ಮನಮೋಹನ ಸಿಂಗ್ ಅವರಿಂದ ಸಲಹೆ ಪಡೆಯುತ್ತಿದ್ದ ಒಬಾಮಾ: ಪರಂ
ಹುಬ್ಬಳ್ಳಿ: ಅಮೇರಿಕಾ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಅವರು ಅನೇಕ ಅರ್ಥಿಕ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಮನಮೋಹನ ಸಿಂಗ್ ಅವರ ಅಭಪ್ರಾಯ, ಸಲಹೆ ಕೆಳುತ್ತಿದ್ದರು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನಮೋಹನ ಸಿಂಗ್ ಅವರು ಭಾರತವನ್ನು ಬದಲಾವಣೆ ಹಾಗೂ ಆರ್ಥಿಕವಾಗಿ ಸದೃಡವನ್ನಾಗಿಸಿದ್ದೇ ಮನಮೋಹನ ಸಿಂಗ್. ಅಮೇರಿಕಾ ಮಾತ್ರಲ್ಲ ಅನೇಕ ದೇಶಗಳ ಅಧ್ಯಕ್ಷರು ಹಾಗೂ ಪ್ರಧಾನಿಗಳು ಸಂಕಷ್ಟದ ಪರಿಸ್ಥಿತಿಯಲ್ಲಿ ಮನಮೋಹನ ಸಿಂಗ್ ಅವರನ್ನು ನೆನೆಸಿಕೊಳ್ಳುತ್ತಿದ್ದರು. ಭಾರತ, ವಿಶ್ವದಲ್ಲೇ ಆರ್ಥಿಕವಾಗಿ ಹೆಸರು ಮಾಡಿದೆ ಎಂದರೆ ಅದಕ್ಕೆ ಮೂಲ ಕಾರಣ ಮನಮೋಹನ್ ಸಿಂಗ್ ಎಂದರು.
1991ರಲ್ಲಿ ನರಸಿಂಹರಾವ್ ಅವರು ಪ್ರಧಾನಮಂತ್ರಿಯಾಗಿದ್ದಾಗ ಮನಮೋಹನ್ ಸಿಂಗ್ ಹಣಕಾಸು ಸಚಿವರಾಗಿ ಹೊಸ ಅಧ್ಯಾಯವನ್ನು ಪ್ರಾರಂಭ ಮಾಡಿದ್ದರು. ಅವರ ಸಾವು ಇಡೀ ವಿಶ್ವಕ್ಕೆ ತುಂಬಲಾಗದ ನಷ್ಟ ಆಗಿದೆ. ಈ ಸಂದರ್ಭದಲ್ಲಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ. ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.