For the best experience, open
https://m.samyuktakarnataka.in
on your mobile browser.

ಗೊಂದಲಮಯವಾದ ಸಮಯಗಳಲ್ಲಿ

05:14 AM Sep 07, 2024 IST | Samyukta Karnataka
ಗೊಂದಲಮಯವಾದ ಸಮಯಗಳಲ್ಲಿ

ಭಗವದ್ಗೀತೆ ಹೊರಬಂದ ಹಿನ್ನೆಲೆ ಗೊಂದಲಮಯವಾದ ಈ ಸಮಯದಲ್ಲಿ ಇಂದಿಗೂ ಸಹ ನಾವು ಅದರ ಫಲವನ್ನು ಅನುಭವಿಸುತ್ತಿದ್ದೇವೆ ಅಲ್ಲವೆ? ಕೃಷ್ಣನು ಅರ್ಜುನನಿಗೆ ಯುದ್ಧಭೂಮಿಯಲ್ಲಿ ಬೋಧಿಸಲು ಪ್ರಾರಂಭಿಸಿದನು. ಎಲ್ಲವೂ ಚೆನ್ನಾಗಿದ್ದಾಗ ಏನನ್ನೂ ಬೋಧಿಸಲು ಹೋಗಲಿಲ್ಲ. ಅದಲ್ಲದೆ ಅರ್ಜುನನೂ ಸಹ ಏನನ್ನೂ ಕೇಳಲು ಸಿದ್ಧವಾಗಿರಲಿಲ್ಲ, ಏಕೆಂದರೆ ಕೃಷ್ಣನು ಕೇವಲ ತನ್ನ ಸ್ನೇಹಿತನೆಂದುಕೊಂಡಿದ್ದ ಅರ್ಜುನ. ಆದರೆ ಗೊಂದಲಮಯವಾದ ಸಮಯ ಬಂದಾಗ ಜ್ಞಾನವು ಅವಶ್ಯಕವಾಯಿತು.
ಏಕೆಂದರೆ ಇಂತಹ ಸಮಯಗಳಲ್ಲಿ ಸ್ಥಿರವಾದ, ಸ್ಪಷ್ಟವಾದ ಮನಸ್ಸು ಬಹಳ ಅವಶ್ಯಕ. ಇದರಿಂದ ವಿಷಯಗಳು ಹೇಗಿವೆಯೊ ಆ ರೀತಿ ಸರಿಯಾಗಿ ಗ್ರಹಿಸಬಹುದು ಮತ್ತು ಬುದ್ಧಿವಂತಿಕೆಯಿಂದ ನಡೆದುಕೊಳ್ಳಬಹುದು. ಇಂತಹ ಸಮಯದಲ್ಲಿ ಈ ಜ್ಞಾನ ಇಡೀ ಜಗತ್ತಿಗೆಂದು ಹೊರಬಂದಿತು. ಗೊಂದಲಮಯ ಸಮಯದಲ್ಲಿ ನಾವು ಮಾಡಬೇಕಾದ ಮೊದಲನೆಯ ವಿಷಯವೆಂದರೆ, ಇದು ಗೊಂದಲಮಯ ಪರಿಸ್ಥಿತಿಯೆಂದು ಗುರುತಿಸಿ ಸ್ವೀಕರಿಸಬೇಕು. ಪರಿಸ್ಥಿತಿಯನ್ನು ನಿರಾಕರಿಸುತ್ತ ಹೋದರೆ ಅದರ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವೇ ಇಲ್ಲ.
