For the best experience, open
https://m.samyuktakarnataka.in
on your mobile browser.

ಜನ್ ಧನ್ ಯೋಜನೆಗೆ 10 ವರ್ಷಗಳು

10:48 AM Aug 28, 2024 IST | Samyukta Karnataka
ಜನ್ ಧನ್ ಯೋಜನೆಗೆ 10 ವರ್ಷಗಳು

ಲಕ್ಷಾಂತರ ಭಾರತೀಯರನ್ನು ಸಬಲಗೊಳಿಸಿದೆ. ಈಗಾಗಲೇ 53.13 ಕೋಟಿ ಖಾತೆಗಳು ತೆರೆದಿದ್ದು, ಆರ್ಥಿಕ ಸಾಕ್ಷರತೆ ಹೆಚ್ಚಿಸಿ, ದೇಶದ ಬಡವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸಿದೆ.

ಬೆಂಗಳೂರು: ಜನ್ ಧನ್ ಯೋಜನೆಯು ಕೋಟ್ಯಂತರ ದೇಶವಾಸಿಗಳನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಇಂದು ದೇಶಕ್ಕೆ ಐತಿಹಾಸಿಕ ದಿನ ಜನ್ ಧನ್ ಯೋಜನೆಗೆ 10 ವರ್ಷಗಳಾಗಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು 2014 ರಲ್ಲಿ ಪ್ರಾರಂಭವಾದ ಜನ್ ಧನ್ ಯೋಜನೆ, ಬ್ಯಾಂಕಿಂಗ್ ಸೇವೆಗಳು, ವಿಮೆ ಮತ್ತು ಸಾಲದ ಸೌಲಭ್ಯತೆಯನ್ನು ಒದಗಿಸುವ ಮೂಲಕ ಲಕ್ಷಾಂತರ ಭಾರತೀಯರನ್ನು ಸಬಲಗೊಳಿಸಿದೆ. ಈಗಾಗಲೇ 53.13 ಕೋಟಿ ಖಾತೆಗಳು ತೆರೆದಿದ್ದು, ಆರ್ಥಿಕ ಸಾಕ್ಷರತೆ ಹೆಚ್ಚಿಸಿ, ದೇಶದ ಬಡವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸಿದೆ. ಇಂದು ದೇಶಕ್ಕೆ ಐತಿಹಾಸಿಕ ದಿನವಾಗಿದ್ದು (#10YearsOfJanDhan) ಈ ಸಂದರ್ಭದಲ್ಲಿ ಎಲ್ಲಾ ಫಲಾನುಭವಿಗಳಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಈ ಯೋಜನೆಯನ್ನು ಯಶಸ್ವಿಗೊಳಿಸಲು ಹಗಲಿರುಳು ಶ್ರಮಿಸಿದ ಎಲ್ಲಾ ಜನರಿಗೆ ಅಭಿನಂದನೆಗಳು. ಜನ್ ಧನ್ ಯೋಜನೆಯು ಕೋಟ್ಯಂತರ ದೇಶವಾಸಿಗಳನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವಲ್ಲಿ ಯಶಸ್ವಿಯಾಗಿದೆ, ವಿಶೇಷವಾಗಿ ನಮ್ಮ ಬಡ ಸಹೋದರ ಸಹೋದರಿಯರನ್ನು ಮತ್ತು ಗೌರವಯುತವಾಗಿ ಬದುಕುವ ಅವಕಾಶವನ್ನು ನೀಡುತ್ತದೆ ಎಂದಿದ್ದಾರೆ.

ಸರ್ಕಾರದ ಮಹತ್ವಪೂರ್ಣ ಯೋಜನೆಗಳಲ್ಲಿ ಒಂದಾದ ಬಡ ಕುಟುಂಬಗಳ ಜನರ ಹಣಕ್ಕೆ ಸುರಕ್ಷತೆ ಒದಗಿಸಿದ ಜನ್‌ಧನ್‌ ಯೋಜನೆ 10 ವರ್ಷಗಳನ್ನು ಪೂರೈಸಿದ್ದು ಇದುವರೆಗೂ 530000000 ಕ್ಕೂ ಹೆಚ್ಚು ಜನಧನ್ ಬ್ಯಾಂಕ್ ಖಾತೆಗಳು ಪ್ರಾರಂಭವಾಗಿದ್ದು, 23,12,35,00,00,000 ಮೊತ್ತವನ್ನು ಬಡ ಜನರು ಠೇವಣಿ ಇರಿಸಿದ್ದಾರೆ.

Tags :