ಧರ್ಮಕ್ಕಾಗಿ ಸದ್ಧರ್ಮದ ಮಂತ್ರ
ಅರ್ಜುನ ತನಗೆ ಯುದ್ಧ ಮಾಡಲು ಸಾಧ್ಯವಿಲ್ಲ ಎಂದು ಶಸ್ತ್ರ ಸನ್ಯಾಸ ಮಾಡಿದಾಗ.. ಮತ್ತೆ ಪುನಃ ಅವರನ್ನ ಧನುರ್ಧಾರಿಯಾಗಿ ಗಟ್ಟಿಯಾಗಿ ನಿಲ್ಲಿಸಿದ್ದು ಕೃಷ್ಣ.
ಅಂತಹ ಭೀಷ್ಮಾಚಾರರಿಗೆ ಯಾರೂ ಸೋಲಿಸುವುದು ಕಷ್ಟ ಇತ್ತು. ಆದರೆ ಶಿಖಂಡಿ ಎದುರಿಗಿದ್ದರೆ ಮಾತ್ರ ನಾನು ಶಸ್ತ್ರ ಸನ್ಯಾಸ ಮಾಡುತ್ತೇನೆ ಎಂದು ಅವರ ಪ್ರತಿಜ್ಞೆ ಅವರ ಎದುರಿಗೆ ಶಿಖಂಡಿಯನ್ನು ತಂದು ನಿಲ್ಲಿಸಿ ಅವರು ಶಸ್ತ್ರ ಸನ್ಯಾಸವನ್ನು ಮಾಡುವಂತೆ ಮಾಡಿದವನೂ ಶ್ರೀಕೃಷ್ಣನೇ.
ಬಾಣಪ್ರಯೋಗ ಮಾಡು ಎಂದು ಹೇಳಿದಾಗ ಅರ್ಜುನನಿಗೆ ಹೇಳಿದಾಗ ಅರ್ಜುನ ಬಾಣ ಬಿಟ್ಟ. ಭೀಷ್ಮಾಚಾರ್ಯರ ಪತನವಾಯಿತು. ಅವರು ಇಚ್ಛಾಮರಣಿಯಾದರೂ ಅವರಿಗೆ ಮರಣ ಬರುವಂತೆ ಕೃಷ್ಣ ಮಾಡಿದ. ಅವರು ಉತ್ತರಾಯಣವರೆಗೂ ಕಾಯ್ದು ಮರಣ ಹೊಂದಬೇಕಾಯಿತು. ಅಂದರೆ ಅಧರ್ಮಗಳು ಭಕ್ತನಿಂದ ಹೆಚ್ಚಿಗೆ ನಡೆಯಕೂಡದು ಎಂದುಕೊಂಡೇ ಭೀಷ್ಮರಿಗೆ ಮೋಕ್ಷ ಪಡೆಯುವಂತೆ ಮಾಡಿದ.
ಇನ್ನು ಗುರುಗಳಾದ ದ್ರೋಣಾಚಾರ್ಯರು ಮಹಾಪರಾಕ್ರಮಿಗಳು. ಅವರು ಅರ್ಜುನನ ಗುರುಗಳು, ವಿಷ್ಣುಭಕ್ತರು ಧಾರ್ಮಿಕರು ಆದರೆ ಅಧರ್ಮದ ಪಕ್ಷದಲ್ಲಿ ನಿಂತಿದ್ದರಿಂದ ನಿನ್ನ ಎಲ್ಲಾ ಅಭಿಮಾನವನ್ನು ಬದಿಗಿಟ್ಟು ಕ್ಷತ್ರಿಯರ ಪರಮಧರ್ಮವನ್ನು ಪಾಲಿಸು ಎಂದು ಅರ್ಜುನನಿಗೆ ಧರ್ಮೋಪದೇಶ ಮಾಡುತ್ತಾರೆ ಕೃಷ್ಣ ದೇವರು.
