ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಜಾತಿ ಜನಗಣತಿ ಜಾರಿ ಪರ ಬಿಜೆಪಿಯ ನಿಲುವು

03:41 PM Dec 19, 2023 IST | Samyukta Karnataka

ರಾಯಚೂರು: ಲಿಂಗಾಯತರು, ಒಕ್ಕಲಿಗರು ಸಮುದಾಯ ಜನಗಣತಿ ವಿರೋಧಿಸುತ್ತಿದ್ದಾರೆ ಎಂಬ ವಿಷಯಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ರಾಜಕಾರಣಿಗಳಿಗೆ ನಿಮ್ಮ ಸಮಾಜದ ಬಗ್ಗೆ ನಿಮಗೆ ಪ್ರೀತಿ ಇದ್ದರೆ , ಪಕ್ಷದಿಂದ ಹೊರಬಂದು ರಾಜೀನಾಮೆ ನೀಡಲಿ ಎಂದು ತಿಳಿಸಿದರು.
ಸಿದ್ದರಾಮಯ್ಯ ಸಿಎಂ ಆಗಿ ಇಷ್ಟು ವರ್ಷ ಆಯ್ತು ಯಾಕೆ ಜಾತಿ ಜನಗಣತಿ ಬಿಡುಗಡೆ ಮಾಡ್ತಿಲ್ಲ ? ಕಾಂಗ್ರೆಸ್‌ನವರು ಮಾಡಿದ ಕಿತಾಪತಿಯಿಂದ ಈಗ ಸ್ವಾಮೀಜಿ ಯಾವ ಜಾತಿಯವರು ಎಂದು ನೋಡಬೇಕಿದೆ ಎಂದು ದೂರಿದರು.
ಅವರವರ ಜಾತಿ ಪರವಾಗಿ ಸ್ವಾಮಿಗಳು ಇದ್ದಾರೆ.ಎಲ್ಲ ಸ್ವಾಮಿಗಳು ಈಗ ಎದ್ದು ಕೂತಿದ್ದಾರೆ‌. ಸಿದ್ಧರಾಮಯ್ಯನವರು ದೇವರಾಜು ಅರಸು ಬಿಟ್ಟರೆ ನಾನೆ ಎನ್ನುತ್ತಾರೆ ಎಂದು ಟೀಕಿಸಿದರು. ಬಸನಗೌಡ ಪಾಟೀಲ್ ಯತ್ನಾಳ ಸ್ವಪಕ್ಷದ ವಿರುದ್ಧ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಬಿಜೆಪಿ ಪಕ್ಷ ಆನೆ ಇದ್ದಂತೆ ಆನೆ ಹೋಗುವಾಗ ನಾಯಿ. ನರಿಗಳು ಬೋಗಳುತ್ತವೆ. ಯತ್ನಾಳ ಅವರದ್ದೇನು ಹೊಸದಲ್ಲ, ಯಾರನ್ನು ಬಿಟ್ಟಿದ್ದಾರೆ ಅವರು ಯಡಿಯೂರಪ್ಪ, ಬೊಮ್ಮಾಯಿ, ಶಟ್ಟರ್ ಅವರನ್ನೆ ಬಿಟ್ಟಿಲ್ಲ, ಇಂಥ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೆಜ್ ಆಗಿದೆ ಎಂದು ಹೇಳಿದರು.
ನಮ್ಮಲ್ಲಿ ತುಂಬಾ ಗುಂಪುಗಾರಿಕೆ ಇಲ್ಲ, ನಾಲ್ಕು ಜನ ಮಾಡಿದ್ದನ್ನು ಗುಂಪುಗಾರಿಕೆ ಅಂದರೆ ಸರಿಯಲ್ಲ. ಯತ್ನಾಳ, ಬೆಲ್ಲದ್, ಸೋಮಣ್ಣ ಅವರಿಗಾದ ಅಸಮಧಾನ ಬಹಿರಂಗ ಹೊರಹಾಕಿದ್ದಾರೆ ಎಂದು ಸ್ಪಷ್ಟಪಡಿಸಿದರು. ನಮ್ಮಲ್ಲಿ ತಪ್ಪಿದೆ, ಶಿಸ್ತು ಇಲ್ಲ, ರಿಪೇರಿ ಮಾಡೋಕೆ ಹಿರಿಯರಿದ್ದಾರೆ. ಇವರನ್ನು ಕರೆದು ಗೌರವದಿಂದ ಹೇಳಲಾಗುತ್ತಿದೆ ಎಂದು ತಿಳಿಸಿದರು.

Next Article