ದೇವರಲ್ಲಿ ಭಕ್ತಿ ಎಷ್ಟು ಮುಖ್ಯವೋ ದೇಶ ಭಕ್ತಿಯೂ ಅಷ್ಟೇ ಮುಖ್ಯ
ಮೈಸೂರು: ದೇವರಲ್ಲಿ ಭಕ್ತಿ ಎಷ್ಟು ಮುಖ್ಯವೋ ದೇಶ ಭಕ್ತಿಯೂ ಅಷ್ಟೇ ಮುಖ್ಯ ಎಂದು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ
ಸೋಸಲೆ ವ್ಯಾಸರಾಜರ ಮಠಾಧೀಶ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಹೇಳಿದರು.
ತಿ. ನರಸೀಪುರ ತಾಲೂಕಿನ ಇತಿಹಾಸ ಪ್ರಸಿದ್ಧ ವ್ಯಾಸರಾಜಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಅವರು ಅನುಗ್ರಹ ಸಂದೇಶ ನೀಡಿದರು. ವಿದ್ಯಾರ್ಥಿಗಳು ದಯೆ, ಧಮ ದಾನ ಮುಂತಾದ ಸದ್ಗುಣಗಳನ್ನು ರೂಡಿಸಿಕೊಂಡು ಭವ್ಯ ಭಾರತದ ಜವಾಬ್ದಾರಿಯುತ ಪ್ರಜೆಗಳಾಗಬೇಕು ಎಂದು ಅವರು ಕರೆ ನೀಡಿದರು. ಯಾವುದೇ ಕಾರಣಕ್ಕೂ ಮಧ್ಯದಲ್ಲಿ ಶಿಕ್ಷಣ ಮೊಟಕುಗೊಳಿಸಬಾರದು. ಮಾತೆ, ಮಾತೃಭೂಮಿ, ಮಾತೃಭಾಷೆ ಮರೆಯಬಾರದು. ತಾಯಿಯಂತೆಯೇ ತಾಯಿನಾಡನ್ನು ಪ್ರೀತಿ ಸಬೇಕು ಎಂದರು.
ಕಳೆದ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಶ್ರೀ ಮಠದ ವತಿಯಿಂದ ಶಾಲಾ ಬ್ಯಾಗ್, ಪುಸ್ತಕಗಳನ್ನು ಶ್ರೀ ಗಳು ವಿತರಿಸಿದರು. ತಿ. ನರಸೀಪುರ ವಿಶ್ವಚೇತನ ಸಂಸ್ಕೃತ ಪಾಠಶಾಲೆ ಪ್ರಾಚಾರ್ಯ ಡಾ. ಸಿ. ಎಚ್. ಗುರುರಾಜ ರಾವ್, ಮಠದ ಹಿರಿಯ ವಿದ್ವಾಂಸ ಶ್ರೀ ವೆಂಕಣ್ಡಮಾತನಾಡಿದರು.