ಪಾಂಡವರ ಹಿತಕ್ಕಾಗಿ ದ್ರೋಣಾಚಾರ್ಯರ ಹಿತಕ್ಕಾಗಿ ಧರ್ಮರಾಜನಿಂದ ಅಶ್ವತ್ಥಾಮೋ ಹತಃ ಎಂದು ಹೇಳಿಸಿ ದ್ರೋಣಾಚಾರ್ಯರಿಗೆ ಶಸ್ತ್ರಸನ್ಯಾಸ ಮಾಡಿಸಿದ. ಇಲ್ಲಿಯೂ ಅಷ್ಟೇ. ಒಬ್ಬ ಬ್ರಾಹ್ಮಣನಿಂದ ಮತ್ತಷ್ಟು ಪಾಪಕಾರ್ಯಗಳು ಹೆಚ್ಚಿಗೆ ನಡೆಯದಂತೆ ಮಾಡಿದ್ದೇ ಕೃಷ್ಣ.
ಅಂತಹ ಅತಿರಥ ಮಹಾರಥಿ ಕರ್ಣ. ಅರ್ಜುನ ಸಂಹಾರಕ್ಕಾಗಿ ಇಟ್ಟಂತ ಬಾಣ ಅದನ್ನು ಕೂಡ ಬಿಟ್ಟಿದ್ದಾನೆ. ಖಾಂಡವವನವನ್ನು ದಹನ ಮಾಡುವಾಗ ಯಾವ ನಾಗ ತಪ್ಪಿಸಿಕೊಂಡು ಹೋಗಿತ್ತು. ದ್ವೇಷದಿಂದ ಕರ್ಣನ ಬತ್ತಳಿಕೆಯಲ್ಲಿ ಕಾಯ್ದುಕೊಂಡು ಕುಳಿತಿದೆ. ಆ ನಾಗಾಸ್ತ್ರವನ್ನು ಬಿಟ್ಟರೆ ಕೃಷ್ಣ ತನ್ನ ಹೆಬ್ಬೆರಳಿನಿಂದ ಅರ್ಜುನ ರಥವನ್ನು ಭೂಮಿಯಲ್ಲಿ ಒತ್ತುತ್ತಾನೆ ಆಗ ಬಿಟ್ಟ ಬಾಣ ಅವನ ತಲೆಯ ಮೇಲೆ ಹಾಯ್ದು ಹೋಗಿ ಅರ್ಜುನ ಜೀವಾಪಾಯದಿಂದ ಪಾರಾಗುತ್ತಾನೆ. ಇವೆಲ್ಲಾ ಪ್ರಾತಿನಿಧಿಕವಾಗಿ ನಮ್ಮ ಪುರಾಣಗಳಲ್ಲಿ ಬರುವ ಕಥೆಗಳು.
ಕಣ್ಣು ಮುಚ್ಚಿ ಒಮ್ಮೆ ನೆನಪು ಮಾಡಿಕೊಳ್ಳಿ ನಿಮ್ಮ ಜೀವನದಲ್ಲಿ ಇಂಥ
ಕ್ಷಣಗಳು ಇಂಥ ಘಟನೆಗಳು ಎಷ್ಟು ಸಾರಿ ನಡೆದಿದೆ. ಒಂದು ಕ್ಷಣದಲ್ಲಿ ಬಸ್ಸು
ಟ್ರೈನು ಮೋಟಾರ್ ವಾಹನವು ಪಕ್ಕದಲ್ಲಿ ಟಚ್ ಮಾಡಿಕೊಂಡು
ಹೋಗುತ್ತಾನೆ ಡ್ರೈವರ್. ಅಂತಹ ಸಮಯದಲ್ಲಿ
ನೀವು ಪ್ರಾಣಾಯಪಾಯದಿಂದ ಪಾರಾಗಿರುತ್ತೀರಿ,
ಆ ಕ್ಷಣದ ಅಪಾಯ ಪಾರು ಮಾಡಲಿಕ್ಕೆ ಆ ಕೃಷ್ಣನೇ ಪ್ರೇರಣೆಯಾಗಿರುತ್ತಾನೆ.
