NEET ವಿವಾದ: ಸಿಬಿಐ ತನಿಖೆಗೆ ಒತ್ತಾಯ
03:42 PM Jun 14, 2024 IST | Samyukta Karnataka
ನವದೆಹಲಿ: NEET-UG ಪರೀಕ್ಷೆಯ ವಿವಾದದ ನಡುವೆ ಸರ್ಕಾರವು ವಿದ್ಯಾರ್ಥಿಗಳಿಗೆ ಭರವಸೆ ನೀಡಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು NEET-UG ಪರೀಕ್ಷೆಯ ವಿವಾದದ ಬಗ್ಗೆ ಸಿಬಿಐ ಮತ್ತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಗೆ ಕರೆಗಳ ನಡುವೆ ಯಾವುದೇ ವಿದ್ಯಾರ್ಥಿಯ ವೃತ್ತಿಜೀವನಕ್ಕೆ ಧಕ್ಕೆಯಾಗುವುದಿಲ್ಲ, ನೀಟ್ ಪರೀಕ್ಷಾರ್ಥಿಗಳ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನ್ ಹೇಳಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಮತ್ತು NEET-UG 2024 ರಲ್ಲಿನ ಇತರ ಅಕ್ರಮಗಳ ಆರೋಪಗಳ ಕುರಿತು ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ ಮನವಿಯ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಗೆ ನೋಟಿಸ್ ಜಾರಿ ಮಾಡಿದೆ.