ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮೋದಿ ಪ್ರಮಾಣವಚನದ ದಿನ ಹೋಳಿಗೆ ಊಟ

12:56 AM Jun 08, 2024 IST | Samyukta Karnataka

ರಾಣೇಬೆನ್ನೂರ: ನರೇಂದ್ರ ಮೋದಿ ಅವರು ೩ನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ದಿನ ಅವರ ಅಭಿಮಾನಿಯೊಬ್ಬ ಸಾರ್ವಜನಿಕರಿಗೆ ಉಚಿತ ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದಾನೆ.
ಹಲಗೇರಿ ಮೋದಿ ಕ್ಯಾಂಟೀನ್ ಮಾಲೀಕ ವೀರೇಶ ಉಜ್ಜನಗೌಡ್ರ ಈ ಅಭಿಮಾನಿಯಾಗಿದ್ದು, ಜ. ೯ರಂದು ಮಧ್ಯಾಹ್ನ ೧೨ ಗಂಟೆಯಿಂದಲೇ ಊಟ ಬಡಿಸಲಾಗುವುದು. ಹೋಳಿಗೆ, ಎರಡು ತರಹದ ಪಲ್ಯೆ, ಅನ್ನ ಸಾಂಬಾರು ತಯಾರು ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇವರು ೨೦೧೯ರಲ್ಲೂ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ೪ ಸಾವಿರ ಜನರಿಗೆ ಉಚಿತ ಉಪಹಾರ ಕಲ್ಪಿಸಿದ್ದರು. ಈ ಬಾರಿಯೂ ೪ ಸಾವಿರ ಜನರಿಗೆ ಹೋಳಿಗೆಯೂಟ ಬಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Next Article