ಧ್ಯಾನ: ಎಲ್ಲಿಗೂ ಹೋಗದ ಪಯಣ
ಜಗತ್ತಿನ ತುತ್ತತುದಿಯಲ್ಲಿದ್ದಾಗ ಹೋಗಲು ಯಾವ ಸ್ಥಳವೂ ಇರುವುದಿಲ್ಲ. ಎಲ್ಲಿಗೂ ಹೋಗಲಾರದ ಸ್ಥಳ ಈಗ, ಇಲ್ಲಿದೆ. ನೀವೆಲ್ಲೇ ಇದ್ದರೂ, ಯಾವಾಗ ಇದ್ದರೂ, ನೀವೆಲ್ಲೂ ಇಲ್ಲ! ನೀವೆಲ್ಲೂ ಇಲ್ಲದಿದ್ದಾಗ ಜಗತ್ತಿನ ತುತ್ತತುದಿಯಲ್ಲಿರಲೇ ಬೇಕು. ನಿಮಗೆ ಬೇರೆ ಆಯ್ಕೆಯೇ ಇರುವುದಿಲ್ಲ! ಆದ್ದರಿಂದ ಎಲ್ಲೆಲ್ಲೂ, ಎಲ್ಲ ಕಾಲವನ್ನೂ ಎಲ್ಲೂ ಇಲ್ಲದಿರುವಂತದ್ದಾಗಿ ಮಾಡಿಬಿಡಿ. ಎಲ್ಲೂ ಇಲ್ಲದತನವನ್ನು ಬೇಧಿಸಿದಾಗ ಈಗ, ಇಲ್ಲಿ ಇರುತ್ತೀರಿ. ಜಗತ್ತಿನ ತುತ್ತತುದಿಯಲ್ಲಿ ಸಾಗರದ ಆಳ ಮಾತ್ರವಲ್ಲ, ಅಲೆಗಳೂ ಹೆಪ್ಪುಗಟ್ಟಿರುತ್ತವೆ.
ಧ್ಯಾನದಲ್ಲಿ ಮುಳುಗಿರುವ ಮನಸ್ಸಿನಂತೆ ಶಿಥಿಲವಾಗಿ ಸ್ತಬ್ಧವಾಗಿರುತ್ತದೆ; ಮೃದುವಾದ ಗಾಳಿಯು ಬೀಸುತ್ತಿದ್ದಾಗ, ಸಣ್ಣ ಉಸಿರಾಟ ನಡೆಯುತ್ತಿದ್ದಾಗ ಎಲ್ಲವೂ ಸ್ತಬ್ಧವಾಗಿರುತ್ತದೆ. ಜನನದ ಮೊದಲು ಮತ್ತು ಮರಣದ ನಂತರ ಇರುವ ಶುದ್ಧವಾದ ಅರಿವೇ ಸ್ತಬ್ಧತೆ. ಜ್ಞಾನದ ಲಕ್ಷಣವೆಂದರೆ ಚಟುವಟಿಕೆಯ ನಡುವೆಯೂ ಆ ಸ್ತಬ್ಧತೆಯನ್ನು ಗುರುತಿಸುವುದು. ಧ್ಯಾನದ ಅನುಭವವನ್ನು ಮತ್ತೆ ಮತ್ತೆ ಪಡೆದುಕೊಳ್ಳುವುದರಿಂದ ಗೊಂದಲದ ನಡುವೆ ಆ ಸ್ತಬ್ಧತೆಯನ್ನು ಜೀವಿಸಬಹುದು.
ಧ್ಯಾನವೆಂದರೇನು? ಕ್ಷೋಭೆಗೊಳಗಾದ ಮನಸ್ಸು ಧ್ಯಾನ; ವರ್ತಮಾನದ ಕ್ಷಣದಲ್ಲಿರುವ ಮನಸ್ಸೇ ಧ್ಯಾನ; `ಮನಸ್ಸೇ ಇಲ್ಲದ ಮನಸ್ಸು ಆಗಿಬಿಡುವುದೇ ಧ್ಯಾನ; ಹಿಂಜರಿಕೆಯಿಲ್ಲದ, ಯಾವ ರೀತಿಯ ಎದುರು ನೋಡುವಿಕೆಯನ್ನೂ ಹೊಂದಿರದ ಮನಸ್ಸೇ ಧ್ಯಾನ; ಮನೆಗೆ ಮರಳಿ ಬಂದಿರುವ, ತನ್ನ ಮೂಲದೆಡೆಗೆ ಮರಳಿ ಬಂದಿರುವ ಮನಸ್ಸೇ ಧ್ಯಾನ.
