For the best experience, open
https://m.samyuktakarnataka.in
on your mobile browser.

ಹೊಸ ವರ್ಷಾಚರಣೆ: ಕಾನೂನು ಮೀರಿ ವರ್ತನೆ ಮಾಡಿದರೆ ಹುಷಾರ್‌..!

05:23 PM Dec 31, 2023 IST | Samyukta Karnataka
ಹೊಸ ವರ್ಷಾಚರಣೆ  ಕಾನೂನು ಮೀರಿ ವರ್ತನೆ ಮಾಡಿದರೆ ಹುಷಾರ್‌

ಹುಬ್ಬಳ್ಳಿ: ಹೊಸ ವರ್ಷ ಆಚರಣೆಯಂದು ಕಾನೂನು ಮೀರಿ ವರ್ತನೆ ಮಾಡಿದರೇ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು, ಹೊಸ ವರ್ಷ ಬರಮಾಡಿಕೊಂಡು ಆಚರಣೆ ಮಾಡಲು ಕ್ಷಣಗಣನೆ ಆರಂಭವಾಗಿದ್ದು, ಹೊಸ ವರ್ಷ ಆಚರಣೆಗೆ ಮಧ್ಯರಾತ್ರಿ ೧೨ ರಿಂದ ೧೨.೩೦ ರವರೆಗೆ ಅವಕಾಶ ಮಾಡಿಕೊಡಲಾಗಿದೆ. ಈಗಾಗಲೇ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಅಬಕಾರಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಹೊಸ ವರ್ಷದ ಆಚರಣೆ ಮಾಡುವ ಆಯೋಜಕರೊಂದಿಗೆ ಸಭೆ ಮಾಡಿದ್ದೇವೆ. ಗೈಡ್‌ಲೈನ್ಸ್ ಅನ್ವಯವಾಗಿ ನಡೆದುಕೊಳ್ಳಲು ತಿಳಿಸಲಾಗಿದೆ. ಯಾವುದೇ ಕಾರಣಕ್ಕೂ ಸಮಯವನ್ನು ಮೀರದಂತೆ ಎಚ್ಚರಿಕೆ ನೀಡಲಾಗಿದೆ.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಿಸಿ ಟಿವಿ ಕಣ್ಗಾವಲು ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿದ್ದು, ಮಹಿಳೆಯರ ರಕ್ಷಣೆಯ ಕುರಿತಂತೆ ನಾವು ಹೆಚ್ಚಿನ ಒಲವು ಹೊಂದಿದ್ದೇವೆ. ಹೊಸ ವರ್ಷವೆಂದು ಪಾರ್ಟಿ ಆಯೋಜಿಸಿದವರು ಮಹಿಳೆಯರ ರಕ್ಷಣೆ ಬಗ್ಗೆ ಕ್ರಮ ವಹಿಸಲು ತಿಳಿಸಲಾಗಿದ್ದು, ಕಾನೂನಿನ ಚೌಕಟ್ಟಿನಲ್ಲಿ ನೂತನ ವರ್ಷ ಆಚರಣೆ ಮಾಡಬೇಕು ಎಂದು ಕಮೀಷನರ್ ಮಾಹಿತಿ ನೀಡಿದ್ದಾರೆ.