ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ದುಷ್ಮನ್ ಕಂಹಾ ಹೈ ಅಂದರೆ…

03:00 AM Sep 27, 2024 IST | Samyukta Karnataka

ದುಷ್ಮನ್ ಕಂಹಾ ಹೈ ಅಂದರೆ ದುಷ್ಮನ್ ಹಿಂದೆ ಮುಂದೆ ಹೈ ಅಂತ ಆದ ಆಕಾಶವಾಣಿ ಸಾಹೇಬನ ಕಿವಿಗೆ ತಲುಪಿತಂತೆ. ಅಂಥವೇ ಲವ್ಲಿ ದುಷ್ಮನ್‌ಗಳು ಸಾಹೇಬಾ… ನೀ ಕೊಡಬೇಡ ಅಂತ ಕಿವಿಯಲ್ಲಿ ಹೇಳಿದ್ದೇ ತಡ… ಸಾಹೇಬನು ಊರ ತುಂಬ ನಾ ಕೊಡಲ್ಲ… ನಾನು ಏನು ಮಾಡಿದರೂ ಕೊಡಲ್ಲ… ಅಂದರೂ ಕೊಡಲ್ಲ… ಆಡಿದರೂ ಕೊಡಲ್ಲ… ಬಾಯಿ ಬಡಕೊಂಡರೂ ಕೊಡಲ್ಲ… ಏನೇ ಆಗಲಿ ನಾ ಕೊಡಲ್ಲ.. ಕೊಡಲ್ಲ.. ಕೊಡಲ್ಲ ಎಂದು ಹೇಳುತ್ತಿದ್ದಾನೆ. ಈ ಮಾತನ್ನು ಕೂಡ ಹಿಂದೆ ಮುಂದಿನ ದುಷ್ಮನ್‌ಗಳು ಅನುಮೋದಿಸುತ್ತ… ಸಾಹೇಬ ಕೊಡಲ್ಲ… ನಮ್ಮ ಸಾಹೇಬ ಯಾಕೆ ಕೊಡಬೇಕು… ಯಾವುದೇ ಪರಿಸ್ಥಿತಿಯಲ್ಲಿ ಕೊಡಲ್ಲ.. ಅವರು ಬಿಡಲ್ಲ ಅಂದರೂ ಕೊಡಲ್ಲ ಎಂದು ಒಂದೇ ಸಮನೆ ಕೂಗಿ ಕೂಗಿ ಹೇಳಿ ಕೆಲವರನ್ನು ಸಿಟ್ಟಿಗೆಬ್ಬಿಸುತ್ತಿದ್ದಾರೆ. ಈ ಬಗ್ಗೆ ಹುಟ್ಟಾ ರಾಜಕೀಯ ತಜ್ಞ ಕರಿಲಕ್ಷಂಪತಿ ತಮ್ಮ ಪ್ರತಿಕ್ರಿಯೆಯನ್ನು ಈ ರೀತಿಯಾಗಿ ನೀಡಿದ್ದಾನೆ…. ಇಂತಹದ್ದೊಂದು ಸಮಸ್ಯೆ ಬರುತ್ತದೆ ಎಂದು ನಾನು ಎರಡು ವರ್ಷಗಳ ಹಿಂದೆಯೇ ಊಹಿಸಿದ್ದೆ. ನನ್ನ ಊಹೆ ಯಾವತ್ತೂ ಸುಳ್ಳು ಆಗುವುದಿಲ್ಲ. ದುಷ್ಮನ್ ಹಿಂದೆ ಮುಂದೆ ಹೈ ಅನ್ನುವುದು ಕಟುಸತ್ಯ. ಅವುಗಳೇ ನೀ ಹಂಗೆ ಮಾಡು ನಾ ಹಿಂಗೆ ಮಾಡುತ್ತೇವೆ ಎಂದು ಹೋಟೆಲ್‌ನಲ್ಲಿ ಕೂತು ಮಾತಾಡಿಕೊಂಡಿವೆ. ಸಾಹೇಬನಿಗೆ ನಾವಿದ್ದೇವೆ ಸಾಹೇಬಾ ಎಂದು ಎದುರಿಗೆ ಹೇಳುವುದು… ಅವರ ಹಿಂದೆ ಆಡಿಕೊಳ್ಳುವುದು ಮಾಡುತ್ತಿದ್ದವು. ನಾವು ಕಾಗದ ಪತ್ರಗಳನ್ನು ತಂದು ಕೊಡುತ್ತೇವೆ. ನೀವು ಹೀಗೆ ಮಾಡಬಹುದು ಎಂದು ಖೆಡ್ಡಾ ತೋಡುವವರಿಗೆ ಹೇಳಿವೆ… ಇಲ್ಲಿ ಬಂದು ಸಾಹೇಬಾ… ನಾನಿದ್ದೇನೆ ಅಂಜಬೇಡ ಅಳುಕಬೇಡ ಅನ್ನುತ್ತಿವೆ. ಇದೇ ಮಾತು ನಿಜ ಎಂದು ನಂಬಿದ ಸಾಹೇಬನು…. ಎಲೈ ಸಾರಥಿ… ನಾನು ದಾರೆಂದರೆ ಎಂದು ದೊಡ್ಡಾಟದ ಸ್ಟೈಲ್‌ನಲ್ಲಿ ಮಾತುಗಳನ್ನು ಆಡಿದ್ದೇ ಈ ಎಲ್ಲವುಗಳಿಗೆ ಕಾರಣವಾಗಿವೆ. ಈ ಮಾತನ್ನು ಕೇವಲ ನಾನೊಬ್ಬನೇ ಅಲ್ಲ… ಮೇಕಪ್ ಮರೆಮ್ಮ, ಕರಿಭಾಗೀರತಿ.. ಜ್ಞಾನಿ ಗ್ಯಾನಮ್ಮ ಈ ಎಲ್ಲ ತಜ್ಞರೂ ಒಪ್ಪುತ್ತಾರೆ. ಒಂದು ವೇಳೆ ಈಗಲಾದರೂ ಸಾಹೇಬ ನಮ್ಮ ಕಡೆ ಬಂದು ಒಂದೇ ಒಂದು ಮಾತು ಇಂಗಿಂಗೆ ಅಂದರೆ ನಾವು ಅಂಗಂಗೆ ಪ್ರಾಬ್ಲಂ ಸಾಲ್ವ್ ಮಾಡುತ್ತೇವೆ… ಇದು ನನ್ನ ಪ್ರತಿಕ್ರಿಯೆ ಎಂದಿದ್ದಾನೆ.

Next Article