ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಚುನಾವಣಾ ಅಖಾಡಲ್ಲಿ ಗೆದ್ದ ಫೋಗಟ್

02:03 PM Oct 08, 2024 IST | Samyukta Karnataka

ಹರಿಯಾಣ: ವಿನೇಶ್ ಫೋಗಟ್ ಅವರು ಜುಲಾನಾ ಕ್ಷೇತ್ರದಿಂದ 6000 ಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ.
ಹರಿಯಾಣದ ಜಿಂದ್ ಜಿಲ್ಲೆಯ ಜುಲಾನಾ ವಿಧಾನಸಭಾ ಕ್ಷೇತ್ರದಿಂದ ಗೆಲುವಿನ ಸನಿಹ ಇರುವ ವಿನೇಶ್ ಫೋಗಟ್ ಅವರನ್ನು ಹಿರಿಯ ಕುಸ್ತಿಪಟು ಮತ್ತು ಕಾಂಗ್ರೆಸ್ ನಾಯಕ ಬಜರಂಗ್ ಪುನಿಯಾ ಅಭಿನಂದಿಸಿದ್ದಾರೆ. ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ ಮತ ಎಣಿಕೆ ಇನ್ನೂ ನಡೆಯುತ್ತಿರುವಾಗಲೇ ವಿನೇಶ್ ಫೋಗಟ್ ಅವರನ್ನು ವಿಜಯಿ ಎಂದು ಘೋಷಿಸಲಾಗಿದೆ. ಕಳೆದ ಹತ್ತು ವರ್ಷಗಳಿಂದ ಹರಿಯಾಣ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಹರಿಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕಾಗಿ ಮತ ಎಣಿಕೆ ಮುಂದುವರೆದಿದೆ, ಎಲ್ಲಾ 90 ಸ್ಥಾನಗಳ ಮತ ಎಣಿಕೆ ನಡೆಯುತ್ತಿದೆ. ಇಡೀ ದೇಶದ ಕಣ್ಣು ಜೂಲಾನಾ ಸೀಟಿನ ಮೇಲೆ ನೆಟ್ಟಿದೆ, ಈ ಸೀಟು ಹರಿಯಾಣದ ಹಾಟ್ ಸೀಟ್‌ಗಳಲ್ಲಿ ಸೇರಿದೆ. ಈ ಕ್ಷೇತ್ರದಲ್ಲಿ ವಿನೇಶ್ ಫೋಗಟ್ ಕಣದಲ್ಲಿದ್ದಾರೆ. ಕೆಲವೊಮ್ಮೆ ವಿನೇಶ್ ಫೋಗಟ್ ಮುಂದೆ ಕಾಣಿಸಿಕೊಂಡರು ಮತ್ತು ಕೆಲವೊಮ್ಮೆ ಯೋಗೇಶ್ ಬೈರಾಗಿ ಜೂಲಾನಾದಲ್ಲಿ ಮುಂದೆ ಕಾಣಿಸಿಕೊಂಡರು. ಕಾಂಗ್ರೆಸ್ ಅಭ್ಯರ್ಥಿ ಕುಸ್ತಿಪಟು ವಿನೇಶ್ ಫೋಗಟ್ ಜೂಲಾನಾ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ, ಕೊನೆಯ ಸುತ್ತಿನ ಎಣಿಕೆಯಲ್ಲೂ ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಕ್ಯಾಪ್ಟನ್ ಯೋಗೇಶ್ ಬೈರಾಗಿಗಿಂತ 6000 ಮತಗಳಿಂದ ಗೆದ್ದಿದ್ದಾರೆ ಈ ಮೂಲಕ ಬೆಂಬಲಿಗರಲ್ಲಿ ಉತ್ಸಾಹವೂ ನಿರಂತರವಾಗಿ ಹೆಚ್ಚುತ್ತಿದೆ.

ಬಜರಂಗ್ ಪುನಿಯಾ ಅಭಿನಂದನೆ: ಜೂಲಾನಾದಲ್ಲಿ ಫೋಗಟ್ ವಿಜಯವನ್ನು ಸಮೀಪಿಸುತ್ತಿದ್ದಂತೆ, ಒಲಿಂಪಿಕ್ ಪದಕ ವಿಜೇತ ಮತ್ತು ಕಾಂಗ್ರೆಸ್ ನಾಯಕ ಬಜರಂಗ್ ಪುನಿಯಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು “ದೇಶದ ಮಗಳು ವಿನೇಶ್ ಫೋಗಟ್ ಅವರ ವಿಜಯಕ್ಕಾಗಿ ಅನೇಕ ಅಭಿನಂದನೆಗಳು. ಈ ಹೋರಾಟ ಕೇವಲ ಒಂದು ಜೂಲಾನಾ ಸ್ಥಾನಕ್ಕಾಗಿ ಅಲ್ಲ, ಇದು ಕೇವಲ 3-4 ಇತರ ಅಭ್ಯರ್ಥಿಗಳೊಂದಿಗೆ ಅಲ್ಲ, ಇದು ಕೇವಲ ಪಕ್ಷಗಳ ನಡುವಿನ ಹೋರಾಟವಲ್ಲ. ಈ ಹೋರಾಟ ದೇಶದ ಪ್ರಬಲ ದಮನಕಾರಿ ಶಕ್ತಿಗಳ ವಿರುದ್ಧವಾಗಿತ್ತು. ಮತ್ತು ವಿನೇಶ್ ವಿಜಯಶಾಲಿಯಾಗಿ ಹೊರಹೊಮ್ಮಿದರು ಎಂದಿದ್ದಾರೆ.

Tags :
#Bjp#Congress#HariyanaElectionResult#VineshPhogat#vineshpogat#win
Next Article