ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಗುಣಗಳಿಗೆ ಸೋಲದ ವ್ಯಕ್ತಿ ಜಗತ್ತಿನಲ್ಲಿ ಯಾರೂ ಇಲ್ಲ

01:30 AM Feb 22, 2024 IST | Samyukta Karnataka

ಬದಲಾವಣೆಯಾಗುತ್ತಿರುವ ದಿನಗಳಲ್ಲಿ ಸಂಸ್ಕೃತಿಯೂ ಬದಲಾಗುತ್ತಲೇ ಇದೆ. ಆದರೆ ಮೌಲ್ಯಗಳೂ ಕೂಡ ಬದಲಾವಣೆಗೊಳ್ಳುತ್ತಲಿವೆ ಎಂಬುದು ಅನ್ಯಸಂಸ್ಕೃತಿಯ ಪ್ರಭಾವಕ್ಕೆ ಒಳಗಾದಾಗ ಮಾತ್ರ. ಕುಟುಂಬ ವ್ಯವಸ್ಥೆ ಭಾರತದಲ್ಲಿ ಗಟ್ಟಿಯಾಗಿದೆ. ಕಾರಣ ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡ ಅನುರೂಪವಾಗಿರಬೇಕು ಎಂಬುದು ಮೂಲಮಂತ್ರ.
ಪ್ರತಿಯೊಬ್ಬರು ತಮ್ಮ ತಮ್ಮ ಕರ್ತವ್ಯಗಳನ್ನು ನಿಭಾಯಿಸಲೇಬೇಕು. ಅಂದಾಗ ನೆಮ್ಮದಿ ಇರುತ್ತದೆ. ಗಂಡ ಹೆಂಡಿರಲ್ಲಿ ಪ್ರತಿಷ್ಠೆಯ ವಿಷಯಗಳು ಬರಬಾರದು.
ಗಂಡನ ಪ್ರತಿಷ್ಠೆಗಳನ್ನು ಕಾಪಾಡುವದು ಅದಕ್ಕೆ ಪತ್ನಿಯಾದವಳ ಕರ್ತವ್ಯ. ಹಾಗೇಯೇ ಪ್ರತಿಯಾಗಿ ಪತಿಯೂ ಕೂಡ ಪತ್ನಿಯನ್ನು ತಕ್ಕಂತೆ ಆದರಿಸುತ್ತಾನೆ.
ಹದಿಬದಿಯ ಧರ್ಮದಲ್ಲಿ ದ್ರೌಪದಿಯು ಸತ್ಯಭಾಮೆಗೆ ಹೇಳುತ್ತಾಳೆ. ಗಂಡನು ಊಟ ಮಾಡದೇ ನಾನು ಊಟ ಮಾಡುವುದಿಲ್ಲ. ಗಂಡನು ಅಭ್ಯಂಗವನ್ನು ಮಾಡದೇ ನಾನು ಅಭ್ಯಂಗ ಮಾಡುವುದಿಲ್ಲ. ಪ್ರತಿಯೊಂದು ಕೆಲಸಗಳಲ್ಲಿಯೂ ನಾನು ಪತಿಯನ್ನು ಅನುಸರಿಸಿಯೇ ಇರುತ್ತೇನೆ. ಪತಿಯ ಇಂಗಿತವನ್ನು ಅರಿತು ಅವನಿಗೆ ಇಷ್ಟ್ಟವಾಗುವಂತೆ ಊಟವನ್ನು ಬಡಿಸಿ ಅನಂತರ ತಾನು ಊಟ ಮಾಡುತ್ತೇನೆ ಈ ಆದರ್ಶವನ್ನು ಇಟ್ಟುಕೊಂಡರೆ ಎಂತಹ ಗುಣವಿಲ್ಲದ ಹೆಣ್ಣೂ ಕೂಡ ಸಂಸಾರದಲ್ಲಿ ಗೆಲ್ಲುತ್ತಾಳೆ.