ಪರಿಸ್ಥಿತಿ ಹದಗೆಟ್ಟಿದೆಯೆಂದು ಸ್ವೀಕರಿಸಿದ ತಕ್ಷಣ ಭಾವನೆಗಳು ಶಾಂತವಾಗುತ್ತವೆ. ಹೀಗೇಕಾಯಿತು ಎಂದು ಕೇಳುತ್ತಲೇ ಕುಳಿತುಕೊಳ್ಳುವುದಿಲ್ಲ ನೀವು. ಇದರಿಂದ ಆಲೋಚಿಸುವ ಶಕ್ತಿ ಬರುತ್ತದೆ. ಪರಿಹಾರ ಹುಡುಕುವ ಸಾಮರ್ಥ್ಯ ಬರುತ್ತದೆ. ಸ್ವೀಕರಿಸಿದ ನಂತರ ವಿಷಯ ಇರುವುದೇ ಹಾಗೆ ಎಂದು ಕುಳಿತುಕೊಳ್ಳುವುದು. ಕ್ರಿಯಾಶೀಲರಾಗಬೇಕು! ಈ ಪರಿಸ್ಥಿತಿಯನ್ನು ನಿಭಾಯಿಸಬಲ್ಲಿರಿ ಎಂಬ ಆಂತರ್ಯದ ಶಕ್ತಿ ನಿಮ್ಮಲ್ಲೇಳಬೇಕು.
ಅರ್ಜುನ ತನ್ನಿಂದ ಏನೂ ಮಾಡಲು ಸಾಧ್ಯವಿಲ್ಲವೆಂದು ಅಳುತ್ತ ಕುಳಿತುಬಿಟ್ಟಾಗ ಕೃಷ್ಣನು ಅರ್ಜುನನ ಬೆನ್ನು ತಟ್ಟಿ, ಅವನ ಅಹಂಕಾರವನ್ನು ಎಬ್ಬಿಸಿ, ಈ ಪರಿಸ್ಥಿತಿಯನ್ನು ನೀನು ನಿಭಾಯಿಸಬಲ್ಲೆ. ಎದ್ದೇಳು! ಜನರು ನಿನ್ನ ಬಗ್ಗೆ ಏನೆಂದಾರು?' ಎಂದು ಪುಸಲಾಯಿಸಿದ. ಮಕ್ಕಳು, ಯುವಕರು ತಮ್ಮ ಪರಿಸ್ಥಿತಿಯನ್ನು ಕಂಡು ಹೆದರಿದಾಗ ಅವರಿಗೆ ಧೈರ್ಯ ನೀಡದೆ,ನೀನೊಬ್ಬ ಅಪ್ರಯೋಜಕ ! ನಿನ್ನಿಂದ ಏನೂ ಮಾಡಲು ಸಾಧ್ಯವಿಲ್ಲ!' ಎಂದು ಹೀಯಾಳಿಸಿದರೆ, ಅವರೊಳಗಿರುವ ಶಕ್ತಿ, ಆ ಆಂತರಿಕ ಸಾಮರ್ಥ್ಯ ಹೊರಗಡೆ ಅಭಿವ್ಯಕ್ತವಾಗುವುದೇ ಇಲ್ಲ.
ಅವರ ಆತ್ಮವಿಶ್ವಾಸವನ್ನು ಎಬ್ಬಿಸಬೇಕು. ಒಬ್ಬರ ಆತ್ಮಗೌರವ, ಆತ್ಮವಿಶ್ವಾಸ ಕಸಿದುಕೊಂಡರೆ ಸಾಕು, ಅವರು
ತರಕಾರಿಗಳಂತೆ ನಿಷ್ಪ್ರಯೋಜಕರಾಗಿಬಿಡುತ್ತಾರೆ. ಅವರ ಆತ್ಮವಿಶ್ವಾಸ, ಆತ್ಮಗೌರವವನ್ನು ಉತ್ತೇಜಿಸಿದರೆ ಗೊಂದಲಮಯ ಸಮಯದಲ್ಲೂ ಸೃಜನಶೀಲತೆ ಹೊರಬರುತ್ತದೆ.
ಸರಳವಾದ ವಿಷಯಗಳಿಂದ, ಸರಳವಾದ ಜನರಿಂದ, ಒಂದು ಮಗುವಿನಲ್ಲೂ ಕಲಿಯಲು ಸಿದ್ಧರಾದಾಗ ಸೃಜನಶೀಲತೆ ಹೊ ರಬರುತ್ತದೆ. ಕೊನೆಯದಾಗಿ ಅಂತರಜ್ಞಾನವಿರಲೇ ಬೇಕು. ಅಂತಃಸ್ಫುರಣೆ ಬರದಿದ್ದರೆ ನೀವು ನಿಜವಾಗಲೂ ಯಶಸ್ವಿಗಳಾಗಲು ಸಾಧ್ಯವಿಲ್ಲ. ಸ್ವಲ್ಪ ಸಂಗೀತ, ಸ್ವಲ್ಪ ತರ್ಕದಿಂದ ಜೀವನದಲ್ಲಿ ಅಂತಃಸ್ಫುರಣೆ ಉಂಟಾಗುತ್ತದೆ.