ತಿರುಪತಿ ಲಡ್ಡು ಪ್ರಕರಣ : ಸನಾತನ ಧರ್ಮಿಯರಿಂದ ಪ್ರತಿಭಟನೆ
ಇಳಕಲ್ : ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿ ಕೊಡುವ ಲಡ್ಡು ಪ್ರಸಾದದಲ್ಲಿ ಮೀನಿನ ಎಣ್ಣೆ ಮತ್ತು ಪ್ರಾಣಿಗಳ ಕೊಬ್ಬು ಹಾಕುತ್ತಾರೆ ಎಂಬ ಹಿನ್ನೆಲೆಯಲ್ಲಿ ಬುಧವಾರದಂದು ಇಲ್ಲಿನ ಸನಾತನ ಧರ್ಮಿಯರು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಶ್ರೀರಾಮಚಂದ್ರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಕಂಠಿ ಸರ್ಕಲ್ ಗೆ ಬಂದಾಗ ಅಲ್ಲಿ ದೊಡ್ಡ ಪ್ರತಿಭಟನೆ ಮಾಡಲಾಯಿತು ಸನಾತನ ಧರ್ಮದವರು ಹಕ್ಕಿ ಪ್ರಾಣಿಗಳನ್ನು ಸಹ ಮುಟ್ಟಲು ದೂರ ಸರಿಯುವ ಈ ಸಮಯದಲ್ಲಿ ಅವರಿಗೆ ಲಡ್ಡು ಪ್ರಸಾದದಲ್ಲಿ ಮೀನಿನ ಎಣ್ಷೆ ಹಾಕಿ ಅವರ ಮನಸ್ಸನ್ನು ಹಾಳು ಮಾಡಿದ್ದಾರೆ ಇದರಿಂದಾಗಿ ದೇಶದ ಜನತೆ ಖಿನ್ನರಾಗಿದ್ದಾರೆ ಇಂತಹ ಘೋರ ಅಪಚಾರವನ್ನು ಮಾಡಿದವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೂಡಿದ ಜನರ ಒಕ್ಕೊರಲಿನಿಂದ ಹೇಳಿದ̧ರು ಪ್ರತಿಭಟನೆ ನೇತೃತ್ವವನ್ನು ಬ್ರಾಹ್ಮಣ ಸಮಾಜದ ಅಧ್ಯಕ್ಷ ಪಾಂಡುರಂಗ ಕುಲಕರ್ಣಿ, ಸಂಚಾಲಕ ಬಂಡು ಕಟ್ಟಿ ಮಾರವಾಡಿ ಸಮಾಜದ ರಾಮವತಾರ ಲಾಹೋಟಿ , ಪುರುಷೋತ್ತಮ ದರಕ , ಶ್ಯಾಮಸುಂದರ ಕರವಾ ಮತ್ತು ಸಾಕಷ್ಟು ಮಹಿಳೆಯರು ಇದರಲ್ಲಿ ಪಾಲ್ಗೊಂಡಿದ್ದರು
ನಂತರ ತಹಸೀಲ್ದಾರ ಕಚೇರಿಯ ಸಿಬ್ಬಂದಿಗೆ ಮನವಿಪತ್ರವನ್ನು ಸಲ್ಲಿಸಲಾಯಿತು.