಿಯನ್ನು ದುಷ್ಟ ಸ್ತ್ರೀಯಾದವಳು ಕಸದಂತೆ ಕಾಣುತ್ತಾಳೆ. ಕಿವುಡನಂತೆ, ಕುರುಡನಂತೆ, ಕೈಕಾಲುಗಳಿಲ್ಲದ ಕುಂಟನಂತೆ ಕಾಣುತ್ತಾಳೆ. ಪಾಪಿಷ್ಠರಾದ ಸ್ತ್ರೀಯರ ಸಮಾಜದಲ್ಲಿ ಅನೇಕ ಕಡೆ ಇರುತ್ತಾರೆ.
ಅಂತಹವರ ಸಹವಾಸವನ್ನು ಮಾಡುವುದರಿಂದ ಸ್ತ್ರೀಯರಿಗೆ ಪತಿಯ ವಿಷಯದಲ್ಲಿ ವಿರೋಧ ಮಾಡಬೇಕೆಂಬ ಬುದ್ಧಿಯು ಪ್ರಾರಂಭವಾಗುತ್ತದೆ. ಆದ್ದರಿಂದ ಶ್ರೇಯಸ್ಸನ್ನು ಬಯಸುವ ಸ್ತ್ರೀಯಾದವಳು ಮೊಟ್ಟ ಮೊದಲು ಮಾಡಬೇಕಾದ ಕೆಲಸ ದುಷ್ಟ ಸಹವಾಸ ಬಿಡಬೇಕು. ಪ್ರಸ್ತುತವಾಗಿ ಆಲೋಚನೆಗಳನ್ನು ಮಾಡದೇ ದೀರ್ಘಕಾಲೀನ ಹಾಗೂ ದೇಶ, ಸನ್ನಿವೇಶದಾಚೆಗೂ ಸ್ತ್ರೀಯರ ಮನಸ್ಸು ಯಾವ ಸನ್ನಿವೇಶದಲ್ಲಿ ಏನು ಮಾಡುತ್ತದೆ ಎಂಬುದೇ ಇಂದಿಗೂ ಕಗ್ಗಂಟು. ಅದಕ್ಕೆ ಸ್ತ್ರೀಯಾದವಳು ತಾನು ಮಾಡುವ ಧರ್ಮ ಮತ್ತು ಕರ್ತವ್ಯಗಳ ಬಗ್ಗೆ ನಿಗಾ ಇಟ್ಟುಕೊಂಡು ಸನ್ನಡೆತೆಯಲ್ಲಿರಬೇಕು ಎಂದು ಹೇಳಿದ್ದಾಳೆ.