ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ನಮ್ಮ ನೆಲವನ್ನು ನಾವೆಂದೂ ಬಿಟ್ಟುಕೊಡೋದಿಲ್ಲ...

03:56 PM Oct 30, 2024 IST | Samyukta Karnataka

ವಿಜಯಪುರ: ನಮ್ಮ ನೆಲವನ್ನು ನಾವೆಂದೂ ಬಿಟ್ಟುಕೊಡೋದಿಲ್ಲ ಮತ್ತು ನಮ್ಮ ರೈತರ ಪರವಾಗಿ, ಹಿಂದೂಗಳ ಪರವಾಗಿ ನಾವೆಂದೂ ಇದ್ದೇ ಇರುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಸರಕಾರದ ವಿರುದ್ಧ ಮತ್ತು ವಕ್ಫ್ ಮಂಡಳಿಯ ವಿರುದ್ಧ ಪ್ರತಿಭಟನಾ ನಿರತ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿರುವ ಅವರು ರಾಜಕೀಯ ಲಾಭಕ್ಕಾಗಿ ದೇಶವನ್ನೇ ನಾಶ ಮಾಡಲು ಹೊರಟಿರುವ ಕಾಂಗ್ರೆಸ್, ವಕ್ಫ್ ಮಂಡಳಿಯನ್ನು ಬಳಸಿಕೊಂಡು ಮಠ ಮಂದಿರಗಳ ಭೂಮಿಯನ್ನು, ರೈತರ ಭೂಮಿಗಳನ್ನು ಕಬಳಿಸುವ ಪ್ರಯತ್ನಕ್ಕೆ ಇಳಿದಿದ್ದು, ಯಾವುದೇ ಕಾರಣಕ್ಕೂ ಇದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ. ದಶಮಾನಗಳಿಂದ ತಮ್ಮ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಬಂದ ರೈತರಿಗೆ, ನೂರಾರು ವರ್ಷಗಳಿಂದ ಇರುವ ಮಠ ಮಂದಿರಗಳ ಭೂಮಿಗೆ ವಕ್ಫ್ ಮಂಡಳಿ ನೋಟೀಸ್ ನೀಡಿರುವುದು ನಿಜಕ್ಕೂ ಆತಂಕಕಾರಿ ಮತ್ತು ಇವೆಲ್ಲವೂ ಕಾಂಗ್ರೆಸ್ ಸರಕಾರದ ಕುಮ್ಮಕ್ಕಿನಿಂದಲೇ ನಡೆಯುತ್ತಿರುವ ಕುತಂತ್ರ. ಕಾಂಗ್ರೆಸ್ ತನ್ನ ಮತಬ್ಯಾಂಕ್‌ಗಾಗಿ ದೇಶದಲ್ಲಿ ಹಿಂದೂಗಳಿಗೆ ಜೀವಿಸಲು ಜಾಗವೇ ಇಲ್ಲದಂತೆ ಮಾಡಲು ಕೂಡ ಹಿಂಜರಿಯುವುದಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಆದರೆ ಭಾರತೀಯ ಜನತಾ ಪಕ್ಷ ಇದಕ್ಕೆ ಖಂಡಿತವಾಗಿಯೂ ಅವಕಾಶ ನೀಡುವುದಿಲ್ಲ. ನಮ್ಮ ನೆಲದ ರಕ್ಷಣೆಯನ್ನು ನಾವು ಮಾಡುತ್ತೇವೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿಯೂ ಮತ್ತು ಪಕ್ಷದ ವತಿಯಿಂದ ರಾಜ್ಯಾದ್ಯಂತ ತೀವ್ರವಾದ ಹೋರಾಟ ನಡೆಸಿ ನಮ್ಮ ನಾಡಿನ ರೈತರಿಗೆ ಮತ್ತು ಈ ವಕ್ಫ್ ಮಂಡಳಿಯ ಅಕ್ರಮದಿಂದ ಬೇಸತ್ತ ಎಲ್ಲರಿಗೂ ನ್ಯಾಯ ಒದಗಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಸಂಸದ ಗೋವಿಂದ ಕಾರಜೋಳ, ಶಾಸಕ ರಮೇಶ್ ಜಿಗಜಿಣಗಿ, ಬಸನಗೌಡ ಪಾಟೀಲ ಯತ್ನಾಳ, ರಾಜ್ಯಸಭಾ ಸಂಸದ ನಾರಾಯಣಸಾ ಭಾಂಡಗೆ ಹಾಗೂ ಬಿಜೆಪಿ ಪಕ್ಷದ ಪ್ರಮುಖರು ರೈತ ಮುಖಂಡರು ಹಾಗೂ ಅಪಾರ ಸಂಖ್ಯೆಯಲ್ಲಿ ರೈತ ಮಿತ್ರರು ಉಪಸ್ಥಿತರಿದ್ದರು.

Tags :
#ಕಾಂಗ್ರೆಸ್‌#ಪ್ರಲ್ಹಾದಜೋಶಿ#ಬಸನಗೌಡಪಾಟೀಲಯತ್ನಾಳ#ಬಿಜೆಪಿ#ವಿಜಯಪುರ#ಸತ್ಯಶೋಧನಾ
Next Article