For the best experience, open
https://m.samyuktakarnataka.in
on your mobile browser.

ಕೀರ್ತಿ ಇದ್ದರೂ ಅಪಕೀರ್ತಿಗೆ ಒಳಗಾದ ಚಾಲೆಂಜಿಂಗ್ ಸ್ಟಾರ್

04:58 AM Jun 12, 2024 IST | Samyukta Karnataka
ಕೀರ್ತಿ ಇದ್ದರೂ ಅಪಕೀರ್ತಿಗೆ ಒಳಗಾದ ಚಾಲೆಂಜಿಂಗ್ ಸ್ಟಾರ್

ಬೆಂಗಳೂರು: ಕೀರ್ತಿ ಇದ್ದರೂ ಅಪಕೀರ್ತಿಗೆ ಪದೇ, ಪದೇ ಸುದ್ದಿಯಾಗುವ ನಟ ದರ್ಶನ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ತನ್ನದೇ ಅಭಿಮಾನಿಯೊಬ್ಬನನ್ನು, ಇನ್ನಿತರ ಅಭಿಮಾನಿಗಳು ದರ್ಶನ್ ಸಮ್ಮುಖದಲ್ಲಿಯೇ ಹೊಡೆದು ಕೊಲೆ ಮಾಡಿದ್ದರಿಂದ ದರ್ಶನ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿತ್ರದುರ್ಗ ಮೂಲದ ದರ್ಶನ್ ಅಭಿಮಾನಿ ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ದರ್ಶನ್, ಅವರ ಆಪ್ತೆ ಪವಿತ್ರಗೌಡ ಸೇರಿದಂತೆ ೧೩ ಜನರು ಲಾಕಪ್ ಸರಳಿನ ಹಿಂದೆ ಇದ್ದಾರೆ.
ಯಾವ ಉದ್ದೇಶವೂ ಇರಲಿಲ್ಲ
ದರ್ಶನ್ ಆಪ್ತೆ ಪವಿತ್ರಗೌಡ ಅವರ ಇನಸ್ಟಾಗ್ರಾಂಗೆ ಸಂದೇಶ ಕಳುಹಿಸಿದ್ದೇ ದೊಡ್ಡ ತಪ್ಪಾಗಿ ಕಂಡಿದೆ.ಆತನನ್ನು ಚಿತ್ರದುರ್ಗದಿಂದ ಅಪಹರಿಸಿ ರಾಜರಾಜೇಶ್ವರಿನಗರದ ಗೋದಾಮಿಗೆ ತಂದು ಥಳಿಸುತ್ತಿರುವ ಸಂದರ್ಭದಲ್ಲಿ, ನಾನು ಅವರಿಗೆ ಸಂದೇಶ ಕಳಿಹಿಸಿದ್ದರ ಹಿಂದೆ ಯಾವ ಉದ್ದೇಶವೂ ಇಲ್ಲ. ದರ್ಶನ್-ವಿಜಯಲಕ್ಷ್ಮೀ ಮಧ್ಯೆ ಯಾಕೆ ತಂದಿಡುತ್ತಿದ್ದೀರಿ ಎಂದು ಸಂದೇಶ ಕಳುಹಿಸಿದ್ದೆ ಎಂದು ಹೇಳುತ್ತಿದ್ದರೂ ಆತನ ಮಾತನ್ನು ಯಾರೂ ಕೇಳಿಸಿಕೊಳ್ಳದೇ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ4.
ಆಗಿದ್ದೇನು?: ಪವಿತ್ರಗೌಡಳಿಗೆ ಪದೇ ಪದೇ ಸಂದೇಶಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಪವಿತ್ರಗೌಡ ತನ್ನ ಆಪ್ತ ಸಹಾಯಕ ಪವನ್‌ಗೆ ವಿಷಯ ತಿಳಿಸಿದ್ದಾರೆ. ಪವನ್ ದರ್ಶನ್ ಅವರ ಮುಂದೆ ಅಶ್ಲೀಲ ಸಂದೇಶದ ವಿಷಯ ಪ್ರಸ್ತಾಪ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಘು ಅಲಿಯಾಸ್ ರಘುನಾಥ್ ಅವರ ಮೂಲಕ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿಯನ್ನು ಜೂ.೧೫ ರಂದು ಮಧ್ಯಾಹ್ನ ಅಪಹರಿಸಿಕೊಂಡು ಬೆಂಗಳೂರಿಗೆ ಕರೆತಂದಿದ್ದಾರೆ. ಆರ್.ಆರ್.ನಗರದ ಪಟ್ಟಣಗೇರಿಯಲ್ಲಿರುವ ಜಯಣ್ಣ ಮಾಲೀಕತ್ವದ ಗೋದಾಮಿನಲ್ಲಿ ನಟ ದರ್ಶನ್, ಅವರ ಬಾಡಿಗಾರ್ಡ್ ಮತ್ತು ಅವರ ಪಟಾಲಂಗಳು ಫುಟ್ಬಾಲ್ ಮಾದರಿಯಲ್ಲಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ನಾನು ದರ್ಶನ್ ಅಭಿಮಾನಿ ಎಂದು ಹೇಳಿಕೊಂಡರೂ ಸಿಗರೇಟ್‌ನಿಂದ ಕೈಕಾಲುಗಳಿಗೆ ಸುಟ್ಟು, ಕಬ್ಬಿಣದ ರಾಡ್, ಸೀಟ್‌ಬೆಲ್ಡ್ನಿಂದ ಹೊಡೆದು ಕೊಲೆ ಮಾಡಿದ್ದಾರೆ.
ಸ್ಕಾರ್ಪಿಯೋ ಕಾರಿನಲ್ಲಿ ಮೃತದೇಹ ಸಾಗಣೆ
