For the best experience, open
https://m.samyuktakarnataka.in
on your mobile browser.

ತೇನ ವಿನಾ ತೃಣಮಪಿ ನ ಚಲತಿ

05:01 AM Apr 03, 2024 IST | Samyukta Karnataka
ತೇನ ವಿನಾ ತೃಣಮಪಿ ನ ಚಲತಿ
PRATHAPPHOTOS.COM

ಪ್ರಪಂಚದಲ್ಲಿ ದೇವರಿಲ್ಲದೇ ಏನೂ ಇಲ್ಲ. ಅದಕ್ಕೆ ತೇನ ವಿನಾ ತೃಣಮಪಿ ನ ಚಲತಿ ಎಂಬ ಮಾತಿನಂತೆ ಭಗವಂತನಿಲ್ಲದೇ ಹುಲ್ಲು ಕಡ್ಡಿಯೂ ಅಲುಗಾಡದು. ದೇವರಿಂದ ನಮಗೆ ಉಪಕಾರ ಬಹಳವಿದೆ. ಯಾರು ದೇವರಿಂದ ಉಪಕಾರ ಪಡೆಯದವರಿದ್ದಾರೆ ಭವದಲ್ಲಿ?
ಚಿಂತನೆಗೆ, ನಿರ್ಧಾರ, ತೆಗೆದುಕೊಳ್ಳೋಕೆ ಮಂದಾರ ಪರ್ವತ ಎತ್ತಿ ತರುವುದಕ್ಕೆ ಜೀವನದಲ್ಲಿ ನಾವು ಮಾಡುವ ಯಜ್ಞ, ಯಾಗ, ಪಾಠ, ಪ್ರವಚನ, ಸಾಧನೆ, ಉಪಕಾರ ಇನ್ನಿತರ ಸತ್ಕಾರ್ಯಗಳಿಗೆ ಬೇಕಾದ ಸಾಧನ ಸಲಕರಣೆಗಳನ್ನು ಒದಗಿಸುವುದಕ್ಕೆ ದೇವರು ಬೇಕು ಎನ್ನುವುದನ್ನು ತೋರಿಸಿಕೊಳ್ಳಲು ಸಮುದ್ರ ಮಥನದಲ್ಲಿ ದೇವರ ಮಹತ್ವವಾದ ಪಾತ್ರ ತೋರಿಸಿಕೊಡಲಾಗಿದೆ. ದೇವರನ್ನು ಮನುಷ್ಯರಂತೆ ತಿಳಿಯುತ್ತೇವೆ ಅದೇ ನಾವು ಮಾಡುವ ಅತಿ ದೊಡ್ಡ ತಪ್ಪು. ಸಮಾನವಾಗಿ ಕಂಡರೆ ಅಲ್ಲಿ ವಿಶೇಷವಾದ ಮಹತ್ವ ಕಾಣುವದೇ ಇಲ್ಲ. ಈ ರೀತಿಯ ಮನೋಭಾವ ಅಪಾಯಕಾರಿ ಅಲ್ಲದೇ ಮನೋವ್ಯಾಧಿಯನ್ನುಂಟು ಮಾಡಬಹುದು. ದೇವರೆನ್ನುವದು ಮಹತತ್ವ. ಆಂಶರೂಪವಾಗಿ ಅವತಾರವೆತ್ತಿ ಬರುವ ನಾರಾಯಣ ಮನುಷ್ಯರ ಎದುರು ತನ್ನ ಲೀಲೆಗಳನ್ನು ಸಾಂಕೇತಿಕವಾಗಿ ಎತ್ತಿ ತೋರುತ್ತಾನೆ. ಭಗವಂತ ಲೀಲೆಗಳನ್ನು ತೋರುವದು ತನಗಾಗಿ ಅಲ್ಲ; ತನ್ನ ಶ್ರೇಷ್ಠತೆಗಾಗಿ ಅಲ್ಲ; ಬದಲಾಗಿ ಅದು ನಾವು ನಡೆಯುವ ಮಾರ್ಗಗಳು ಹೇಗಿರಬೇಕೆಂಬುದನ್ನು ಸೂಚ್ಯವಾಗಿ ತಿಳಿಸುತ್ತಾನೆ.
