ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಗ್ರಾಹಕರ ಅಭಿರುಚಿಗೆ ತಕ್ಕಂತೆ KSDL ಉತ್ಪಾದನೆಯಲ್ಲಿ ತೊಡಗಿದೆ

07:32 PM Jan 20, 2024 IST | Samyukta Karnataka

ಬೆಂಗಳೂರು: ವಸ್ತುವಿನ ಗುಣಮಟ್ಟ ಹೆಚ್ಚಿಸುವ ಮತ್ತು ಗ್ರಾಹಕರ ಅಭಿರುಚಿಗೆ ತಕ್ಕಂತೆ KSDL ಉತ್ಪಾದನೆಯಲ್ಲಿ ತೊಡಗಿ ಲಾಭದಾಯಕವಾಗಿ ಪ್ರಗತಿ ಕಂಡಿದೆ
ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. ಕರ್ನಾಟಕ ಮತ್ತು ಮಾರ್ಜಕ ನಿಯಮಿತದ 21ನೂತನ ವೈವಿದ್ಯಮಯ ಉತ್ಪನ್ನಗಳನ್ನು ಲೋಕಾರ್ಪಣೆ ಗೊಳಿಸಿದರು.
ಸ್ಪರ್ಧಾತ್ಮಕ ಯುಗದಲ್ಲಿ ಖಾಸಗಿ ಸಂಸ್ಥೆಗಳ ಜತೆ ಪೈಪೋಟಿ ಮಾಡುವಂತಹ ಗುಣಮಟ್ಟವನ್ನು ನಾವು ಕಾಪಾಡಿ ಕೊಳ್ಳಬೇಕು. ಇದರಲ್ಲಿ KSDL ಯಶಸ್ಸು ಗಳಿಸಿದೆ. ಸಚಿವ ಎಂ.ಬಿ.ಪಾಟೀಲ್ ಅವರು KSDL ನ ಘನತೆ ಹೆಚ್ಚಿಸಿ ಲಾಭದಾಯಕ ಪ್ರಗತಿ ಕಾಣಿಸಿದ್ದಾರೆ ಎಂದು ಸಿ.ಎಂ ಮೆಚ್ಚುಗೆ ಸೂಚಿಸಿದರು. ಸರ್ಕಾರಿ ಸಂಸ್ಥೆ ಮತ್ತು ಸರ್ಕಾರಿ ಕಾರ್ಖಾನೆ ಎಂದರೆ ಯಾರೂ ಮೂಗು ಮುರಿಯದಂತಹ ರೀತಿಯಲ್ಲಿ ಪ್ರಗತಿ ಕಾಣಿಸಿ ಮಾದರಿಯಾಗಿ KSDL ಬೆಳವಣಿಗೆ ಕಂಡಿರುವುದಕ್ಕೆ ಎಲ್ಲರಿಗೂ ಮುಖ್ಯಮಂತ್ರಿಗಳು ಅಭಿನಂದಿಸಿದರು. KSDL ಸಂಸ್ಥೆಯ ಉತ್ಪನ್ನಗಳನ್ನು ನಕಲು ಮಾಡುವವರ ಮೇಲೆ ತೀವ್ರ ನಿಗಾ ವಹಿಸುವಂತೆ ಇದೇ ಸಂದರ್ಭದಲ್ಲಿ ಸಿಎಂ ಸೂಚಿಸಿದರು. ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್, KSDL ನ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಪ್ರಶಾಂತ್, KSDL consultant ರಜನೀಕಾಂತ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Next Article