ಗೋವಾ ವಿಧಾನಸಭೆಯಲ್ಲಿ ಮಹದಾಯಿ ಪ್ರತಿಧ್ವನಿ
07:42 PM Aug 01, 2024 IST
|
Samyukta Karnataka
ಪಣಜಿ: `ನಾವು ಮಹದಾಯಿ ಪ್ರಕರಣದಲ್ಲಿ ಹಿಂದೆ ಬಿದ್ದಿದ್ದೇವೆ. ಅದಕ್ಕಾಗಿಯೇ ಕರ್ನಾಟಕಕ್ಕೆ ಮಹದಾಯಿ ನದಿ ನೀರು ಹರಿಸುವ ಪ್ರಕ್ರಿಯೆ ನಡೆಯುತ್ತಿದೆ. ಮಹದಾಯಿ ನದಿಯನ್ನು ಉಳಿಸುವುದು ಹೇಗೆ ಎಂಬ ಬಗ್ಗೆ ಕಟ್ಟುನಿಟ್ಟಾದ ಚರ್ಚೆ ನಡೆಯಬೇಕು. ಇಲ್ಲದಿದ್ದರೆ ಈ ಹೋರಾಟದಲ್ಲಿ ನಾವು ಸೋಲುತ್ತೇವೆ' ಎಂದು ಶಾಸಕ ಮೈಕಲ್ ಲೋಬೊ ವಿಧಾನಸಭೆಯಲ್ಲಿ ನುಡಿದರು.
ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಗೋವಾ ಮತ್ತು ಕರ್ನಾಟಕದ ನಡುವೆ ವಿವಾದವಿದೆ. ಆದರೆ ಈ ವಿವಾದವನ್ನು ರಾಜಕೀಯಗೊಳಿಸಲಾಗುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಮಹದಾಯಿ ಬಗ್ಗೆ ದೊಡ್ಡ ಭರವಸೆಗಳನ್ನು ನೀಡಲಾಗುತ್ತದೆ. ಇದರಿಂದ ಗೋವಾದಲ್ಲಿ ಗೊಂದಲ ಉಂಟಾಗಿದೆ. ಮಹದಾಯಿ ನದಿ ಉಳಿಸಲು ಗೋವಾದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಪ್ರತಿಭಟನೆಯಲ್ಲಿ ಸರ್ಕಾರವನ್ನು ಟೀಕಿಸಲಾಗಿದೆ ಎಂದು ಶಾಸಕ ಮೈಕಲ್ ಲೋಬೊ ಹೇಳಿದರು.
Next Article