ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಗಾಂಧಿ ಜಯಂತಿ ಪ್ರಯುಕ್ತ ಇನಾಯತ್ ಅಲಿ ನೇತೃತ್ವದಲ್ಲಿ “ಗಾಂಧಿ ನಡಿಗೆ“

07:00 PM Oct 02, 2024 IST | Samyukta Karnataka

ಸುರತ್ಕಲ್‌: ಮಹಾತ್ಮ ಗಾಂಧಿ ಅವರು ಬೆಳಗಾವಿಯಲ್ಲಿ ಕಾಂಗ್ರೆಸ್ ಮಹಾ ಅಧಿವೇಶನದ ಅಧ್ಯಕ್ಷತೆ ವಹಿಸಿ ಜೊತೆಗೆ ದೇಶದ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿಕೊಂಡು 100 ವರ್ಷಗಳಾದ ಪ್ರಯುಕ್ತ ಸುರತ್ಕಲ್‌ ಬ್ಲಾಕ್‌ ಮತ್ತು ಗುರುಪುರ ಬ್ಲಾಕ್‌ಗಳ ಸಹಯೋಗದಲ್ಲಿ ಗಾಂಧಿ ಜಯಂತಿ ಆಚರಣೆ, "ಗಾಂಧಿ ಭಾರತ, ಗಾಂಧಿ ನಡಿಗೆ" ಕಾರ್ಯಕ್ರಮವು ಬುಧವಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್‌ ಅಲಿ ಅವರ ನೇತೃತ್ವದಲ್ಲಿ ಸುರತ್ಕಲ್‌ ನಲ್ಲಿ ನಡೆಯಿತು.
ವಿದ್ಯಾದಾಯಿನಿ ಶಾಲೆಯ ಬಳಿಯಿಂದ ಆರಂಭಗೊಂಡ "ಗಾಂಧಿ ಭಾರತʼ ಗಾಂಧಿ ನಡಿಗೆಯು ಸುರತ್ಕಲ್‌ ಪೇಟೆಯಲ್ಲಿ ಸಮಾವೇಶಗೊಂಡಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ನಾಯಕರು ಪುಷ್ಪಾರ್ಚನೆ ಗೈದು ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್‌ ಅಲಿ, ಸತ್ಯ ಪ್ರಾಣಿಕತೆಯ ಜನ್ಮ ದಿನವನ್ನು ಅಕ್ಟೋಬರ್ 2 ರಂದು ಮಾತ್ರ ಆಚರಿಸದೇ ಅವರ ಜೀವನ ತತ್ವವನ್ನು ಜೀವನ ಅಳವಡಿಸಿಕೊಂಡು ಪ್ರತೀ ದಿನ ಆಚರಿಸಬೇಕಿದೆ. ದೇಶಕ್ಕೆ ಗಾಂಧಿಯ ತತ್ವಾದರ್ಶಗಳು ಅಗತ್ಯವಾಗಿದ್ದು, ಅದರ ಪಾಲನೆಯಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಆದರೆ ವಿದೇಶಗಳೂ ಗಾಂಧೀಜಿಯವರ ಪ್ರೇರಣ ಪಡೆದು ಸ್ವಾತಂತ್ರ್ಯ ಗಹೋರಾಟಗಳನ್ನು ನಡೆಸಿದ್ದು, ಸುಮೃು 155 ದೇಶಗಳಲ್ಲಿ ಗಾಂಧಿಯ ಪ್ರತಿಮೆ ಇದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಗಾಂಧಿ ವಿಚಾರ ವೇದಿಕೆಯ ಡಾ. ಉದಯ ಕುಮಾರ್ ಇರ್ವತ್ತೂರು ಅವರು, ಅಹಿಂಸೆಯ ಪರಮ ಮೂರ್ತಿ ಮೂರು ಭಾರಿ ಜಿಲ್ಲೆಗೆ ಬಂದಿದ್ದರೂ ಅವರ ಆದರ್ಶಗಳ ಪಾಲನೆ ನಮ್ಮಲ್ಲಿ ಆಗುತ್ತಿಲ್ಲ. ಗಾಂಧಿಯಷ್ಟು ದೊಡ್ಡ ಸನಾತನಿ ದೇಶದಲ್ಲಿ ಯಾರೂ ಹುಟ್ಟಿಲ್ಲ. ಸತ್ಯವೇ ದೇವರು ಎಂದು ಸಾರಿದವರು ಅವರು. ಗಾಂಧಿ ಎಂದರೆ ಕೇವಲ ಅಹಿಂಸೆ ಸ್ವಾತಂತ್ರ್ಯ ಹೋರಾಟ ಮಾತ್ರವಲ್ಲ ಇದೇ ಭಾರತ ದೇಶದ ಶಕ್ತಿ ಎಂದರು.
