ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆಗೆ ಕೆನಡಾಕ್ಕೆ ಭಾರತದ ಆಹ್ವಾನ
08:51 PM Aug 29, 2024 IST
|
Samyukta Karnataka
ನವದೆಹಲಿ: ಭಾರತದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ಸಚಿವ ಪ್ರಲ್ಹಾದ ಜೋಶಿ ಅವರು ಕೆನಡಾಕ್ಕೆ ಆಹ್ವಾನ ನೀಡಿದ್ದಾರೆ.
ನವದೆಹಲಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಕೆನಡಾ ಮೂಲದ CDPQ Global ಮುಖ್ಯಸ್ಥರೊಂದಿಗೆ ಈ ಬಗ್ಗೆ ಚರ್ಚಿಸಿದರು.
ವಿಶ್ವದ ಅತಿದೊಡ್ಡ ಮತ್ತು ವೈವಿಧ್ಯಮಯ ಸಾಂಸ್ಥಿಕ ಹೂಡಿಕೆದಾರರಲ್ಲಿ ಒಂದಾದ Caisse de dépôt et placement du Québec (CDPQ) Global ಮುಖ್ಯಸ್ಥ ಮಾರ್ಕ್-ಆಂಡ್ರೆ ಬ್ಲಾಂಚಾರ್ಡ್ ಅವರೊಂದಿಗೆ ಸಚಿವ ಪ್ರಲ್ಹಾದ ಜೋಶಿ ಮಹತ್ವದ ಚರ್ಚೆ ನಡೆಸಿದರು.
ಇದೇ ವೇಳೆ ಸಚಿವರು, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಸಾಧಿಸುತ್ತಿರುವ ಅದ್ಭುತ ಪ್ರಗತಿಯ ಬಗ್ಗೆ ಕೆನಡಾದ ಗ್ಲೋಬಲ್ ಕಂಪನಿ ಮುಖ್ಯಸ್ಥರೊಂದಿಗೆ ಅಗತ್ಯ ಮಾಹಿತಿಯನ್ನು ಸಚಿವ ಪ್ರಲ್ಹಾದ ಜೋಶಿ ಹಂಚಿಕೊಂಡರು.
ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ ಸಚಿವ ಪ್ರಲ್ಹಾದ ಜೋಶಿ, ರೀ ಇನ್ವೆಸ್ಟ್-2024ನಲ್ಲಿ ಭಾಗವಹಿಸಲು ಅವರಿಗೆ ಆಹ್ವಾನ ನೀಡಿದರು.
Next Article