ಅಭಿವೃದ್ಧಿಯ ಅಸಲಿ ಮಾದರಿ "ಕರ್ನಾಟಕ ಮಾಡೆಲ್"
ಬೆಂಗಳೂರು: ಅಭಿವೃದ್ಧಿಯ ಅಸಲಿ ಮಾದರಿಯಾಗಿ "ಕರ್ನಾಟಕ ಮಾಡೆಲ್" ಹೊರಹೊಮ್ಮುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಬಿಜೆಪಿ ನಾಯಕರು ಜಪಿಸುತ್ತಿದ್ದ ಗುಜರಾತ್ ಮಾಡೆಲ್ - ನಕಲಿ ಎಂದು ದೇಶಕ್ಕೆ ತಿಳಿಯಿತು, ಯುಪಿ ಮಾಡೆಲ್ - ದ್ವೇಷಕ್ಕೆ ಮಾತ್ರ ಮಾಡೆಲ್ ಎಂದು ರಾಜ್ಯದ ಜನತೆ ತಿರಸ್ಕರಿಸಿದರು. ಅಭಿವೃದ್ಧಿಯ ಅಸಲಿ ಮಾದರಿಯಾಗಿ "ಕರ್ನಾಟಕ ಮಾಡೆಲ್" ಹೊರಹೊಮ್ಮುತ್ತಿದೆ.
ಉತ್ತರ ಪ್ರದೇಶದ ಸಾರಿಗೆ ಅಧಿಕಾರಿಗಳ ನಿಯೋಗವು ಕರ್ನಾಟಕದ ಸಾರಿಗೆ ವ್ಯವಸ್ಥೆಯ ಸಮರ್ಥ ಕಾರ್ಯವೈಖರಿಯ ಬಗ್ಗೆ ಅರಿಯಲು ಬಿಎಂಟಿಸಿಗೆ ಭೇಟಿ ನೀಡಿ ರಾಜ್ಯ ಸಾರಿಗೆ ಇಲಾಖೆ ಅಳವಡಿಸಿಕೊಂಡಿರುವ ವಿವಿಧ ವಿನೂತನ ವ್ಯವಸ್ಥೆಗಳ ಮಾಹಿತಿ ಪಡೆದರು.
ಇತರ ರಾಜ್ಯಗಳಿಗಷ್ಟೇ ಅಲ್ಲ, ಸ್ವತಃ ಕೇಂದ್ರ ಸರ್ಕಾರಕ್ಕೆ, ಪ್ರಧಾನಿ ಮೋದಿಯವರನ್ನೂ ಕರ್ನಾಟಕ ಮಾಡೆಲ್ ಪ್ರೇರೇಪಿಸಿದೆ ಎನ್ನುವುದಕ್ಕೆ ಅವರು ಅಪಹರಿಸಿದ "ಗ್ಯಾರಂಟಿ" ಪದವೇ ಸಾಕ್ಷಿ! ಐಟಿ ,ಬಿಟಿ ಕ್ಷೇತ್ರದಲ್ಲಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ, ಅರ್ಥವ್ಯವಸ್ಥೆಯಲ್ಲಿ, ತೆರಿಗೆ ಸಂಗ್ರಹದಲ್ಲಿ ಈಗಾಗಲೇ ನಾವು ನಂ1 ಸ್ಥಾನದಲ್ಲಿದ್ದೇವೆ. ನಮ್ಮ ಸರ್ಕಾರ ಕರ್ನಾಟಕವನ್ನು ಇನ್ನೂ ಹತ್ತು ಹಲವು ಕ್ಷೇತ್ರಗಳಲ್ಲಿ ದೇಶಕ್ಕೆ ಮಾದರಿ ರಾಜ್ಯವನಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸುತ್ತಿದೆ ಎಂದಿದ್ದಾರೆ.