ಕರ್ಣನ ರಥವು ಕೂಡ ಭೂಮಿಯಲ್ಲಿ ಸಿಕ್ಕಿಹಾಕಿಕೊಂಡಿರುತ್ತದೆ. ಅದೇ ರಥ ಕರ್ಣನ ಪ್ರಾಣ ತೆಗೆದರೆ… ಅದೇ ಮಣ್ಣಲ್ಲಿ ಒತ್ತಿ ಹೋದ ರಥ ಅರ್ಜುನನ ಪ್ರಾಣ ಉಳಿಸುತ್ತದೆ. ತನ್ನ ಕೈಯಲ್ಲಿ ಶಸ್ತçವಿಲ್ಲದಾಗ ಯುದ್ಧ ಮಾಡುವುದು ಅಧರ್ಮವೆಲ್ಲವೇ ಎಂದು ಕೃಷ್ಣನಿಗೆ ಕರ್ಣ ಕೇಳುತ್ತಾನೆ.
ಆಗ ಕೃಷ್ಣ ಒಂದೊಂದಾಗಿ ಕರ್ಣ ಮಾಡಿದ ಅಧರ್ಮಗಳನ್ನು ವಿವರಿಸುತ್ತಲೇ …. ದ್ರೌಪದಿಯನ್ನು ಸಭೆಗೆ ಎಳೆದು ತನ್ನಿ ಎಂದು ಹೇಳುವಾಗ. ಒಂದು ಬಟ್ಟೆ ಧಾರಣೆ ಮಾಡಿದ ದ್ರೌಪದಿಯನ್ನು ಹೇಗೆ ಕರೆದುಕೊಂಡು
ಬರಬೇಕೆಂದು ಕೇಳಿದರೆ ಒಂದು ಬಟ್ಟೆ ಇದ್ದರೆ ಏನು
ಇಲ್ಲದಿದ್ದರೇನು ಕರೆದುಕೊಂಡು ಬಾ ಎಂದು ಹೇಳಿದಾಗ ಎಲ್ಲಿ ಹೋಗಿತ್ತು ನಿನ್ನ ಧರ್ಮ?
ಅರಗಿನ ಮನೆಯಲ್ಲಿ ಪಾಂಡವರವನ್ನು ಸುಡಬೇಕಾಗಿ ಬಂದಾಗ ಅಲ್ಲಿ ನಿನ್ನ ಪ್ರಧಾನ ಪಾತ್ರವಿತ್ತಲ್ಲ ಅಲ್ಲಿ ಎಲ್ಲಿ ಹೋಗಿತ್ತು ನಿನ್ನ ಧರ್ಮ? ಹೀಗೆ ಕೃಷ್ಣ ನೆನಪಿಸಿದರೆ ಕರ್ಣನ ಕರ್ಣಗಳಲ್ಲಿ ಬಿಸಿಯಾದ ವಾಗ್ಬಾಣಗಳನ್ನು ಬಿಡುತ್ತಿದ್ದರೆ ಆಗ ಕೃಷ್ಣ ಅರ್ಜುನನಿಗೆ ಇನ್ನೂ ಕಾಯಬೇಡ ಹೊಡಿ ಬಾಣವನ್ನು ಎಂದು ಹೇಳಿದಾಗ, ಅರ್ಜುನ ಬಾಣವನ್ನು ಬಿಟ್ಟ ಕರ್ಣ ಮೃತನಾದ. ಜಪ ಮಾಡುವಾಗ ಜಪ, ಯುದ್ಧ ಮಾಡುವಾಗ ಯುದ್ಧ ಯಾರ ಜೊತೆ ಹೇಗೆ ಯಾವ ಸಂದರ್ಭದಲ್ಲಿ ಹೇಗೆ ಇರಬೇಕೋ ಹಾಗಿರಬೇಕು.