ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಚಿಂತ್ಯಾಕ ಮಾಡುತ್ತಿದ್ದಿ ಚಿನ್ಮಯನಿದ್ದಾನೆ

03:20 AM Feb 07, 2024 IST | Samyukta Karnataka
PRATHAPPHOTOS.COM

ಭವದಲ್ಲಿ ಹುಟ್ಟಿದ ಪ್ರತಿ ಜೀವಿಗೂ ಭಯ ತಪ್ಪಿದ್ದಲ್ಲ. ಒಂದಿಲ್ಲ ಒಂದು ಆತಂಕ ಇದ್ದೇ ಇರುತ್ತದೆ. ಆತಂಕ ಭಯವಾಗಿ ಬದುಕನ್ನು ವಿಹಲ್ವಗೊಳಿಸುತ್ತದೆ. ವೈಚಾರಿಕ ಪ್ರಾಣಿ ಎಂದುಕೊಂಡ ಮನುಷ್ಯನ ಭಯ ಮಾತ್ರ ಮನೋವಿಕಾರ ಅಥವಾ ಅಶಕ್ತತನದ ಲಕ್ಷಣ. ಇಂಥ ಭಯದ ನಿವಾರಣೆಯಾಗಬೇಕು ಎಂದರೆ ತಿಳಿವಳಿಕೆ ಬೇಕು.
ಭಯಗಳು ಬಾರದಂತೆ ಮನುಷ್ಯ ಯಾವ ರೀತಿಯ ಪ್ರಯತ್ನವನ್ನು ಮಾಡಬೇಕೆಂದು ವೇದವ್ಯಾಸ ದೇವರು ತಿಳಿಸಿಕೊಡುತ್ತಾರೆ.
ಯಾವುದೊಂದು ಬೇಕಾದ ವಸ್ತು ದೂರ ವಾದರೂ ಶೋಕ ಅಥವಾ ಯಾವುದೋ ಒಂದು ವಸ್ತು ಬೇಡವಾದದ್ದು ಹತ್ತಿರ ಬಂದಾಗಲೂ ಭಯ, ಇದು ಮೂಢನ ಪಾಡು.
ನನ್ನ ಕರ್ಮಾನುಸಾರವಾಗಿ ಕಾಲಕಾಲಕ್ಕೆ ಭಗವಂತ ಶೋಕವನ್ನು ಆನಂದವನ್ನು ಕೊಡುತ್ತಾನೆ ಎಂದು ಅರಿಯಬೇಕು. ಎಷ್ಟು ಪ್ರಸಂಗಗಳಲ್ಲಿ ಬಹಳ ದೊಡ್ಡ ಭಯ ನಮಗೆ ಇರುತ್ತದೆ. ಅನಾಹುತ ವಾಗುವಂತಹ ಪ್ರಸಂಗ ಇರುತ್ತದೆ ಅದನ್ನು ಸುಲಭವಾಗಿ ದೇವರು ಪರಿಹರಿಸಿರುತ್ತಾನೆ. ದಾರಿಯಲ್ಲಿ ಹೋಗೋವಾಗ ಕೂದಲ ಎಳೆಯ ಅಂತರದಲ್ಲಿ ಅಫಘಾತ ಸಂಭವಿಸಿ ಹೆಸರು ಕೂಡ ಉಳಿಯದಂತೆ ದೊಡ್ಡ ದುರಂತ ಎದುರಾಗುವಾಗ ಜನ್ಮಾಂತರದಲ್ಲಿ ಮಾಡಿದ ಕರ್ಮ ಅನುಸಾರವಾಗಿ ಆ ದುರಂತದಲ್ಲಿ ಸತ್ತು ಹೋಗುವ ಒಂದು ಪರಿಸ್ಥಿತಿ ತಪ್ಪಿ ಹೋಗುತ್ತದೆ.
ಭಯಕೃತ್ ಭಯನಾಶನಃ
ಜನ್ಮಾಂತರದಲ್ಲಿ ಮಾಡಿದ ಕರ್ಮಗಳದ್ದು ವಿಚಿತ್ರವಾದ ರೀತಿ, ಅದು ದೇವರ ಗುಹ್ಯ.. ಯಾವುದೋ ಒಂದು ಪುಣ್ಯ, ಗುರು, ದೇವತೆಗಳ ಅನುಗ್ರಹ ಜೀವವನ್ನು ಕಾಪಾಡುತ್ತದೆ ತೈಜಸ ನಾಮಕ ಪರಮಾತ್ಮ ಅಥವಾ ಪ್ರಾಜ್ಞ ನಾಮಕ ಪರಮಾತ್ಮ ಚಾಲಕನಿಗೆ ಗಾಢ ನಿದ್ರೆನೋ ಅಥವಾ ಸಪ್ನಾವಸ್ಥೆಯನ್ನು ಕೊಟ್ಟು ಎರಡನೆಯ ಕ್ಷಣಕ್ಕೆ ಮತ್ತೆ ವಿಶ್ವನಾಮಕ ಪರಮಾತ್ಮ ಜಾಗೃತ ಪರಿಸ್ಥಿತಿ ಯನ್ನು ನೀಡಿ ಈ ಅನಾಹುತದಿಂದ ತಪ್ಪಿಸುತ್ತಾನೆ. ಅತಿ ಉಗ್ರವಾದ ಪಾಪವನ್ನು ಜೀವ ಮಾಡಿದ್ದರೆ ದುಃಖವನ್ನು ಅನುಭವಿಸಲೇಬೇಕಾಗುತ್ತದೆ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಕೆಲವೊಮ್ಮೆ ನಾವು ಮಾಡಿದ ಮಹಾ ಪಾಪಗಳು/ ಪುಣ್ಯಗಳ ಅನುಸಾರವಾಗಿ ಸುಖ ದುಃಖಗಳನ್ನು ದೇವರು ಕೊಡುತ್ತಾನೆ.ಚಿಂತ್ಯಾಕೆ ಮಾಡುತ್ತಿದ್ದಿ ಚಿನ್ಮಯನಿದ್ದಾನೆ ಎನ್ನುವಂತೆ.. ಹರಿವಾಯು ಗುರುಗಳ ಅನುಗ್ರಹದಿಂದ ಏನು ವಿಪತ್ತುಗಳು ಉಂಟೋ ಅವನ್ನೆಲ್ಲ ದೇವರ ನಾಮಸ್ಮರಣೆ ಅನುಸಂಧಾನ ಮಾಡಿ ಕೊಂಡದ್ದರಿಂದ ಭಯದಿಂದ ಪಾರಾಗಬಹುದು.

Next Article