ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಆಳ್ವಾಸ್ ವಿರಾಸತ್‌ಗೆ ಕಲಾತಂಡಗಳ ಮೆರವಣಿಗೆಯ ಮೆರಗು

09:20 PM Dec 14, 2023 IST | Samyukta Karnataka

ಮೂಡುಬಿದಿರೆ: ಈ ಬಾರಿಯ ಆಳ್ವಾಸ್ ವಿರಾಸತ್‌ನಲ್ಲಿ 100 ಕಲಾ ತಂಡಗಳ 3000ದಷ್ಟು ಕಲಾವಿದರ ಸಾಂಸ್ಕೃತಿಕ ಮೆರವಣಿಗೆಯ ಮೆರಗು ಪ್ರೇಕ್ಷಕರ ಮನಗೆದ್ದಿದೆ.
ರಾಜೇಂದ್ರದಾಸ್ ತಂಡದಿಂದ ಶಂಖವಾದನ, ದಾಸಯ್ಯ ದೇವರಾಜು ಮ್ಯೆಸೂರು, ಹರೀಶ್ ಮೂಡುಬಿದಿರೆ ತಂಡದ ಕೊಂಬು, ಹರೀಶ್ ಮೂಡಬಿದಿರೆ ತಂಡದಿಂದ ರಣಕಹಳೆ ಬೂದಿಯಪ್ಪ ಶಿವಮೊಗ್ಗ ತಂಡ, ಮಂಜು ಮೈಸೂರು ದೇವರಾಜು ಮಂಡ್ಯ,ಗಣಪತಿ ದಿವಾಕರ್ ಹಿರಿಯಡ್ಕ ಕಹಳೆ ವಾದನ, ಗಣೇಶ ಕುಂದಾಪುರ ಕೊರಗರ ಡೋಲು ದೇವರಾಜು ಮಂಡ್ಯ ತಂಡದಿಂದ ನಂದೀಧ್ವಜ ರಂಜಿತ್ ಪರ್ಕಳಘಟೋತ್ಕಜ, ಹರೀಶ್ ಮೂಡುಬಿದಿರೆ ಊರಿನ ಚೆಂಡೆ ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳಿಂದ ತಂಡದಿಂದ ತಟ್ಟಿರಾಯ, ಸ್ಯಾಕ್ಸೋಫೋನ್, ಕೊಡೆಗಳು, ಪೂರ್ಣಕುಂಭಗಳು, ಲಂಗ ದಾವಣಿ, ಅಪ್ಸರೆಯರು, ಯಕ್ಷಗಾನ ವೇಷ, ಉಮಾನಾಥ ಅಶ್ವಥಪುರ ತಂಡದಿಂದ ನಾಗಸ್ವರ, ಕಿಂಗ್ ಕೋಂಗ್ ದೀಪಕ್ ಶೆಟ್ಟಿ, ಕಿಶೋರ್ ಉಡುಪಿ ತಂಡದಿಂದಗೂಳಿ ಕಟ್ಟಪ್ಪ, ಕಿಶೋರ್ ಉಡುಪಿ ತಂಡದಿಂದ ಆಂಜನೇಯ ವಾನರ ಸೇನೆ, ಕೇರಳದ ದೇವರ ವೇಷ ಪ್ರಜ್ವಲ್ ಮಂಗಳೂರು, ತೆಯ್ಯಮ್ ಉಡುಪಿ ಪ್ರಭು ಇವೆಂಟ್ಸ್, ಆಳ್ವಾಸ್ ಬ್ಯಾಂಡ್ ಸೆಟ್, ಎನ್‌ಸಿಸಿ-ನೇವಲ್, ಎನ್‌ಸಿಸಿ-ಆರ್ಮಿ, ಎನ್.ಸಿ.ಸಿ-ಏರ್ ಫೋರ್ಸ್‌
ಸ್ಕೌಟ್ಸ್‌ಗೈಡ್ಸ್ ರೋವರ‍್ಸ್, ರೆಂಜರ್ಸ್ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 125ಕ್ಕೂ ಹೆಚ್ಚು ಕಲಾತಂಡಗಳು ಸರತಿ ಸಾಲಿನಲ್ಲಿ ಆಳ್ವಾಸ್ ಹೈಸ್ಕೂಲ್ ಬಳಿಯಿಂದ ಹೊರಟು ಪುತ್ತಿಗೆ ವನಜಾಕ್ಷಿ ಶ್ರೀಪತಿ ಭಟ್ ಬಯಲು ರಂಗಮಂದಿರ ವರೆಗೆ ಸಾಗಿತು.

ವಿಶೇಷ ಆಕರ್ಷಣೆ:
ವೇದಘೋಷಗಳು, ಭಜನ್‌ಗಳು, ಪುಷ್ಪಪಲ್ಲಕ್ಕಿಗಳು ಮಂಗಳವಾದ್ಯಗಳೊಂದಿಗೆ ವಿಘ್ನನಿವಾರಕ ವಿನಾಯಕ, ಸರಸ್ವತಿ, ಶ್ರೀಲಕ್ಷ್ಮೀ, ಹನುಮಂತ, ಶ್ರೀರಾಮ ಶ್ರೀ ಕೃಷ್ಣಾದಿ ಆರೂಢ ದೇವರ ಸಾಂಸ್ಕೃತಿಕ ರಥ ಸಂಚಲನ ಮತ್ತು ರಥಾರತಿ ವಿಶೇಷ ಆಕರ್ಷಣೆಯಾಗಿ ಎಲ್ಲರ ಗಮನ ಸೆಳೆಯಿತು.
ಹೆಜ್ಜೆ ಹಾಕಿದ 5 ವರ್ಷದ ಹುಡುಗಿ ಹೃನ್ಮಯ್:
ಮರಗಾಲು ತಂಡದಲ್ಲಿ ಉಡುಪಿ ಕುರ್ಕಾಲಿನ ಹೃನ್ಮಯ್ ಹೆಜ್ಜೆ ಹಾಕಿದ್ದು ಸಭಿಕರ ಮನಸೆಳೆದಳು. ಮರಗಾಲು ಹುಲಿವೇಷದಲ್ಲಿ ಪರಿಣತಿ ಪಡೆದಿರುವ ಬಾಲ‌ಪ್ರತಿಭೆ ಕಳೆದ ಎರಡು ವರ್ಷಗಳಿಂದ ಉಡುಪಿ ಪರ್ಯಾಯ, ಕೃಷ್ಣಾಷ್ಠಮಿ ಸೇರಿದಂತೆ ವಿವಿಧಡೆ ಮರಗಾಲು, ಹುಲಿವೇಷ ತಂಡದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನಗೆದ್ದಿದ್ದಾಳೆ.

Next Article