ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ದೈವಿಕ ಭಕ್ತಿಯಿಂದ ಸಮಾಜ, ದೇಶಕ್ಕೆ ಬಲ

04:44 AM Aug 14, 2024 IST | Samyukta Karnataka

ಇಂದಿನಿಂದ ಪ್ರಾರ್ಥನೆ ಮಾಡಿ, ಪ್ರಯತ್ನಿಸಿದರೆ ಅದರ ಫಲ ಮುಂದೆ ಸಿಗುತ್ತದೆ. ಪರೀಕ್ಷೆಗಾಗಿ ಅಭ್ಯಾಸ ಮಾಡಿದಂತೆ ನಿಷ್ಠೆ ಮತ್ತು ಶ್ರದ್ಧೆಯಿಂದಲೇ ನಾವು ದೇವರನ್ನು ಆರಾಧಿಸಿ ಭಜಿಸಬೇಕು. ಅದಕ್ಕೆ ದೇವನ ಬಗ್ಗೆ ಜ್ಞಾನ ಅಗತ್ಯ. ಜ್ಞಾನ ಪಡೆಯಲು ಬಹುದಿನಗಳು ಬೇಕಾಗುತ್ತವೆ. ಸಂಸಾರದೊಳಗೆ ಅನಿಷ್ಟಗಳು, ಕಷ್ಟಗಳು, ವಿಘ್ನ ಗಳು, ಸಾಧನೆಯನ್ನು ಮಾಡಲು ಸಾಕಷ್ಟು ವಿಘ್ನಗಳನ್ನು, ಭಜನೆ ಮಾಡಲು ಪರಿಹಾರ ಮಾಡು ಅಂದರೆ ನಿನಗೆ ಭಜನೆಯನ್ನು ಮಾಡುತ್ತೇನೆ ಎಂದು ಕೇಳಿಕೊಳ್ಳಬೇಕು.
ಭಗವಂತನಲ್ಲಿ ತ್ರಿಕರಣ ಭಕ್ತಿಯನ್ನು ನೀಡು ಎಂದು ಕೇಳಬೇಕು. ಜ್ಞಾನ, ಭಕ್ತಿ ವೈರಾಗ್ಯಗಳನ್ನು ಕೇಳಬೇಕು. ಆಸ್ತಿ ಅಂತಸ್ತು ಅಲ್ಲ; ಅವು ಕ್ಷಣಿಕ. ಭೋಗಾಸಕ್ತಿಯ ವಿಷಯಗಳನ್ನು ಕೇಳಕೂಡದು. ಸಜ್ಜನರ ಸಂಗವನ್ನು ದಯಪಾಲಿಸಲು ಕೋರಿಕೆ ದೇವರಲ್ಲಿ ಸಲ್ಲಿಸಬೇಕು. ಸಂಗದಿಂದ ಲಿಂಗದೇಹ ಭಂಗವಾಗಲಿ, ಉತ್ತಮರ ಸಂಗವನ್ನು ಎನಗಿತ್ತು ಸಲಹು ಚಿತ್ತಜನಕ. ಸಜ್ಜನರ ಸಂಗವಾಗುವುದರಲ್ಲಿ ಸದುಪಯೋಗಪಡಿಸಿಕೊಳ್ಳುವ ವಿವೇಕ ನನ್ನಲ್ಲಿ ಜಾಗೃತವಾಗಲಿ ಇದು ಇಷ್ಟ.
ಇದು `ಸಾಧನ ಇಷ್ಟಾನಿ ಮಾಧವ..' ಈ ರೀತಿ ಭಗವಂತನಲ್ಲಿ ನಾವುಗಳು ಪ್ರಾರ್ಥನೆ ಮಾಡಬೇಕಾದದ್ದು. ಎಲ್ಲ ಧಾರ್ಮಿಕರು ಭಕ್ತಿ ಶ್ರದ್ಧೆಗಳನ್ನು ಇಟ್ಟುಕೊಂಡ ಅನೇಕ ಸದ್ಭಕ್ತರು, ವೈಯಕ್ತಿಕವಾದ ಧರ್ಮಾನುಸ್ಟಾ ನದಲ್ಲಿ ತೊಡಗಿಸಿಕೊಂಡರೇ ಅದೇ ದೇವರಿಗೆ ನಾವು ಕೊಡುವ ಕಾಣಿಕೆ.
