For the best experience, open
https://m.samyuktakarnataka.in
on your mobile browser.

ಗಣೇಶೋತ್ಸವವನ್ನು ಪರಿಸರ ಸ್ನೇಹಿ ಮಾಡೋಣ

11:50 AM Aug 31, 2024 IST | Samyukta Karnataka
ಗಣೇಶೋತ್ಸವವನ್ನು ಪರಿಸರ ಸ್ನೇಹಿ ಮಾಡೋಣ

ಬೆಂಗಳೂರು: ಪರಿಸರ ಸ್ನೇಹಿ ಮಣ್ಣಿನ ಹಾಗೂ ನೀರಿನಲ್ಲಿ ಕರಗುವಂತಹ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಈ ಬಾರಿಯ ಗಣೇಶೋತ್ಸವವನ್ನು ಪರಿಸರ ಸ್ನೇಹಿ ಮಾಡೋಣ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ನಾಡಿನ ಜನತೆಗೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು “ಪ್ರಕೃತಿ ವಿಕೋಪ ನಿವಾರಕ – ನಮ್ಮ ಪರಿಸರ ವಿನಾಯಕ’’ ನನ್ನು - ಬಣ್ಣ ರಹಿತ ಮಣ್ಣಿನ ಮೂರ್ತಿಗಳ ರೂಪದಲ್ಲಿ ಪೂಜಿಸೋಣ. ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ಅಥವಾ ರಾಸಾಯನಿಕಗಳ ಬಳಕೆಯಿಂದ ತಯಾರಿಸಲಾದ ಮೂರ್ತಿಗಳಿಂದ ಪ್ರಾಣಿ, ಮನುಷ್ಯ ಹಾಗೂ ಜಲಮೂಲಗಳ ಮೇಲೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಆದರೆ, ಮಣ್ಣಿನಿಂದ ಅಥವಾ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಲಾದ ಮೂರ್ತಿಗಳು ನೀರಿನಲ್ಲಿ ಕರಗುತ್ತವೆ ಮತ್ತು ಪರಿಸರಕ್ಕೆ ಯಾವುದೇ ಹಾನಿಯಾಗದು. ಗಣೇಶೋತ್ಸವದ ತಯಾರಿ ಮಾಡಿಕೊಳ್ಳುವಾಗ ಎಲ್ಲರೂ ಪರಿಸರದ ಸಂರಕ್ಷಣೆಯ ಮಹತ್ವವನ್ನು ಅರಿತು, ಪರಿಸರಕ್ಕೆ ಹಿತವಾದ ಗಣೇಶ ಮೂರ್ತಿಗಳನ್ನು ಉಪಯೋಗಿಸಬೇಕು ಮತ್ತು ಮುಂದಿನ ಪೀಳಿಗೆಗೆ ಸ್ವಚ್ಛ, ಹಸಿರಾದ ಜಗತ್ತನ್ನು ಕೊಡುವ ಸಂಕಲ್ಪವನ್ನು ಮಾಡೋಣ ಎಂದಿದ್ದಾರೆ.

Tags :