ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ವೀಣಾ ಕಾಶಪ್ಪನವರ ನಡೆ ಇಂದು ತೀರ್ಮಾನ: ಸಭೆಯಲ್ಲಿ ಸಮಾಜದ ಶಾಸಕರುಗಳು ಭಾಗಿ..?

12:02 PM Mar 24, 2024 IST | Samyukta Karnataka

ಬಾಗಲಕೋಟೆ:
ಕಾಂಗ್ರೆಸ್ ಟಿಕೆಟ್ ವಂಚಿತರಾಗಿರುವ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಅವರ ಮುಂದಿನ ನಡೆ ಬಗ್ಗೆ ತೀರ್ಮಾನಿಸಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯದಲ್ಲಿ ರವಿವಾರ ಸಮಾಜದ ಮಹತ್ವದ ಸಭೆ ಜರುಗಲಿದೆ.
ನವನಗರದ ಸೆಕ್ಟರ್ ೬೩ನೇ ಸೆಕ್ಟರ್‌ನ ಕಾಶಪ್ಪನವರ ನಿವಾಸದಲ್ಲಿ ಜರುಗ ಸಭೆಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟಿçÃಯ ಅಧ್ಯಕ್ಷ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಸಹ ಭಾಗಿಯಾಗಲಿದ್ದಾರೆ. ವಿಜಯಾನಂದ ಕಾಶಪ್ಪನವರ ದಂಪತಿಗಳು ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟ ನಡೆದಾಗ ಮುಂಚೂಣಿಯಲ್ಲಿದ್ದರು. ಹೀಗಾಗಿ ತಮಗೆ ಟಿಕೆಟ್ ತಪ್ಪುವ ವೇಳೆ ಅವರು ಬಸವಜಯಮೃತ್ಯುಂಜಯ ಶ್ರೀಗಳ ಮೊರೆ ಹೋಗಿದ್ದರು. ಶ್ರೀಗಳು ಸಹ ಬಹಿರಂಗವಾಗಿಯೇ ವೀಣಾ ಪರ ಬ್ಯಾಟಿಂಗ್ ನಡೆಸಿದ್ದರು.
ಕಳೆದ ಚುನಾವಣೆಯಲ್ಲಿ ಸೋತ ನಂತರ ವೀಣಾ ಕಾಶಪ್ಪನವರ ಅವರು ಮನೆಯಲ್ಲಿ ಕೂರದೆ ನಿರಂತರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಏಕಾಏಕಿ ಹೈಕಮಾಂಡ್ ಅವರ ಹೆಸರು ಕೈಬಿಟ್ಟ ನಂತರ ಅವರು ತೀವ್ರವಾಗಿ ನೊಂದುಕೊAಡಿದ್ದು, ಮುಂದೆ ಬಂಡಾಯ ಸ್ಪರ್ಧೆ ಮಾಡಬೇಕೆ ಅಥವಾ ಪಕ್ಷದಲ್ಲಿ ಮುಂದವರಿಯಬೇಕೆ ಎಂಬುದು ಸಾರ್ವಜನಿಕರೇ ತಿಳಿಸಲಿ ಅದಕ್ಕಾಗಿ ಸೆರಗುಯೊಡ್ಡುವೆ ಎಂದು ಹೇಳಿದ್ದರು.
ಇನ್ನು ಸಭೆಯಲ್ಲಿ ಶಾಸಕರಾದ ವಿನಯ ಕುಲಕರ್ಣಿ, ಅಶೋಕ ಮನಗೂಳಿ, ಎಚ್.ಎಸ್.ಶಿವಶಂಕರ, ಕೊಪ್ಪಳದ ಮಾಜಿ ಸಂಸದ ಶಿವರಾಮೇಗೌಡ, ಹೂವಿನಹಡಗಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪನವರ, ಅಪ್ಪುಗೌಡ ಪಾಟೀಲ ಭಾಗಿಯಾಗಲಿದ್ದು, ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಲಿಂಗಾಯತ ಪಂಚಮಸಾಲಿ ಯುವ ಘಟಕದ ಜಿಲ್ಲಾಧ್ಯಕ್ಷ ಮಂಜುನಾಥ ಪುರತಗೇರಿ ಪಂಚಮಸಾಲಿ ಸಮಾಜದ ಪದಾಧಿಕಾರಿಗಳಿಗೆ ಸಂದೇಶ ಕಳುಹಿಸಿದ್ದಾರೆ.

Next Article