ಸ್ವಾತಂತ್ರ್ಯಕ್ಕೂ ಪೂರ್ವದಲ್ಲಿ ಜಾತಿ-ಜಾತಿಗಳ ಮಧ್ಯೆ ಧರ್ಮ - ಧರ್ಮಗಳ ನಡುವೆ ನಡುವೆ ವಿಭಜನೆ ಮಾಡಿ ಬ್ರಿಟೀಶರು ಆಡಳಿತ ನಡೆಸುತ್ತಿದ್ದರು. ಆಗ ಹಿಂದೂ ಮುಸ್ಲಿಂ ಐಕ್ಯತೆಗೊಳ್ಳದಿದ್ದರೆ ದೇಶದಲ್ಲಿ ಏಕತೆ ಅಸಾಧ್ಯ ಎಂದಿದ್ದ ಪಾಪುವಿನ ಮಾತು ಇಂದಿಗೂ ಈಡೇರಿಲ್ಲ. ಗಾಂಧೀಜಿ ವಿದೇಶಗಳ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆ. ಅನಕ್ಷಸ್ಥರಿಂದ ದೇಶ ಹಾಳಾಗಿಲ್ಲ ಬದಲಾಗಿ ನಾವು ಪ್ರಶ್ನೆ ಮಾಡದಿರುವುದರಿಂದ ದೇಶ ಹಾಳಾಗಿದೆ‌. ಗಾಂಧಿ ತಾನು ಹುಟ್ಟದ ಊರು ದೇಶದಲ್ಲೇ ಅಪರಿಚಿತರಾಗುತ್ತಿದ್ದಾರೆ ಎಂದು ಡಾ. ಉದಯ ಕುಮಾರ್ ಇರ್ವತ್ತೂರು ಬೇಸರ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್ ಕುಮಾರ್, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ‌ ಕಂಬಳಿ, ಕೆಪಿಸಿಸಿ ವಕ್ತಾರೆ ಪ್ರತಿಭಾ ಕುಳಾಯಿ, ಕೆಪಿಸಿಸಿಯ ಪ್ರಥ್ವಿರಾಜ್, ಕೆಪಿಸಿಸಿ ಸದಸ್ಯ ಸದಾಶಿವ, ಸುರತ್ಕಲ್‌ ಬ್ಲಾಕ್‌ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಳಾಯಿ, ಮೂಡ ಸದಸ್ಯ ಅಬ್ದುಲ್ ರಹಿಮಾ್, ಮನಪಾ ಸದಸ್ಯ ಕಿಶೋರ್ ಶೆಟ್ಟಿ, ಜಲೀಲ್ ಬದ್ರಿ̧ಯಾ, ಮಮತಾ, ಬಿ.ಎಲ್. ಪದ್ಮನಾಭ ಕೋಟ್ಯಾನ್, ಯುಪಿ ಇಬ್ರಾಹೀಂ, ಅಬ್ದುಲ್ ಅಝೀಝ್ ಬಾಷಾ, ಕೃಷ್ಣ ಅಮೀನ್, ಗಿರೀಶ್ ಆಳ್ವ, ಅಬ್ದುಲ್ ಹಮೀದ್, ಎ.ಕೆ. ಅಶ್ರಫ್‌ ಮೊದಲಾದವರು ಉಪಸ್ಥಿತರಿದ್ದರು.
ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ ಸ್ವಾಗತಿಸಿದರು, ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರೆಹಮಾನ್‌ ಕುಂಜತ್ತಬೈಲ್‌ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು. ಸಭಾ ಕಾರ್ಯಕ್ರಮದ ಬಳಿಕ ಬೆಂಗಳೂರಿನಲ್ಲಿ ನಡೆಯುತ್ತಿದ್ದ "ಗಾಂಧಿ ಭಾರತ, ಗಾಂಧಿ ನಡಿಗೆ" ಕಾರ್ಯಕ್ರಮದ ನೇರಪ್ರಸಾರವನ್ನು ವೀಕ್ಷಿಸಿದರು.

Next Article