ದೇವರಿಗೆ ಇಷ್ಟವಾದದ್ದೇ ನಮ್ಮ ವರ್ಣಾಶ್ರಮಗಳಿಗೆ ವಿಹಿತವಾದ ಧರ್ಮಗಳನ್ನು ಚೆನ್ನಾಗಿ ಪರಿಪಾಲನೆ ಮಾಡುವುದು. ಧರ್ಮಪಾಲನೆ ಮಾಡುವುದು ಅಂದರೆ ಏನು ? ಸಂಧ್ಯಾವಂದನೆ ಮಾಡುವುದು, ಸಂಧ್ಯಾವಂದನೆ ಬಿಟ್ಟು ಇನ್ನು ಅನೇಕ ಧರ್ಮ ಅನುಷ್ಠಾನ ಮಾಡುವ ರೀತಿಗಳಿವೆ. ಉಚ್ಚಾರ ಮಾಡುವ ಮಂತ್ರ ತಂತ್ರಗಳು ಸರಿಯಾಗಿವೆಯೇ ಎಲ್ಲ ಮಂತ್ರ, ಅಕ್ಷರಗಳು ತಪ್ಪದಂತೆ ಉಚ್ಛಾರಣೆ ಮಾಡಲು ಬರುತ್ತದೆಯೇ, ಸ್ವರ ತಪ್ಪದಂತೆ ಮಂತ್ರಾರ್ಥಗಳ ಅನುಸಂಧಾನ ಚೆನ್ನಾಗಿ ಮಾಡುತ್ತಾ ಸಂಧ್ಯಾವಂದನೆಯನ್ನು ನಾವು ಚನ್ನಾಗಿ ಮಾಡುತ್ತಿದ್ದೇವೆಯ? ಎಂದು ನಮ್ಮನ್ನು ನಾವೇ ಪ್ರಶ್ನಿಸಿದಾಗ ಉತ್ತರ ಹೌದು ಎಂದು ಬಂದರೆ ಅದಕ್ಕಿಂತ ದೊಡ್ಡ ಸಂತೋಷ ಬೇರೆ ಯಾವುದೂ ಇಲ್ಲ.
ಪೂಜೆ, ಸಂಧ್ಯಾವನಾದಿ ವಿಹಿತ ಕರ್ಮಗಳನ್ನು ಶ್ರದ್ಧೆ ನಿಷ್ಠೆಯಿಂದ ಮಾಡುವದರಿಂದ ಅನಂತ ಪುಣ್ಯ ಬರುತ್ತದೆ ಅಲ್ಲದೇ ಭಗವಂತ ಪ್ರೀತನಾಗುತ್ತಾನೆ. ಸಮಗ್ರ ಭಾರತದೊಳಗೆ ಎಲ್ಲ ದೈವೀ ಆರಾಧನೆಯಲ್ಲಿ ತೊಡಗಬೇಕು. ಸಂಧ್ಯಾವಂದನೆ ಪೂಜೆ, ಜಪ ತಪಗಳನ್ನು ಮಾಡುವ ಸಂಕಲ್ಪವನ್ನು ಮಾಡಿದರೇ ಅದೇ ಅನಿಷ್ಟಗಳು ತೊಡೆದಂತೆ.
ಈ ಸಂಧ್ಯಾವಂದನೆ ಮಾಡುವುದನ್ನು ಆಂದೋಲನದ ರೀತಿಯಲ್ಲಿ ನಮ್ಮ ಸಮಗ್ರವಾದ ದೇಶವ್ಯಾಪಿಯಾಗಿ ಮಾಡಿದರೆ ಇದರ ಪರಿಣಾಮ ನಮ್ಮ ಸಮಗ್ರವಾದ ಭಾರತ ದೇಶದಲ್ಲಿ ಧರ್ಮದ ಧ್ವಜ ಹಾರುವದರಲ್ಲಿ ಸಂಶಯವಿಲ್ಲ. ಇದು ಸನಾತನ ಹಿಂದೂ ಧರ್ಮದ ರಾಷ್ಟ್ರವಾಗುವುದರಲ್ಲಿ ಸಂಶಯವಿಲ್ಲ. ನಮ್ಮಲ್ಲಿ ಮಂತ್ರದಲ್ಲಿ ಶಕ್ತಿ ಇದೆ. ಆ ಶಕ್ತಿಯಿಂದಲೇ ನಮ್ಮ ಪೂರ್ವಜರು ನಮ್ಮ ದೇಶವನ್ನು ಧರ್ಮದ ದೇಶವನ್ನಾಗಿ ಮಾಡಿದರು. ಧರ್ಮಮಯವಾದ ದೇಶ ಇದು ಉನ್ನತವಾದಂತ ಸ್ಥಾನವನ್ನು ಹೊಂದಿದ ದೇಶ. ಉನ್ನತವಾದ ದೇಶ ಜಗತ್ತಿಗೆ ಮಾದರಿಯಾದಂತಹ ದೇಶ. ಅತ್ಯಂತ ನೆಮ್ಮದಿಯಿಂದ ಸುಖದಿಂದ ಶಾಂತಿಯಿಂದ ಮೆರೆಯುವ ದೇಶ ನಮ್ಮ ದೇಶ ಆಗಬೇಕಾದರೆ ಅದು ಧರ್ಮದಿಂದಲೇ ಸಾಧ್ಯ. ಅದರ ಉನ್ನತಿ ಅದರ ಅಭಿವೃದ್ಧಿ ಸಂಧ್ಯಾವಂದನದ ಗಾಯತ್ರಿ ಒಳಗೆ ಇದೆ. ಬ್ರಹ್ಮಬಲ, ಮಂತ್ರಬಲ ಕ್ಷಾತ್ರಬಲಗಳನ್ನು ಉಪಯೋಗಿಸಿ ಪ್ರಾಮಾಣಿಕವಾಗಿ ರಾಮರಾಜ್ಯದ ಸಂಸ್ಥಾಪನೆಯಾಗಬೇಕು

Next Article