For the best experience, open
https://m.samyuktakarnataka.in
on your mobile browser.

ಅಂಬಾನಿ ಪುತ್ರನ ಕೈಗಡಿಯಾರದ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!

11:08 PM Mar 05, 2024 IST | Samyukta Karnataka
ಅಂಬಾನಿ ಪುತ್ರನ ಕೈಗಡಿಯಾರದ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ

ನವದೆಹಲಿ: ಗುಜರಾತಿನ ಜಾಮ್‌ನಗರದಲ್ಲಿ ರಿಲಯನ್ಸ್ ಉದ್ಯಮದ ಮಾಲೀಕ ಮುಕೇಶ್ ಅಂಬಾನಿ ಪುತ್ರ ಅನಂತ್ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವದ ಮೂರು ದಿನಗಳ ಅದ್ಧೂರಿ ಸಮಾರಂಭ ವೈಭವದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಮಾರ್ಚ್ ೧ ರಿಂದ ೩ರ ತನಕ ನಡೆದ ಈ ಸಮಾರಂಭ ಇಡೀ ವಿಶ್ವದ ಗಮನ ಸೆಳೆಯಿತು. ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಅಗ್ರ ಉದ್ಯಮಿಗಳು, ಬಾಲಿವುಡ್, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯಾತಿಗಣ್ಯರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸ್ವತಃ ಮುಕೇಶ್ ಅಂಬಾನಿ ತಮ್ಮೆಲ್ಲ ವ್ಯವಹಾರದ ಜಂಟಾಟ ಮರೆತು ಮೂರು ದಿನ ಸಮಾರಂಭದ ಸ್ಥಳದಲ್ಲಿದ್ದರು. ನಃ ಭೂತೋ ನಃ ಭವಿಷ್ಯತಿ ಎಂಬತೆ ನಡೆದ ಈ ಕಾರ್ಯಕ್ರಮಕ್ಕೆ ಅಂಬಾನಿ ಸ್ವರ್ಗವನ್ನೇ ಧರೆಗಿಳಿಸಿದ್ದರು. ಎಲ್ಲ ಗಣ್ಯರಿಗೆ ಬಗೆಬಗೆಯ ಭಕ್ಷ್ಯಗಳಿಂದ ಕೂಡಿದ ಔತಣಕೂಟ, ಅಚ್ಚುಕಟ್ಟು ವ್ಯವಸ್ಥೆಗೆ ಅಂಬಾನಿ ಸಾವಿರ ಕೋಟಿ ರೂ. ಗಳನ್ನು ವೆಚ್ಚ ಮಾಡಿದ್ದಾರೆ.
ಈ ಸ್ಮರಣೀಯ ಕಾರ್ಯಕ್ರಮದಲ್ಲಿ ಅನಂತ್ ಅಂಬಾನಿ ಧರಿಸಿದ್ದ ಬೆಲೆಬಾಳುವ ಉಡುಪಿನ ಜೊತೆಗೆ ಐಷಾರಾಮಿ ಕೈಗಡಿಯಾರವೂ ಎಲ್ಲರ ಮನ ಸೆಳೆಯಿತು. ಅಮೆರಿಕದಿಂದ ಆಗಮಿಸಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಾಗತಿಕ ಜಾಲತಾಣ ಫೇಸ್‌ಬುಕ್‌ನ ಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ದಂಪತಿ ಸಹ ಈ ಬೆಲೆಬಾಳುವ ಗಡಿಯಾರ ಕಂಡು ಅಚ್ಚರಿಯಿಂದ ಕಣ್ಣರಳಿಸಿದ್ದುಂಟು. ಸಾಮಾಜಿಕ ಜಾಲತಾಣಗಳಲ್ಲಿ ಗಡಿಯಾರದ ಚಿತ್ರ ವೈರಲ್ ಆಗಿದೆ. ಈ ಗಡಿಯಾರದ ಬೆಲೆ ಒಂದೆರಡು ಕೋಟಿ ರೂ.ಗಳಲ್ಲ. ಇದರ ಬೆಲೆಯಲ್ಲಿ ವೈಭವದ ರೋಲ್ಸ್ ರಾಯ್ಸ್ನ ಎರಡು ಕಾರುಗಳನ್ನು ಖರೀದಿಸಬಹುದಂತೆ. ರೋಲ್ಸ್ ರಾಯ್ಸ್ ಕಾರಿನ ಬೆಲೆ ಈಗ ೬ ರಿಂದ ೭ ಕೋಟಿ ರೂ.ಗಳು. ಅದರಂತೆ ಈ ಐಷಾರಾಮಿ ಗಡಿಯಾರದ ಬೆಲೆ ಕನಿಷ್ಠ ೧೫ ಕೋಟಿ ರೂ.ಗಳೆಂದು ಲೆಕ್ಕಾಚಾರ ಹಾಕಲಾಗಿದೆ.
ಜಗತ್‌ಪ್ರಸಿದ್ಧ ಗಡಿಯಾರ ತಯಾರಕ ಸಂಸ್ಥೆ ರಿಚರ್ಡ್ ಮಿಲ್ಲೆ ತಯಾರಿಸಿರುವ ಈ ಐಷಾರಾಮಿ ಗಡಿಯಾರ ವಿಶ್ವದ ದುಬಾರಿ ಎನಿಸಿದೆ.