ನಿರ್ವಾಹಕಿ ಮೇಲೆ ಹಲ್ಲೆ :ಪೋಲಿಸ್ ಠಾಣೆಯಲ್ಲಿ ದೂರು
ಇಳಕಲ್ : ನಗರದ ಬಸ್ ಘಟಕದ ನಿರ್ವಾಹಕಿ ಮೇಲೆ ಪ್ರಯಾಣಿಕರು ನಡೆಸಿದ ಹಿನ್ನೆಲೆಯಲ್ಲಿ ನಿರ್ವಾಹಕಿ ಗಾಯಗೊಂಡಿದ್ದು ಅವಳನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ದೂರನ್ನು ಶಹರ್ ಪೋಲಿಸ್ ಠಾಣೆಯಲ್ಲಿ ನೀಡಲಾಗಿದೆ.
ಇಳಕಲ್ ಶಹಪೂರ ಬಸ್ ನಲ್ಲಿ ಈ ಘಟನೆ ನಡೆದಿದ್ದು ಮೊದಲಿಗೆ ನಗರದ ರಿಲಯನ್ಸ್ ಪೆಟ್ರೋಲ್ ಬಂಕ್ ಬಳಿ ಪ್ರಯಾಣಿಕರು ಮತ್ತು ನಿರ್ವಾಹಕಿ ಮಧ್ಯ ವಾಗ್ವಾದ ನಡೆದು ಅಲ್ಲಿ ಹಲ್ಲೆ ಮಾಡಿದರು ಎಂದು ಹುನಗುಂದ ಪೋಲಿಸ್ ಠಾಣೆಯಲ್ಲಿ ದೂರು ನೀಡಲು ಹೋಗಿದ್ದಾರೆ ಆದರೆ ಚುನಾವಣೆ ಫಲಿತಾಂಶದ ಗದ್ದಲದಲ್ಲಿ ಇದ್ದ ಪೋಲಿಸರು ಸಮಾಧಾನ ಮಾಡಿ ಕಳಿಸಿದ್ದಾರೆ ಅಲ್ಲಿಂದ ಬಸ್ ತಾಳಿಕೋಟಿ ಪಟ್ಟಣದ ಬಳಿ ಹೋದಾಗ ಮತ್ತೇ ಅಲ್ಲಿ ಪ್ರಯಾಣಿಕರು ನಡೆಸಿದ ಹಲ್ಲೆಯಿಂದಾಗಿ ತೀವ್ರವಾಗಿ ಗಾಯಗೊಂಡ ನಿರ್ವಾಹಕಿ ಶರಣಮ್ಮ ಬಾರಡ್ಡಿ ತಾಳಿಕೋಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಲ್ಲಿಂದ ನಿರ್ವಾಹಕಿಯನ್ನು ಇಳಕಲ್ ಗೆ ಕರೆದುಕೊಂಡು ಬಂದು ಇಲ್ಲಿನ ಸರಕಾರಿ ಆಸ್ಪತ್ರೆಗೆ ಸೇರಿಸಲಾಯಿತು ನಂತರ ಪೋಲಿಸ್ ಠಾಣೆಯಲ್ಲಿ ದೂರು ನೀಡಲಾಯಿತು ಆದರೆ ಆ ಸಮಯದಲ್ಲಿ ಪಿಎಸ್ ಐ ಇಲ್ಲದ ಕಾರಣ ಬುಧವಾರದಂದು ಮುಂಜಾನೆ ಘಟಕದ ಸಿಬ್ಬಂದಿ ಮಹಿಳಾ ನಿರ್ವಾಹಕಿಯರ ಜೊತೆಗೆ ಪೋಲಿಸ್ ಠಾಣೆಗೆ ಹೋದರು.ಅಲ್ಲಿಂದ ಬಂದ ಸಾರಿಗೆ ಸಿಬ್ಬಂದಿ ಕಣ್ಣಿಗೆ ಹಲ್ಲೆ ಮಾಡಿದ ಕೆಲವು ಪ್ರಯಾಣಿಕರು ಕಂಡಾಗ ಅವರ ಜೊತೆಗೆ ವಾಗ್ವಾದಕ್ಕೆ ಇಳಿದರು. ವಾಗ್ವಾದ ಗದ್ದಲದ ಪ್ರಮಾಣಕ್ಕೆ ಹೋದಾಗ ಕೆಲವರು ಪ್ರಯಾಣಿಕರ ಪರವಾಗಿ ಬಂದು ಲಗೇಜ್ ಹಾಕುವಾಗ ನಿರ್ವಾಹಕಿ ವಿರೋಧ ವ್ಯಕ್ತ ಪಡಿಸಿದ್ದಲ್ಲದೇ ಜಾತಿ ಹಿಡಿದು ಬೈದಿದ್ದಾರೆ ನಾವೂ ದೂರನ್ನು ನೀಡುತ್ತೇವೆ ಎಂದು ಹೇಳಿದರು.
ಮಹಿಳಾ ನಿರ್ವಾಹಕಿ ನಡೆದ ಘಟನೆಯ ಬಗ್ಗೆ ಮೇಲಾಧಿಕಾರಿಗಳ ಜೊತೆಗೆ ಚರ್ಚಿಸಲಾಗಿದೆ ಕಾನೂನು ಕ್ರಮ ಕೈಗೊಳ್ಳಲು ಅವರು ಆದೇಶಿಸಿದ್ದಾರೆ ಮುಂದಿನ ಕ್ರಮ ಕೈಗೊಳ್ಳಲಾಗುವದು ಪ್ರಯಾಣಿಕರ ಹಿತದೃಷ್ಟಿಯಿಂದ ಯಾವುದೇ ಬಸ್ ಸಂಚಾರ ಅವ್ಯವಸ್ಥೆ ಆಗದಂತೆ ನೋಡಿಕೊಳ್ಳಲಾಗುವದು
-ಜಿ ಎಸ್ ಬಿರಾದಾರ ಘಟಕ ವ್ಯವಸ್ಥಾಪಕ