ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹೊಸ ಜಗತ್ತಿನ ಮಂಗಗಳ ಆಗಮನ

04:54 PM Nov 09, 2023 IST | Samyukta Karnataka

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಅಳಿವಿನಂಚಿನಲ್ಲಿರುವ ತೋಳಗಳ ಸೇರ್ಪಡೆಯಾಗಿವೆ. ಪ್ರಾಣಿ ವಿನಿಮಯ ಯೋಜನೆಯಲ್ಲಿ ಆಂಧ್ರ ಪ್ರದೇಶದ ವಿಶಾಖಪಟ್ಟಣದ ಮೃಗಾಲಯದಿಂದ ಒಂದು ಜತೆ ತೋಳ ಪಿಲಿಕುಳ ಮೃಗಾಲಯಕ್ಕೆ ತರಿಸಲಾಗಿದೆ.
ಹೊಸ ಜಗತ್ತಿನ ಮಂಗಗಳೆಂದು ಕರೆಯಲ್ಪಡುವ ೪ ಜತೆ ಅಳಿಲು ಮಂಗ ಮಾರ್ಮಸೆಟ್, ಟಾಮರಿಂನ್‌ಗಳು ಕೂಡಾ ಸೇರ್ಪಡೆಯಾಗಿದ್ದು, ಇವು ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಿ ಕಂಡು ಬರುವ ಚಿಕ್ಕ ಜಾತಿಯ ಮಂಗಗಳಾಗಿವೆ. ಮೆಕ್ಸಿಕೋ ದೇಶದಲ್ಲಿ ಕಂಡು ಬರುವ ಬ್ಲೂ ಗೋಲ್ಡ್ ಮಕಾವ್, ಆಸ್ಟ್ರೇಲಿಯಾದಲ್ಲಿ ಕಂಡು ಬರುವ ಗಾಲಾ, ದಕ್ಷಿಣ ಆಫ್ರಿಕಾ ಖಂಡದ ಟುರಾಕೋಗಳನ್ನು ಕೂಡಾ ಪಿಲಿಕುಳಕ್ಕೆ ತರಿಸಲಾಗಿದೆ ಎಂದು ಉದ್ಯಾನವನದ ನಿರ್ದೇಶಕ ಎಚ್.ಜೆ. ಭಂಡಾರಿ ತಿಳಿಸಿದ್ದಾರೆ.
ಹೊಸತಾಗಿ ಆಗಮಿಸಿರುವ ಪ್ರಾಣಿ, ಪಕ್ಷಿಗಳಿಗೆ ಆವರಣ ಸಮುಚ್ಚಯ ನಿರ್ಮಿಸಲು ರಿಲಾಯನ್ಸ್ ಫೌಂಡೇಶನ್ ಒಂದು ಕೋಟಿ ರೂ. ದೇಣಿಗೆ ನೀಡಿದೆ. ಹೊಸತಾಗಿ ಸೇರ್ಪಡೆಯಾದ ಪ್ರಾಣಿ ಪಕ್ಷಿಗಳಿಗೆ ಅವುಗಳ ನೈಸರ್ಗಿಕ ಆವಾಸ ಸ್ಥಾನವನ್ನು ಹೋಲುವ ಆವರಣಗಳನ್ನು ರಚಿಸಲಾಗಿದೆ. ಅವರಣದ ಒಳಗೆ ಪ್ರಾಣಿಗಳಿಗಾಗಿ, ಆಹಾರ ನೀಡುವ ಕೇಂದ್ರ, ಬ್ರೀಡಿಂಗ್ ಬಾಕ್ಸ್ ಇತ್ಯಾದಿ ಸಲಕರಣೆಗಳನ್ನು ಉಚಿತವಾಗಿ ಲೈಫ್ ಸೈನ್ಸ್ ಎಜುಕೇಶನ್ ಟ್ರಸ್ಟ್, ಬೆಂಗಳೂರು ಇವರು ನೀಡಿದ್ದಾರೆ. ಈಗಾಗಲೇ ಪಿಲಿಕುಳ ಮೃಗಾಲಯದಲ್ಲಿ ೧,೨೦೦ರಷ್ಟು ವಿವಿಧ ಜಾತಿಯ ಪ್ರಾಣಿ, ಪಕ್ಷಿ ಉರಗಗಳಿದ್ದು, ಇನ್ನು ಪ್ರಾಣಿಗಳನ್ನು ತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Next Article