ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮನೆ ಬಿದ್ದು ಎರಡು ಮಕ್ಕಳ ದಾರುಣ ಸಾವು

03:39 PM May 31, 2024 IST | Samyukta Karnataka

ಇಳಕಲ್ : ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಮನೆಯ ಛತ್ತು ಕುಸಿದು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಶುಕ್ರವಾರದಂದು ಮುಂಜಾನೆ ನಡೆದಿದೆ.
ಗ್ರಾಮದ ೧೨ ವರ್ಷದ ಗೀತಾ ಈಶ್ವರಯ್ಯ ಆದಾಪೂರಮಠ ಮತ್ತು ಅವಳ ತಮ್ಮ ಹತ್ತು ವರ್ಷದ ರುದ್ರಯ್ಯ ಈಶ್ವರಯ್ಯ ಅದಾಪೂರಮಠ ಇಬ್ಬರೂ ಮನೆಯಲ್ಲಿ ಆಡುತ್ತಾ ಕುಳಿತಾಗ ಛತ್ತು ಆಕಸ್ಮಿಕವಾಗಿ ಕುಸಿದು ಬಿದ್ದಿದ್ದರಿಂದ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ವಿಚಿತ್ರವೆಂದರೆ ಗ್ರಾಮದಲ್ಲಿ ವಿಪರೀತ ಬಿಸಿಲು ಇದ್ದು ಮಳೆಯು ಸಹ ನಾಲ್ಕೈದು ದಿನಗಳ ಹಿಂದೆ ಆಗಿತ್ತು ಆದರೆ ಇಂದು ಆಕಸ್ಮಿಕವಾಗಿ ಮನೆಯ ಛತ್ತು ಕುಸಿದು ಮಕ್ಕಳು ಸಾವಿಗೀಡಾಗಿದ್ದಾರೆ.ಮನೆಯಲ್ಲಿ ಇತರ ಕುಟುಂಬಸ್ಥರು ಯಾರೂ ಇರಲಿಲ್ಲ ಎಂದು ಹೇಳಲಾಗಿದೆ.
ಇಳಕಲ್ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪಿಎಸ್ ಐ ಮಲ್ಲು ಸತ್ತಿಗೌಡರ ತನಿಖೆ ನಡೆಸಿದ್ದಾರೆ.ಮಕ್ಕಳ ಶವಪರೀಕ್ಷೆ ಇಳಕಲ್ ಸರಕಾರಿ ಆಸ್ಪತ್ರೆಯಲ್ಲಿ ಮಾಡಲಾಯಿತು.
ಸ್ಥಳಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಅಧಿಕಾರಿಗಳು ಭೇಟಿ ನೀಡಿ ಕುಟುಂಬಸ್ಥರಿಗೆ ಸ್ವಾಂತನ ಹೇಳಿದ್ದಾರೆ.

ಶಾಸಕ ಕಾಶಪ್ಪನವರ ಅವರಿಂದ ಕುಟುಂಬಸ್ಥರಿಗೆ ಸ್ವಾಂತನ: ಮನೆಯ ಛತ್ತು ಕುಸಿದು ಇಬ್ಬರು ಮಕ್ಕಳು ಮೃತರಾದ ಕುಟುಂಬಸ್ಥರ ಮನೆಗೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿ ನೀಡಿ ಸ್ವಾಂತನ ಹೇಳಿದರು.
ಈಶ್ವರಯ್ಯ ಆದಾಪೂರಮಠರ ಮನೆಗೆ ತಹಸೀಲ್ದಾರ ಸತೀಶ್ ಕೂಡಲಗಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಮುರಳಿಧರ ದೇಶಪಾಂಡೆ ಮತ್ತಿತರರ ಜೊತೆಗೆ ಭೇಟಿ ಮಾಡಿ ಈಶ್ವರಯ್ಯ ಅವರಿಗೆ ಧೈರ್ಯದಿಂದ ಇರಲು ಹೇಳಿದರು.
ಸರಕಾರದಿಂದ ಸಿಗಬಹುದಾದ ಎಲ್ಲಾ ರೀತಿಯ ಪರಿಹಾರವನ್ನು ಕೊಡಿಸುವ ಭರವಸೆ ನೀಡುವ ಜೊತೆಗೆ ಆದ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

Next Article