For the best experience, open
https://m.samyuktakarnataka.in
on your mobile browser.

ಡಾಂಬರಿನಲ್ಲಿ ಸಿಲುಕಿದ್ದ ನಾಗರಹಾವು ರಕ್ಷಣೆ

05:47 PM Dec 20, 2023 IST | Samyukta Karnataka
ಡಾಂಬರಿನಲ್ಲಿ ಸಿಲುಕಿದ್ದ ನಾಗರಹಾವು ರಕ್ಷಣೆ

ಮಂಗಳೂರು: ಉರಿ ಬಿಸಿಲಿನಲ್ಲಿ ಡಾಂಬರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರಹಾವೊಂದನ್ನು ಪುತ್ತೂರಿನ ಉರಗ ಪ್ರೇಮಿ ತೇಜಸ್ ಬನ್ನೂರು ರಕ್ಷಿಸಿ ಹಾವಿಗೆ ಜೀವದಾನ ಮಾಡಿದ್ದಾರೆ.
ಡಾಂಬರ್ನಲ್ಲಿ ಸಿಲುಕಿದ್ದ ಹಾವನ್ನು ಎರಡು ದಿನಗಳ ಕಠಿಣ ಪರಿಶ್ರಮದೊಂದಿಗೆ ತೇಜಸ್ ರಕ್ಷಿಸಿದ್ದಾರೆ.
ಸೋಮವಾರ ಪುತ್ತೂರಿನ ನೆಹರೂ ನಗರದ ಮನೆಯೊಂದರಲ್ಲಿ ಡಾಂಬರ್ ಡಬ್ಬಿಗಳನ್ನು ಶೇಖರಿಸಿಟ್ಟ ಪ್ರದೇಶದಲ್ಲಿ ನಾಗರಹಾವು ಪತ್ತೆಯಾಗಿತ್ತು. ಹಾವೊಂದು ಡಾಂಬರ್ ಡಬ್ಬಿಗಳ ಅಂಚಿನಲ್ಲಿ ಹೋಗಿರುವುದನ್ನು ಗಮನಿಸಿದ್ದ ಮನೆ ಮಂದಿ ತೇಜಸ್‌ಗೆ ಕರೆ ಮಾಡಿ ಈ ಕುರಿತು ಮಾಹಿತಿ ನೀಡಿದ್ದಾರೆ.
ನಾಗರಹಾವಿನ ಚರ್ಮದಿಂದ ಡಾಂಬರ್ ತೆಗೆಯಲು ಎರಡು ದಿನಗಳ ಕಾಲ ಶ್ರಮಪಟ್ಟಿದ್ದಾರೆ. ನಾಗರಹಾವನ್ನು ಶುದ್ಧ ಕೊಬ್ಬರಿ ಎಣ್ಣೆಯಲ್ಲಿ ಒಂದು ದಿನ ಸಂಪೂರ್ಣ ಅದ್ದಿ ಇಟ್ಟು ಬಳಿಕ ಅದರ ಮೇಲಿಂದ ಡಾಂಬರ್ ಅನ್ನು ಬೇರ್ಪಡಿಸಿದ್ದಾರೆ. ಸುಮಾರು ಒಂದು ವರ್ಷ ಪ್ರಾಯದ ನಾಗರಹಾವು ಚೇತರಿಸಿಕೊಂಡ ಬಳಿಕ ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ. ತೇಜಸ್ ಪ್ರಕಾರ ಡಾಂಬರ್ ನಲ್ಲಿ ಸಿಕ್ಕಿಹಾಕಿಕೊಂಡ ಹಾವಿನ ಚರ್ಮಕ್ಕೆ ಕೊಂಚ ಹಾನಿಯಾಗಿದ್ದರೂ, ಹೊಸ ಚರ್ಮ ಬರಲಿದೆ. ಇದರಿಂದಾಗಿ ಈಗಿರುವ ಚರ್ಮ ಕಳಚಿ ಹೋಗಲಿದೆ. ಇದರಿಂದಾಗಿ ಹಾವಿಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ. ಹಾವಿನ ಎಲ್ಲಾ ಚಲನವಲನಗಳನ್ನು ಪರೀಕ್ಷಿಸಿದ ಬಳಿಕವೇ ಹಾವನ್ನ ಸುರಕ್ಷಿತ ಪ್ರದೇಶಕ್ಕೆ ಬಿಡಲಾಗಿದೆ.