ದರ್ಶನ್ ಆಪ್ತರ ಸ್ಕಾರ್ಪಿಯೋ ಕಾರಿನಲ್ಲಿ ಮೃತದೇಹವನ್ನು ಭಾನುವಾರ ರಾತ್ರಿ (ಜೂ.೯) ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿ ಚರಂಡಿಯಲ್ಲಿ ಎಸೆದು ಹೋಗಿದ್ದಾರೆ. ಸೋಮವಾರ ಬೆಳಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವೈದ್ಯಕೀಯ ವರದಿಯಲ್ಲಿ ಹೊಡೆದು ಕೊಲೆ ಮಾಡಿರುವುದು ತಿಳಿದಿದೆ.
೬ ದಿನ ಪೊಲೀಸ್ ಕಸ್ಟಡಿಗೆ
೧೩ ಜನರನ್ನು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನಂತರ ನ್ಯಾಯಾಲಯ ಆರೋಪಿಗಳ ವಿಚಾರಣೆ ನಡೆಸಿ ಹೆಚ್ಚುವರಿ ವಿಚಾರಣೆಗೆ ೬ ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಮಾಡಿದೆ. ಈ ವೇಳೆ ನ್ಯಾಯಾಧೀಶರ ಮುಂದೆ ದರ್ಶನ್ ಕಣ್ಣೀರು ಹಾಕಿದರು.
ನಾಲ್ವರ ವಿಚಾರಣೆ ಬಳಿಕ ಹೆಸರು ಬಹಿರಂಗ
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಕರೆ ಮಾಡಿರುವ ಆರೋಪಿಗಳು, ವ್ಯಕ್ತಿಯೋರ್ವನನ್ನು ಕೊಲೆ ಮಾಡಿರುವುದಾಗಿ ಹೇಳಿಕೊಂಡು ಠಾಣೆಗೆ ಹಾಜರಾಗುತ್ತಿದ್ದೇವೆ ಎಂದು ಹಾಜರಾಗಿದ್ದಾರೆ. ಡಿಸಿಪಿ ಗಿರೀಶ್, ಎಸಿಪಿ ಚಂದನ್ ಎಂಬುವರು ನಾಲ್ವರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಒಬ್ಬೊಬ್ಬರು ಒಂದು ರೀತಿಯ ಹೇಳಿಕೆ ನೀಡಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸತು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ೭ ಜನರ ಹೆಸರು ಬಾಯಿಬಿಟ್ಟಿದ್ದಾರೆ. ಏಳು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ನಟ ದರ್ಶನ್ ಸ್ನೇಹಿತೆಗೆ ಮೇಸೆಜ್ ಮಾಡಿದ್ದಕ್ಕೆ ಹಲ್ಲೆ ಮಾಡಲಾಗಿದೆ. ಈ ವೇಳೆ ದರ್ಶನ್ ಸಹಿತ ಇದ್ದರು ಎಂದು ಬಾಯಿಬಿಟ್ಟಿದ್ದಾರೆ. `ಡೇವಿಲ್' ಸಿನೆಮಾಗೆ ಸೂಟಿಂಗ್‌ಗೆ ಮೈಸೂರಿಗೆ ತೆರಳಿದ್ದ ದರ್ಶನ್‌ನನ್ನು ಮಂಗಳವಾರ ಬೆಳಗ್ಗೆ ೮.೩೦ಕ್ಕೆ ಖಾಸಗಿ ಹೋಟೆಲ್‌ನಲ್ಲಿ ಪೊಲೀಸರು ಬಂಧಿಸಿ, ಬೆಂಗಳೂರಿಗೆ ಕರೆತಂದಿದ್ದಾರೆ.
ಆರೋಪ ಸಾಬೀತಾದರೆ ಶಿಕ್ಷೆಯೇನು
ಅಭಿಮಾನಿಯನ್ನೇ ಕೊಲೆ ಮಾಡಿದ ಆರೋಪದ ಮೇಲೆ ದರ್ಶನ್ ಅವರನ್ನು ಬಂಧಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೦೨ರ ಅಡಿ ಕೊಲೆಯ ಅಪರಾಧ ಮತ್ತು ಕೊಲೆಗೆ ಶಿಕ್ಷೆಯನ್ನು ವ್ಯಾಖ್ಯಾನಿಸುತ್ತದೆ. ಐಪಿಸಿಯ ಸೆಕ್ಷನ್ ೩೦೨ರ ಅಡಿಯಲ್ಲಿ ಕೊಲೆಗೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆಯಾಗಿದೆ. ಪ್ರತಿ ಪ್ರಕರಣದ ಸತ್ಯ ಮತ್ತು ಸಂದರ್ಭಗಳ ಆಧಾರದ ಮೇಲೆ ಶಿಕ್ಷೆಯನ್ನು ನಿರ್ಧರಿಸುವ ವಿವೇಚನೆಯನ್ನು ನ್ಯಾಯಾಲಯ ಹೊಂದಿದೆ. ಈ ಪ್ರಕರಣದಲ್ಲಿ ಬಂಧಿಸಿದ ಆರೋಪಿಯನ್ನು ಸುಲಭವಾಗಿ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸಾಧ್ಯವಿಲ್ಲ ಮತ್ತು ಪ್ರಕರಣವನ್ನು ಒಳಗೊಂಡಿರುವ ಕಕ್ಷಿದಾರರ ನಡುವೆ ನ್ಯಾಯಾಲಯದ ಹೊರಗೆ ಇತ್ಯರ್ಥವಾಗುವುದಿಲ್ಲ.