ಜೇನು ಹುಳು ಕಡಿದು ರೈತ ಸಾವು
07:55 PM Jan 22, 2025 IST
|
Samyukta Karnataka
ಕುಂದಗೋಳ: ಜೇನು ಹುಳು ಕಡಿದು ರೈತ ಮೃತಪಟ್ಟ ಘಟನೆ ಬುಧವಾರ ಪಟ್ಟಣದ ಹೊರ ವಲಯದ ಬೆನಕನಹಳ್ಳಿ ರಸ್ತೆಯಲ್ಲಿ ನಡೆದಿದೆ.
ಗಂಗಪ್ಪ ಕುಂದಗೋಳ(65) ಮೃತಪಟ್ಟ ರೈತ. ಸುಭಾಸ ಹೋಳಿ ಹಾಗೂ ಮೃತಪಟ್ಟ ಗಂಗಪ್ಪ ಅವರ ಎತ್ತು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬುಧವಾರ ಬೆಳಿಗ್ಗೆ 10ಗಂಟೆ ಹೊತ್ತಿಗೆ ಗಂಗಪ್ಪ ಕುಂದಗೋಳ ಅವರು ಅವರ ಹೊಲದಲ್ಲಿನ ಗಿಡಕ್ಕೆ ಎತ್ತು ಕಟ್ಟುವಾಗ ಜೇನು ಹುಳುಗಳು ಎದ್ದಿವೆ. ಎತ್ತಿಗೆ ಜೇನು ಕಡಿಯುವ ವೇಳೆ ಅವುಗಳನ್ನು ಓಡಿಸಲು ಗಂಗಪ್ಪ ಮತ್ತು ಸುಭಾಸ ಅವರು ಪ್ರಯತ್ನಿಸಿದ್ದಾರೆ.
ಈ ವೇಳೆ ಎತ್ತಿಗೆ ಕಡಿಯುತ್ತಿದ್ದ ಜೇನುಗಳು ಈ ಇಬ್ಬರಿಗೆ ಮುಕ್ಕರಿ ಕಡಿದಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದರು. ಗಂಗಪ್ಪ ಅವರಿಗೆ ಹೆಚ್ಚಿನ ಪ್ರಮಾಣದ ಗಾಯಗಳಾಗಿದ್ದರಿಂದ ಪಟ್ಟಣದ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದರು. ಕುಂದಗೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Article