ಇತರ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಿದ ನಂತರವೇ ತಾನೆ ವಿಶ್ರಾಂತಿ ಉಂಟಾಗಲು ಸಾಧ್ಯ? ಓಡಾಡುವುದನ್ನು, ಮಾತನಾಡುವುದನ್ನು, ಆಲೋಚಿಸುವುದನ್ನು, ನೋಡುವುದನ್ನು, ಕೇಳಿಸಿಕೊಳ್ಳುವುದನ್ನು… ಹೀಗೆ ಈ ಎಲ್ಲಾ ಸ್ವಯಂಪ್ರೇರಿತ ಚಟುವಟಿಕೆಗಳು ನಿಂತಾಗ ಮಾತ್ರ ವಿಶ್ರಮಿಸಲು ಸಾಧ್ಯ. ಎಲ್ಲಾ ಸ್ವಯಂಪ್ರೇರಿತ ಚಟುವಟಿಕೆಗಳು ನಿಂತಾಗ ನಮ್ಮ ನಿಯಂತ್ರಣದಲ್ಲಿರದ ಹೃದಯದ ಬಡಿತ, ಉಸಿರಾಟ, ಪಾಚಕ ಕ್ರಿಯೆ, ರಕ್ತ ಚಲನೆ, ಇತ್ಯಾದಿ ನಡೆಯುತ್ತಿರುತ್ತದೆ.
ಇದು ನಿದ್ದೆ, ವಿಶ್ರಾಂತಿ; ಆದರೆ ಅದು ನಿಜವಾದ ಪೂರ್ಣ ವಿಶ್ರಾಂತಿಯಲ್ಲ. ಮನಸ್ಸಿನಲ್ಲಿ ಒಂದು ರೀತಿಯ ಚಡಪಡಿಕೆ, ತೊಳಲಾಟ ಅಥವಾ ಬಯಕೆಯನ್ನಿಟ್ಟುಕೊಂಡು ಮಲಗಿದರೆ ಗಾಢವಾಗಿ ನಿದ್ರಿಸಲು ಸಾಧ್ಯವಿಲ್ಲ. ಮನಸ್ಸು ಯೋಜನೆಗಳನ್ನು ಮಾಡುತ್ತಾ, ಹಾಗೇ ಮಾಡುತ್ತಾ ಇದ್ದು ಬಿಡುತ್ತದೆ ಮತ್ತು ನಿದ್ದೆಯಲ್ಲೂ ಆ ಯೋಜನೆಗಳು, ಮಹತ್ವಾಕಾಂಕ್ಷೆಗಳು ಇರುತ್ತವೆ. ಬಹಳ ಮಹತ್ವಾಕಾಂಕ್ಷೆಗಳಿಗೆ ಆಳವಾದ ನಿದ್ದೆ ಬರದ ಕಾರಣ, ಅವರ ಮನಸ್ಸು ಖಾಲಿ ಮತ್ತು ಟೊಳ್ಳಾಗಿ ಇರುವುದಿಲ್ಲ. ಅವರ ಮನಸ್ಸು ಮುಕ್ತವಾಗಿರುವುದಿಲ್ಲ. ಮನಸ್ಸು ನೆಲೆಗೊಂಡಾಗ ಮಾತ್ರ ಪೂರ್ಣವಾದ ವಿಶ್ರಾಂತಿ ಉಂಟಾಗಲು ಸಾಧ್ಯ. ಇಂತಹ ಸ್ಥಿತಿಯಲ್ಲಿ ಧ್ಯಾನವು ಸ್ವಯಂ ಆಗಿಯೇ ಆಗುತ್ತದೆ.