ನಮ್ಮ ಮನೆಗೆ ಶ್ರೀರಾಮ ಬಂದಿದ್ದಾನೆ
05:28 PM Jan 22, 2024 IST
|
Samyukta Karnataka
ಹುಬ್ಬಳ್ಳಿ: ಇಂದು ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿದೆ. 500 ವರ್ಷಗಳ ಕಳಂಕ ದೂರವಾಗಿ, ನಮ್ಮ ಮನೆಗೆ ಶ್ರೀರಾಮ ಬಂದಿದ್ದಾನೆ ಎಂಬ ಸಂಭ್ರಮದಲ್ಲಿ ಇಡೀ ನಾಡಿನ ಜನರಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯಪಟ್ಟರು.
ಶ್ರೇಷ್ಠರೊಬ್ಬರು ಬಂದು ಪ್ರಾಣ ಪ್ರತಿಷ್ಠಾಪನೆ ಮಾಡಲಿ ಎಂದು ಇಷ್ಟ ವರ್ಷಗಳ ಕಾಲ ರಾಮ ಕಾಯುತ್ತಿದ್ದ, ಇಂದು ಶ್ರೇಷ್ಠ ಸಂತ ಮೋದಿ ಅವರಿಂದ ಈ ಕೆಲಸ ನೆರವೇರಿದೆ. ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟು ಮೋದಿ ಅವರು ಕೆಲಸ ಮಾಡುತ್ತಿದ್ದಾರೆ. ಶ್ರೀರಾಮನ ಆದರ್ಶವನ್ನು ಪಾಲಿಸುತ್ತಾ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದರು.
Next Article