ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಗೋ ವಧೆ ಮಾಫಿಯಾ: ಮಟ್ಟಹಾಕಿ ಜೈಲಿಗಟ್ಟಲು ಆಗ್ರಹ

03:53 PM Dec 18, 2024 IST | Samyukta Karnataka

ಬೆಳ್ತಂಗಡಿಯ ಚಾರ್ಮಾಡಿ ಮೃತ್ಯುಂಜಯ ಹೊಳೆಯ ಅನಾರು ಎಂಬಲ್ಲಿ ದನದ ತಲೆ ಚರ್ಮ ಇತ್ಯಾದಿ ತ್ಯಾಜ್ಯಗಳನ್ನು ತುಂಬಿಸಿದ ಹಲವು ಗೋಣಿಚೀಲಗಳನ್ನು ಮೃತ್ಯುಂಜಯ ನದಿಗೆ ಎಸೆದದ್ದು ಕಂಡುಬಂದಿದೆ. ಇದೇ ರೀತಿ ಹಲವು ಸಮಯದಿಂದ ಎಸೆಯಲಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ರಾಜ್ಯದಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2020 ಜಾರಿಯಲ್ಲಿದ್ದು ಗೋ ಹತ್ಯೆಗೆ ಏಳು ವರ್ಷ ಶಿಕ್ಷೆ ಹಾಗೂ 5 ಲಕ್ಷ ರೂಪಾಯಿವರೆಗೆ ದಂಡ ಇದೆ.
ನಮಗೆ ಸಿಕ್ಕಿದ ಮಾಹಿತಿಯಂತೆ ಚಾರ್ಮಾಡಿಯ ಆಸುಪಾಸಿನಲ್ಲಿ ಈ ಕಾಯ್ದೆ ಉಲ್ಲಂಘಿಸಿ ಗೋಮಾಂಸ ಮಾಡುವ ಬೃಹತ್ ಮಾಫಿಯಾ ಕಾರ್ಯವಸ ಗೊತ್ತಿದ್ದು ಆಸುಪಾಸಿನಲ್ಲಿ ಅಕ್ರಮ ಕಸಾಯಿ ಖಾನಗಳಲ್ಲಿ ಗೋವದೆ ಮಾಡಿ ಗೋಮಾಂಸವನ್ನ ಬೆಳ್ತಂಗಡಿ ಪುತ್ತೂರು ಮಂಗಳೂರು ಕಡೆ ಮಾರಾಟ ಮಾಡಲಾಗುತ್ತಿದೆ.
ಅಕ್ರಮ ಕಸಾಯಿ ಖಾನೆಗೆ ಗೋವುಗಳ ಅಕ್ರಮ ಸಾಗಾಟ,ಅಕ್ರಮ ವಧೆ,ಗೋಮಾಂಸ ಸಾಗಾಟ ಗೋಮಾಂಸ ಮಾರಾಟ ಎಲ್ಲವನ್ನು ನಿಲ್ಲಿಸಲು ಕಾನೂನಿನಲ್ಲಿ ಅವಕಾಶ ಇದ್ದು ಪೊಲೀಸ್ ಇಲಾಖೆಯ ನಿರ್ಲಕ್ಷವೇ ಇದಕ್ಕೆಲ್ಲ ಕಾರಣ ಆದ್ದರಿಂದ ಸಾಧ್ಯ ಇರುವ ಎಲ್ಲಾ ಕಡೆಗಳಲ್ಲಿ ಪೊಲೀಸರು ಧಾಳಿ ಮಾಡಿ ಅಕ್ರಮ ಸಾಗಾಟ ವಧಸ್ಥಳ ಗೋಮಾಂಸ ಸಾಗಾಟ ಮಾರಾಟಗಳನ್ನು ನಿಲ್ಲಿಸಲು ವಿಶೇಷ ಪೊಲೀಸ್ ಪಡೆ ರಚಿಸಬೇಕು.ಇದರ ಹಿಂದೆ ದೊಡ್ಡ ಮಾಫಿಯಾ ಇದ್ದು ಮಾಫಿಯಾದ ಜನರನ್ನು ಹಿಡಿದು ಜೈಲಿಗಟ್ಟಬೇಕು ವಧೆ ಮಾಡಿದ ಸ್ಥಳ ಗೋಸಾಗಾಟ ಮಾಡಿದ ವಾಹನಗಳನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಬೇಕು. ಆರೋಪಿಗಳನ್ನು ಸ್ಟೇಷನ್ ಜಾಮಿನಲ್ಲಿ ಬಿಡದೆ ಪೊಲೀಸ್ ಕಸ್ಟಡಿಗೆ "ತೆಗೆದುಕೊಂಡು ಮಾಂಸ ಎಲ್ಲೆಲ್ಲಿ ಮಾರಾಟವಾಗುತ್ತಿದೆ, ಗೋಗಳನ್ನು ಎಲ್ಲಿಂದ ತರಲಾಗಿದೆ" ಎಂಬಿತ್ಯಾದಿ ಬಗ್ಗೆ ಸರಿಯಾಗಿ ವಿಚಾರಿಣೆ ನಡೆಸಿ ಗೋವದೆ ಪೂರ್ತಿ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು .
ಧರ್ಮಸ್ಥಳ ಸ್ನಾನಘಟ್ಟವನ್ನು ಅಪವಿತ್ರ ಮಾಡುವ ಹುನ್ನಾರ
ಹೊಳೆಗೆ ಗೋಮಾಂಸ ತ್ಯಾಜ್ಯಗಳನ್ನು ಹಾಕಿದರೆ ಅದು ಧರ್ಮಸ್ಥಳದ ಸ್ನಾನಘಟ್ಟ ಕ್ಕೆ ಬರುವುದರಿಂದ ಅಲ್ಲಿ ಸಾವಿರಾರು ಶ್ರದ್ದಾಳು ಹಿಂದುಗಳು ಪವಿತ್ರ ಸ್ಥಾನ ಮಾಡುವಾಗ ನೀರನ್ನು ಅಪವಿತ್ರ ಗೊಳಿಸುವ ಹೊನ್ನಾರ ಇದು ಆಗಿರಬೇಕೆಂದು ಕಾಣುತ್ತಿದೆ ಆದ್ದರಿಂದ ಯಾವುದೇ ರೀತಿಯಲ್ಲಿ ಸ್ನಾನಘಟ್ಟ ಅಪವಿತ್ರವಾಗದಂತೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಬರದಂತೆ ಎಲ್ಲಾ ಕ್ರಮ ಕೈಗೊಳ್ಳಲು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಿಶ್ವ ಹಿಂದೂ ಪರಿಷತ್ ಆಗ್ರಹಿಸುತ್ತಿದೆ

Next Article