ಜೆಸ್ಕಾಂ ಅಧಿಕಾರಿ ಕಿರುಕುಳ: ಗುತ್ತಿಗೆದಾರ ಆತ್ಮಹತ್ಯೆಗೆ ಯತ್ನ
ಕೊಪ್ಪಳ: ಜೆಸ್ಕಾಂ ಎಇಇ ಕಿರುಕುಳದಿಂದಾಗಿ ಜೆಸ್ಕಾಂ ಗುತ್ತಿಗೆದಾರೊಬ್ಬರು ಆತ್ನಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಮುನಿರಾಬಾದ್ ಗ್ರಾಮದ ಜೆಸ್ಕಾಂ ಕಚೇರಿಯ ಆವರಣದಲ್ಲಿ ಶುಕ್ರವಾರ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆದಾರನನ್ನು ತಾಲೂಕಿನ ಗಿಣಗೇರಿ ಮೂಲದ ಜಯರಾಂ ಪತ್ತಾರ ಎಂದು ಗುರುತಿಸಲಾಗಿದೆ. ಅಲ್ಲದೇ ಕಿರುಕುಳದ ಬಗ್ಗೆ ಪತ್ರ ಬರೆದಿಟ್ಟದ್ದರು.
ಗುತ್ತಿಗೆದಾರ ಜಯರಾಂ ಪತ್ತಾರ ರೆಸಾರ್ಟೊಂದರ ವಿದ್ಯುತ್ ಕಾಮಗಾರಿ ಮಾಡಿದ್ದರು. ಅದರ ಬಿಲ್ ಪಾವತಿ ಮುಂಚೆಯೇ ಮುನಿರಾಬಾದ್ ಜೆಸ್ಕಾಂ ಎಇಇ ಸಂತೋಷ ಎನ್ನುವವರು ಜಯರಾಂ ಪತ್ತಾರ ಮಾಡಿದ್ದ ಅದೇ ಕಾಮಗಾರಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ರೆಸಾರ್ಟಿನವರು ಗುರುವಾರ ಒತ್ತಡ ಹೇರಿದ್ದಾರೆ.
ಈ ಬಗ್ಗೆ ಜೆಸ್ಕಾಂ ಎಇಇ ಪತ್ತಾರಗೆ ಮಾತನಾಡಿದರೆ ಸರಿಯಾಗಿ ಸ್ಪಂದಿಸಿಲ್ಲ. ಅಲ್ಲದೇ ಬಿಲ್ ಕೊಡದೇ ಆ ಫೈಲ್ ಕಳೆದಿದೆ ಎಂದು ಮುನಿರಾಬಾದ್ ಜೆಸ್ಕಾಂ ಎಇಇ ವಿಳಂಬ ಮಾಡುತ್ತಾ, ಕಿರುಕುಳ ನೀಡುತ್ತಿದ್ದಾರೆ. ಇದಕ್ಕೆ ಬೇಸತ್ತು ಗುತ್ತಿಗೆದಾರರ ಆ್ಯಸಿಡ್ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ನಗರದ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಕಳೆದ ೨೫ ವರ್ಷಗಳಿಂದಲೂ ಜಯರಾಂ ಪತ್ತಾರ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ.
ಈ ಕುರಿತು ಕೊಪ್ಪಳ ಪೊಲೀಸ್ ಠಾಣೆಯಲ್ಲಿ ಗುತ್ತಿಗೆದಾರ ಜಯರಾಂ ಪತ್ತಾರ ಪತ್ನಿ ದೂರು ನೀಡಿದ್ದು, ನ್ಯಾಯಾಲಯದ ಅನುಮತಿ ಪಡೆದು, ಪೊಲೀಸರು ಎಫ್ಐಆರ್ ಮಾಡಲಿದ್ದಾರೆ.