ನಟ ಅಲ್ಲು ಅರ್ಜುನ್ ಬಂಧನ
01:09 PM Dec 13, 2024 IST
|
Samyukta Karnataka
ಹೈದರಾಬಾದ್ : 'ಪುಷ್ಪಾ 2' ವಿಶೇಷ ಪ್ರದರ್ಶನದ ವೇಳೆ ಸಾವಿನ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದಾರೆ.
ಸುಕುಮಾರ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಕತ್ ಫಾಸಿಲ್ ಮುಂತಾದವರು ನಟಿಸಿರುವ 'ಪುಷ್ಪ 2' ಚಿತ್ರ ಇದೇ 5ರಂದು ಬಿಡುಗಡೆಯಾಗಿತ್ತು. ಚಿತ್ರದ ವಿಶೇಷ ಪ್ರದರ್ಶನವನ್ನು ಕಳೆದ 4 ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಪ್ರದರ್ಶಿಸನ ವೇಳೆ ಅಲ್ಲು ಅರ್ಜುನ್ ಭೇಟಿ ನೀಡಿದ್ದರು. ಆಗ ಜನಜಂಗುಳಿ ಉಕ್ಕಿತು. ಈ ವೇಳೆ ನಡೆದ ಕಾಲ್ತುಳಿತದಲ್ಲಿ ಒಬ್ಬ ಮಹಿಳೆ ನಿಧನ ಹೊಂದಿದ್ದರು.. ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ಮತ್ತು ಸಂಧ್ಯಾ ಥಿಯೇಟರ್ ಆಡಳಿತ ಮಂಡಳಿ ವಿರುದ್ಧ ಮಹಿಳೆಯ ಕುಟುಂಬ ಪ್ರಕರಣ ದಾಖಲಿಸಿದೆ. ಈ ವೇಳೆ ಮಹಿಳೆ ಸಾವಿನ ಪ್ರಕರಣದ ತನಿಖೆಗಾಗಿ ನಟ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಇಂದು (ಡಿ.13) ಕರೆದೊಯ್ದಿದ್ದಾರೆ. ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್‌ನ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಕರೆದೊಯ್ಯಲಾಗಿದೆ.
Next Article