ದೇವರು ಸಮುದ್ರ ಮಥನ ಮಾಡಿದ ಎಂದರೆ ಶಾಸ್ತ್ರದ ಮಥನವನ್ನು ಮಾಡಿ ತತ್ವಜ್ಞಾನದ ಅಮೃತವನ್ನು ಪಡೆಯಬೇಕಾದರೆ ಆ ಶಾಸ್ತ್ರದ ರಚನೆಗಳನ್ನು ದೇವರೇ ಮಾಡಿಸಬೇಕು. ಓದಿದರೆ ತತ್ವಜ್ಞಾನ ಬರೋ ಹಾಗೆ ದೇವರೇ ಮಾಡಬೇಕು. ತತ್ವ ಜ್ಞಾನ ಬಂದು ಭಕ್ತಿಯ ಉದ್ರೇಕವಾಗಿ ತತ್ವಜ್ಞಾನದ ನಿಜವಾದ ಫಲವಾದ ಮೋಕ್ಷವನ್ನು ನಾವು ಉಣಬೇಕು ಬೇಕು ಎಂದರೆ ಅದನ್ನು ಕೂಡ ದೇವರೇ ಉಣಿಸಬೇಕು. ನಾವೆಲ್ಲರೂ ಮಾಡುವ ಕರ್ಮಗಳ ಫಲ ನಮ್ಮೆಲ್ಲರಿಗೂ ಸಿಗಬೇಕಾದರೆ ಆ ಎಲ್ಲ ಕರ್ಮಗಳ ಸಾರವನ್ನು ಭೋಗ ಮಾಡುವವನು ಆ ಪರಮಾತ್ಮನೇ, ಅವನೂ ಕರ್ಮದ ಫಲವನ್ನು ಭೋಗ ಮಾಡುವವ. ಇದನ್ನು ತಿಳಿಸುವುದಕ್ಕೆ ಆ ಅಮೃತಮಥನದ ಫಲ. ಕುದುರೆ ಮದರೆ, ಅಸುರರ ಪಾಲಾದರೆ ಕಾಮಧೇನು ಪಾರಿಜಾತ ಅಮೃತ ದೇವರ ಪಾಲಿಗೆ ಬಂದರೆ. ಅಮೃತಮಥನದಲ್ಲಿ ಸಾಕ್ಷಾತ್ ಮಹಾಲಕ್ಷ್ಮಿದೇವಿ ಅವತಾರ ಮಾಡಿದರೆ ಅವಳನ್ನು ಯಾರಿಗೂ ಕೊಡದೆ ಅವಳನ್ನು ತಾನು ಸ್ವೀಕರಿಸಿದ. ಇದರಿಂದ ಈ ಜೀವನದಲ್ಲಿ ನಾವು ಮಾಡುವ ಕರ್ಮಗಳ ಫಲ ಎಲ್ಲ ನಮಗಲ್ಲ. ಅದರ ಸಾರ ತನಗೆ ಅಂತ ಸಾಲಂಕೃತಳಾದ ಮಹಾಲಕ್ಷ್ಮಿಯನ್ನು ತಾನೊಬ್ಬನೇ ಸ್ವೀಕರಿಸುವ ಮೂಲಕ ಇನ್ಯಾವ ದೇವತೆಗಳಿಗೂ ದಕ್ಕಲಾರದ ಫಲ ತನಗೆ ಮಾತ್ರ ಸೇರಬೇಕು ಎಂಬದನ್ನು ಅವಳ ಬಾಯಿಂದಲೇ ಹೇಳಿಸಿ, ಉಳಿದ ದೇವತೆಗಳೆಲ್ಲರೂ ಸದೋಷರು ತಾನೊಬ್ಬ ಮಾತ್ರ ನಿರ್ದೋಷ ಎಂದು ಹೇಳಿಸಿ, ಇವನೊಬ್ಬನೇ ನಿರನಿಷ್ಟ ನಿರವದ್ಯ ಎಂದು ಹೇಳಿಸಿ ಅವನ ಕೊರಳಿಗೆ ಮಾಲೆಯನ್ನು ಮಹಾಲಕ್ಷ್ಮಿ ಹಾಕುವಂತೆ ಮಾಡಿದ.