ಹೊರಗೆ ಹೋಗಿ ಮನೆಗೆ ಬಂದ ಗಂಡನನ್ನು ಹೇಗೆ ಕಾಣಬೇಕು. ಹೊಲ-ಗದ್ದೆಗಳಿಂದ ಮರಳಿ ಮನೆಗೆ ಬಂದಾಗ, ಕಾಡಿನಿಂದ ಮರಳಿ ಮನೆಗೆ ಬಂದಾಗ ಅಥವಾ ಬೇರೆ ಬೇರೆ ಊರುಗಳಿಗೆ ಹೋಗಿ ಮನೆಗೆ ಹಿಂದಿರುಗಿ ಬಂದಾಗ ಎದ್ದು ನಿಂತು ಪತಿಯನ್ನು ಸ್ವಾಗತ ಮಾಡುತ್ತೇನೆ. ಮನೆಯೊಳಗೆ ಬರುವ ಮೊದಲು ಪತಿಯ ಕಾಲುಗಳಿಗೆ ನೀರನ್ನು ಹಾಕಿ ತೊಳೆಯುತ್ತೇನೆ. ಆನಂದದ ನೋಟದಿಂದ ಪ್ರೀತಿಪೂರ್ವಕವಾದ ಒಳ್ಳೆಯ ಮಾತುಗಳಿಂದ ಆಹ್ವಾನ ಮಾಡಿ ಕುಳ್ಳಿರಿಸಿ ಉಪಚರಿಸುತ್ತೇನೆ. ದ್ರೌಪದಿಯ ಈ ಮಾತುಗಳಂತೆ ಪ್ರತಿಯೊಬ್ಬ ಸ್ತ್ರೀಯರೂ ಕೂಡ ಯಾವುದೋ ಊರಿನಿಂದ ಗಂಡನು ಮನೆಗೆ ಬಂದಾಗ ಆದರದಿಂದ ಕಾಣಬೇಕು. ಆಯಾಸಗೊಂಡು ಮನೆಗೆ ಬಂದಿರುತ್ತಾರೆ. ಅವರಿಗೆ ಆಯಾಸ ಪರಿಹಾರವಾಗುವಂತೆ ಉಪಚರಿಸಬೇಕು ಅಥವಾ ಮಾನಸಿಕವಾಗಿ ಆಯಾಸವನ್ನು ಹೊಂದಿರುತ್ತಾರೆ. ಅವರ ಮನಸ್ಸಿಗೆ ಮುದವನ್ನು ನೀಡಬೇಕು. ಹೀಗೆ ಆಯಾಸಗೊಂಡ ಪತಿಯನ್ನು ಉಪಚರಿಸುವುದರಿಂದ ಬಳಲಿದವನನ್ನು ಸಾಂತ್ವನ ಮಾಡುವುದರಿಂದ ರೋಗವು ಬಂದಾಗ ವಿಶೇಷವಾಗಿ ಉಪಚರಿಸುವುದರಿಂದ ಪತ್ನಿಯ ವಿಷಯದಲ್ಲಿ ಗಂಡನು ಸಂಪೂರ್ಣವಾಗಿ ಸಂತೃಪ್ತನಾಗುತ್ತಾನೆ. ಒಂದು ವೇಳೆ ಗಂಡನು ಕೆಲವು ದೋಷಗಳಿಂದ ಕೂಡಿದ್ದರೂ ಕೂಡ ಉತ್ತಮವಾದ ನಡೆವಳಿಕೆಗಳನ್ನು ಪಡೆದುಕೊಳ್ಳುತ್ತಾನೆ. ಗುಣಗಳಿಗೆ ಸೋಲದ ವ್ಯಕ್ತಿ ಜಗತ್ತಿನಲ್ಲಿ ಯಾರೂ ಇಲ್ಲ. ಆದ್ದರಿಂದ ಪತಿಯನ್ನು ಕೇವಲ ತನ್ನ ಗುಣಗಳಿಂದಷ್ಟೇ ವಶ ಮಾಡಿಕೊಳ್ಳಬೇಕು. ಮಾಟ ಮಂತ್ರಗಳಿಂದಲ್ಲ. ಔಷಧಿಯನ್ನು ಸೇವನೆ ಮಾಡಿಸುವುದರಿಂದಲೂ ಅಲ್ಲ.

Next Article