ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಶ್ರೀರಂಗಪಟ್ಟಣದಲ್ಲಿ‌ ಹನುಮ ಮಾಲಾಧಾರಿಗಳ ಘರ್ಜನೆ

07:50 PM Dec 24, 2023 IST | Samyukta Karnataka

ಶ್ರೀರಂಗಪಟ್ಟಣ: ಹನುಮ ಜಯಂತಿ ಅಂಗವಾಗಿ ಶ್ರೀರಂಗಪಟ್ಟಣದಲ್ಲಿ ಹನುಮಮಾಲೆ ಧರಿಸಿದ ಸಹಸ್ರಾರು ಹನುಮ ಭಕ್ತರು ಸಂಕೀರ್ತನಾ ಶೋಭಾ ಯಾತ್ರೆಯನ್ನು ಭಾನುವಾರ ಸಡಗರ ಸಂಭ್ರಮದಿಂದ ನಡೆಸಿದರು.
ಪಟ್ಟಣದ ಹೊರ ವಲಯದಲ್ಲಿರುವ ಗಂಜಾಂನ ನಿಮಿಷಾಂಭ ದೇವಾಲಯದ ಬಳಿಯ ಆಂಜನೇಯಸ್ವಾಮಿ ಡಾ. ಭಾನುಪ್ರಕಾಶ್ ಶರ್ಮಾ ವಿಶೇಷ ಪೂಜೆ ಸಲ್ಲಿಸಿ ಆಂಜನೇಸ್ವಾಮಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಂಕೀರ್ತನಾ ಯಾತ್ರೆಗೆ ಚಾಲನೆ ನೀಡಿದರು.
ಮಂಡ್ಯ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಹನುಮ ಮಾಲಾಧಾರಿಗಳು, ಗಂಜಾಂನಿಂದ ಪಟಣದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯ ಮಾರ್ಗವಾಗಿ ಶ್ರೀ ರಂಗನಾಥಸ್ವಾಮಿ ದೇವಾಲಯದ ಅವರಣದ ವರೆಗೆ ಸುಮಾರು 6 ಕಿ.ಮೀ ಯಾತ್ರೆಯನ್ನು ನಡೆಸಿದರು.
ಬೆಂಗಳೂರು-ಮೈಸೂರು ಹೆದ್ದಾರಿ ಹಾಗೂ ಪಟ್ಟಣದ ಪುರಾತನ ಕೋಟಿ ದ್ವಾರದಲ್ಲಿ ಯಾತ್ರೆ ಸಂಚರಿಸಿ ಪುರಸಭೆ ವೃತ್ತದಲ್ಲಿ ಸುಮಾರು 1 ಗಂಟೆಗೂ ಅಧಿಕ ಸಮಯ ಶ್ರೀ ರಾಮ ಹಾಗೂ ಹನುಮ ಜಪದೊಂದಿಗೆ "ಕಟ್ಟುವೆವು ಮಂದಿರವನ್ನಿಲ್ಲೆ ಕಟ್ಟುವೆವು", "ಶ್ರೀ ರಾಮನ ಪಾದದ ಮೇಲಾಣೆ ಮಂದಿರವಿಲ್ಲೇ ಕಟ್ಟುವೆವು", "ಹನುಮನ ಪಾದದ ಮೇಲಾಣ ಮಂದಿರವನು ಕಟ್ಟುವೆವು" ಎಂಬ ಘೋಷಣೆಯೊಂದಿಗೆ ಜಾಮಿಯಾ ಮಸೀದಿ ಕೆಡವಿ ಮೂಡಲ ಬಾಗಿಲು ಆಂಜನೇಯ ದೇವಾಲಯ ನಿರ್ಮಿಸುವುದಾಗಿ ಮಾಲಾಧಾರಿಗಳು ಪಣತೊಟ್ಟರು.
ಮೆರವಣಿಗೆಯೂದ್ದಕ್ಕೂ ಹಿಂದೂ ಹಾಗೂ ಹನುಮಾ ಮಾಲಾಧಾರಿಗಳು ಕೇಸರಿ ಧ್ವಜ ಹಿಡಿದು, ಭಗವಾ ಧ್ವಜಗಳನ್ನು ಬೀಸಿ, ಜೈ ಶ್ರೀರಾಮ್, ಶ್ರೀರಾಮ್, ಭಜರಂಗಿ ಭಜರಂಗಿ ಎಂಬ ಘೋಷಣೆಗಳು ಮೊಳಗಿಸಿ ಹನುಮ ಚಾಲಿಸ್ ಪಠಿಸಿ ಸಂಭ್ರಮಿಸಿದರು.
ಪುಟ್ಟಮಕ್ಕಳು ಹಾಗೂ ಕೆಲವರು ಶ್ರೀರಾಮ, ಲಕ್ಷಣ, ಹನುಮಂತ ವೇಷ ತೊಟ್ಟು ಗಮನಸೆಳೆದರು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ನಗಾರಿ, ಗೊಂಬೆ ಕುಣಿತ, ತಮಟೆ ಹಾಗೂ ಡಿಜಿ ವಾದ್ಯಗಳೊಂದಿಗೆ ಹನುಮ ಭಕ್ತರು ದಾರಿಯೂದ್ದಕ್ಕೂ ಭಜನೆ, ಕೀರ್ತನೆಗಳನ್ನು ಮಾಡಿದರು. ಧಾರ್ಮಿಕ ವಿಧಿ ವಿಧಾನಗಳಂತೆ ಮಾಲಾಧಾರಿಗಳು ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಾಲಯದಲ್ಲಿ ತಮ್ಮ ಮಾಲೆಗಳನ್ನು ವಿಸರ್ಜಿಸಿದರು.
ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ‌ ಸಂಖ್ಯೆಯಲ್ಲಿ ಪೊಲೀಸ್ ಬೀಗಿ ಭದ್ರತೆ ಒದಗಿಸಲಾಗಿತ್ತು.

Next Article