ಚಿನ್ನ, ಬೆಳ್ಳಿ, ಬೆಲೆ ಕುಸಿತ
ಬೆಂಗಳೂರು: ಸತತ ಏರಿಕೆಗೊಂಡಿದ್ದ ಚಿನ್ನದ ಬೆಲೆ ಮಂಗಳವಾರ ಒಂದಿಷ್ಟು ಕುಸಿತಗೊಂಡಿದೆ. ಮಂಗಳವಾರ ಕೂಡ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದ್ದು, ೧೦೦ ಗ್ರಾಂ ೨೪ ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ೨,೨೦೦ ರೂಪಾಯಿ ಕುಸಿತವಾಗಿದೆ. ಬೆಳ್ಳಿ ಬೆಲೆ ಒಂದು ಕೆಜಿಗೆ ಒಂದೇ ದಿನ ೭,೫೦೦ ರೂಪಾಯಿ ಕುಸಿತ ಕಂಡಿದ್ದು ೮೬೦೦೦ ರೂಪಾಯಿಗೆ ಮಾರಾಟವಾಗುತ್ತಿದೆ. ಸೋಮವಾರ ೭,೧೧೫ ರೂಪಾಯಿ ಇದ್ದ ೨೨ ಕ್ಯಾರೆಟ್ ೧ ಗ್ರಾಂ ಚಿನ್ನದ ಬೆಲೆ ೨೦ ರೂಪಾಯಿ ಕುಸಿತ ಕಂಡಿದ್ದು, ೭೦೯೫ ರೂಪಾಯಿಗಳಂತೆ ಮಾರಾಟವಾಗುತ್ತಿದೆ. ೧೦ ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ ೨೦೦ ರೂಪಾಯಿ ಕುಸಿತ ಕಂಡಿದೆ. ಸೋಮವಾರ ೭೧,೧೫೦ ರೂಪಾಯಿ ಇದ್ದ ೧೦ ಗ್ರಾಂ ೨೨ ಕ್ಯಾರೆಟ್ ಚಿನ್ನದ ಬೆಲೆ ಮಂಗಳವಾರ ೭೦,೯೫೦ ರೂಪಾಯಿಗೆ ಕುಸಿದಿದೆ. ಸೋಮವಾರ ೭,೭೬೨ ರೂಪಾಯಿ ಇದ್ದ ಒಂದು ಗ್ರಾಂ ೨೪ ಕ್ಯಾರೆಟ್ ಚಿನ್ನದ ಬೆಲೆ ೨೨ ರೂಪಾಯಿ ಕಡಿಮೆಯಾಗಿದ್ದು, ಮಂಗಳವಾರ ೭,೭೪೦ ರೂಪಾಯಿಯಂತೆ ಮಾರಾಟವಾಗುತ್ತಿದೆ. ೧೦ ಗ್ರಾಂ ೨೪ ಕ್ಯಾರೆಟ್ ಚಿನ್ನದ ಬೆಲೆ ೨೨೦ ರೂಪಾಯಿ ಕಡಿಮೆಯಾಗಿದೆ. ೧೮ ಗ್ರಾಂ ಚಿನ್ನದ ಬೆಲೆ ಕೂಡ ಪ್ರತಿ ಗ್ರಾಂಗೆ ೧೭ ರೂಪಾಯಿ ಕುಸಿತವಾಗಿದೆ. ಸೋಮವಾರ ೫,೮೨೨ ರೂಪಾಯಿ ಇದ್ದ ಒಂದು ಗ್ರಾಂ ೧೮ ಕ್ಯಾರೆಟ್ ಚಿನ್ನದ ಬೆಲೆ ಮಂಗಳವಾರ ೫,೮೦೫ ರೂಪಾಯಿಗೆ ಕುಸಿತ ಕಂಡಿದೆ.
ಚಿನ್ನದ ಬೆಲೆ ಮತ್ತೆ ಕುಸಿಯುತ್ತಾ?: ಈಗಾಗಲೇ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ದರವನ್ನು ಮುಟ್ಟಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ೫-೭% ಕುಸಿತವನ್ನು ನಿರೀಕ್ಷೆ ಮಾಡಲಾಗಿದೆ.