For the best experience, open
https://m.samyuktakarnataka.in
on your mobile browser.

‘ಹಿಂದೂಸ್ತಾನವು ಎಂದೂ ಮರೆಯದ.’ ಖ್ಯಾತಿಯ ಗಾಯಕ ಪಿ.ಜಯಚಂದ್ರನ್ ವಿಧಿವಶ

09:55 PM Jan 09, 2025 IST | Samyukta Karnataka
‘ಹಿಂದೂಸ್ತಾನವು ಎಂದೂ ಮರೆಯದ ’ ಖ್ಯಾತಿಯ ಗಾಯಕ ಪಿ ಜಯಚಂದ್ರನ್ ವಿಧಿವಶ

ಕೊಚ್ಚಿ: ಆರು ದಶಕಗಳಿಗೂ ಹೆಚ್ಚು ಕಾಲ ಹಾಡುಗಳ ಮೂಲಕ ಹೃದಯ ಸೂರೆಗೊಂಡಿದ್ದ ಹಿರಿಯ ಮಲಯಾಳಂ ಹಿನ್ನೆಲೆ ಗಾಯಕ ಪಿ. ಜಯಚಂದ್ರನ್(೮೦) ಗುರುವಾರ ನಿಧನರಾದರು. ಅವರು ಪತ್ನಿ ಲಲಿತಾ, ಮಗಳು ಲಕ್ಷ್ಮಿ ಮತ್ತು ಮಗ ದೀನನಾಥನ್ ಅವರನ್ನು ಅಗಲಿದ್ದಾರೆ.
ಅವರ ಪುತ್ರ ದೀನನಾಥನ್ ಕೂಡ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದವರಾಗಿದ್ದಾರೆ ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ೧೬ ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಅವರು ಧ್ವನಿಯನ್ನು ನೀಡಿದ್ದರು. ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಐದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಕೇರಳ ಸರ್ಕಾರದಿಂದ ಜೆ.ಸಿ. ಡೇನಿಯಲ್ ಪ್ರಶಸ್ತಿ, ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿ, ಜೊತೆಗೆ ನಾಲ್ಕು ತಮಿಳುನಾಡು ರಾಜ್ಯ ಪ್ರಶಸ್ತಿಗಳು ಸೇರಿವೆ.
ಸೂಪರ್‌ ಹಿಟ್‌ ಕನ್ನಡ ಹಾಡುಗಳ ಗಾಯಕ
ಕನ್ನಡದಲ್ಲಿ ಪಿ.ಜಯಚಂದ್ರನ್ ಸೂಪರ್‌ ಹಿಟ್‌ ಹಾಡುಗಳನ್ನು ಹಾಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಅಂಬರೀಷ್ ಅಭಿನಯದ ಒಲವಿನ ಉಡುಗೊರೆ ಸಿನಿಮಾದ ‘ಒಲವಿನ ಉಡುಗೊರೆ ಕೊಡಲೇನು..’, ಅಮೃತ ಘಳಿಗೆ ಸಿನಿಮಾದ ‘ಹಿಂದೂಸ್ತಾನವು ಎಂದೂ ಮರೆಯದ..’, ರಂಗನಾಯಕಿ ಸಿನಿಮಾದ ‘ಮಂದಾರ ಪುಷ್ಪವು ನೀನು..’, ಮಾನಸ ಸರೋವರದ ‘ಚಂದ..ಚಂದ..’, ಹಂತಕನ ಸಂಚು ಸಿನಿಮಾದ ‘ಜೀವನ ಸಂಜೀವನ..’. ಭಕ್ತ ಪ್ರಹ್ಲಾದ ಸಿನಿಮಾದ ‘ಕಮಲ ನಯನ.. ಕಮಲ ವದನ..’ ಪ್ರಾಯ ಪ್ರಾಯ ಪ್ರಾಯ ಸಿನಿಮಾದ ‘ಭೂಮಿ ತಾಯಾಣೆ, ನೀ ಇಷ್ಟ ಕಣೆ..’ ಹಾಗೂ ಮಸಣದ ಹೂವು ಚಿತ್ರದ ‘ಕನ್ನಡ ನಾಡಿನ ಕರಾವಳಿ..’ ಯಂಥ ಸುಪ್ರಸಿದ್ಧ ಗೀತೆಗಳಿಗೆ ಅವರು ದನಿಯಾಗಿದ್ದರು.