ಚೆಸ್‌ನಲ್ಲಿ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ ಅರ್ಜುನ್‌ಗೆ ಪ್ರಧಾನಿ ಶುಭ ಹಾರೈಕೆ
12:28 PM Oct 27, 2024 IST | Samyukta Karnataka
ನವದೆಹಲಿ: ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ನಂತರ ವಿಶೇಷ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅರ್ಜುನ್ ಎರಿಗೈಸಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಲೈವ್ ಚೆಸ್ ರೇಟಿಂಗ್‌ಗಳಲ್ಲಿ 2800 ಅಂಕಗಳನ್ನು ದಾಟಿದ್ದಕ್ಕಾಗಿ ಅರ್ಜುನ್ ಏರಿಗೈಸಿ ಅವರಿಗೆ ಅಭಿನಂದನೆಗಳು! ಇದೊಂದು ಅಪೂರ್ವ ಸಾಧನೆ. ಅವರ ಅಸಾಧಾರಣ ಪ್ರತಿಭೆ ಮತ್ತು ಪರಿಶ್ರಮ ನಮ್ಮ ಇಡೀ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡುತ್ತದೆ. ಇದು ಉತ್ತಮ ವೈಯಕ್ತಿಕ ಮೈಲಿಗಲ್ಲು ಆಗುವುದರ ಜೊತೆಗೆ, ಇನ್ನೂ ಅನೇಕ ಯುವಕರನ್ನು ಚೆಸ್ ಆಡಲು ಮತ್ತು ಜಾಗತಿಕ ವೇದಿಕೆಯಲ್ಲಿ ಮಿಂಚುವಂತೆ ಪ್ರೇರೇಪಿಸುತ್ತದೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ ಎಂದಿದ್ದಾರೆ.