ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ನವೀಕರಿಸಬಹುದಾದ ಇಂಧನ ಕ್ಷೇತ್ರ; ಸೆ.16ರಿಂದ 4ನೇ ಜಾಗತಿಕ ಮರು ಹೂಡಿಕೆ ಸಮಾವೇಶ

10:04 AM Sep 10, 2024 IST | Samyukta Karnataka

ನವದೆಹಲಿ: ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಗುಜರಾತ್ ಅಲ್ಲಿ ಸೆ.16ರಿಂದ ಮೂರು ದಿನ 4ನೇ ಜಾಗತಿಕ ಹೂಡಿಕೆ ಸಮಾವೇಶ ಮತ್ತು Re invest expo ಆಯೋಜಿಸಿದೆ.

ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರು ಮಾಧ್ಯಮದವರೊಂದಿಗೆ ಈ ಬಗ್ಗೆ ಮಾಹಿತಿ ಹಂಚಿಕೊಂಡರು.

ಗುಜರಾತ್ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಪಾಲುದಾರಿಕೆಯೊಂದಿಗೆ ಸೆ.16,17 ಮತ್ತು 18ರಂದು ಈ ಮಹತ್ವದ ಇವೆಂಟ್ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಆಸ್ಟ್ರೇಲಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ನಾರ್ವೆ 4ನೇ ಮರು ಹೂಡಿಕೆಗೆ ಪಾಲುದಾರ ರಾಷ್ಟ್ರಗಳಾಗಿವೆ. ಅಂತೆಯೇ ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ, ತೆಲಂಗಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳು ಈವೆಂಟ್‌ನ ಪಾಲುದಾರ ರಾಜ್ಯಗಳಾಗಿವೆ ಎಂದು ಸಚಿವರು ವಿವರಿಸಿದರು.

ಈ ಸಮಾವೇಶದಲ್ಲಿ ಪ್ರಮುಖ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ನವೀಕರಿಸಬಹುದಾದ ಇಂಧನ ವಲಯದಲ್ಲಿ ತಮ್ಮ ಪ್ರಸ್ತಾವಿತ ಸಾಲಗಳು/ನಿಧಿಯ ಬಗ್ಗೆ ಶಪತ್ ಪತ್ರವನ್ನು ನೀಡುತ್ತವೆ. ಅಲ್ಲದೇ, ಡೆವಲಪರ್‌ಗಳು, ತಯಾರಕರು, ಖಾಸಗಿ ಈಕ್ವಿಟಿ ಹೂಡಿಕೆದಾರರು, ಉನ್ನತ ಮಾರಾಟಗಾರರು ಸಹ ಶಪತ್‌ಪತ್ರವನ್ನು ನೀಡಲಿದ್ದಾರೆ ಎಂದು ತಿಳಿಸಿದರು.

ಆಸ್ಟ್ರೇಲಿಯಾ, ಡೆನ್ಮಾರ್ಕ್, ಜರ್ಮನಿ, ನಾರ್ವೆ, ಸಿಂಗಾಪುರ್, ಹಾಂಗ್‌ಕಾಂಗ್, ಯುಎಸ್‌ಎ, ಯುಕೆ, ಬೆಲ್ಜಿಯಂ, ಯುರೋಪಿಯನ್ ಯೂನಿಯನ್, ಓಮನ್, ಯುಎಇ ಸೇರಿದಂತೆ ಅನೇಕ ದೇಶಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ಸಮ್ಮೇಳನದಲ್ಲಿ 10,000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಮುಖ್ಯಮಂತ್ರಿಗಳ ಪೂರ್ಣ ಸಭೆ, ಸಿಇಒ ರೌಂಡ್‌ಟೇಬಲ್ ಮತ್ತು ಹಲವಾರು ರಾಜ್ಯ, ದೇಶ ಮತ್ತು ತಾಂತ್ರಿಕವಾಗಿ 44 ಅಧಿವೇಶನಗಳನ್ನು ಒಳಗೊಂಡಿದೆ ಎಂದು ಹೇಳಿದರು.

ಸ್ಟಾರ್ಟ್ ಅಪ್ ಗಳ ವಿಶೇಷ ಆಕರ್ಷಣೆ:
ಹಸಿರು ಇಂಧನ ಶಕ್ತಿ ಪರಿವರ್ತನೆ ವೇಗಗೊಳಿಸುವಲ್ಲಿ ಮಹಿಳೆಯರು ನಾಯಕರಾಗಿ: ಸವಾಲುಗಳು ಮತ್ತು ಅವಕಾಶಗಳು ಹಾಗೂ 10 ಸೋಲಾರ್ ಎಕ್ಸ್ ಚಾಲೆಂಜ್ ಇಂಡಿಯಾ ವಿಜೇತರು ಹೂಡಿಕೆಗಾಗಿ ಆಯ್ಕೆ ಮಾಡುವ ಸ್ಟಾರ್ಟ್-ಅಪ್‌ಗಳ ಕುರಿತು ವಿಶೇಷ ಅಧಿವೇಶನವು ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿದೆ ಎಂದು ಹೇಳಿದರು.

ಜಾಗತಿಕವಾಗಿ ಭಾರತಕ್ಕೆ 4ನೇ ಸ್ಥಾನ:
ಭಾರತವು ಮುಂದಿನ ಪೀಳಿಗೆಗೆ ಹಸಿರು ಇಂಧನದ ಸುಸ್ಥಿರ ಭವಿಷ್ಯವನ್ನು ನಿರ್ಮಿಸುವ ಪ್ರಾಮುಖ್ಯತೆ ಹೊಂದಿದ್ದು, 2030ರ ವೇಳೆಗೆ ಭಾರತ 500 GW ಪಳೆಯುಳಿಕೆ ರಹಿತ ವಿದ್ಯುತ್ ಸಾಮರ್ಥ್ಯ ಸಾಧಿಸುವ ಹಾದಿಯಲ್ಲಿದೆ. ವಿಶ್ವದ ನವೀಕರಿಸಬಹುದಾದ ಇಂಧನ ಮಾರುಕಟ್ಟೆಗಳಲ್ಲಿ ಜಾಗತಿಕವಾಗಿ 4ನೇ ಸ್ಥಾನದಲ್ಲಿದೆ ಎಂದು ಸಚಿವ ಜೋಶಿ ತಿಳಿಸಿದರು.

RE-INVEST 2024 ಉತ್ಪಾದನೆ ಮತ್ತು ನಿಯೋಜನೆ ಸೇರಿದಂತೆ ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತದ ಮಹತ್ವದ ಸಾಧನೆಯನ್ನು ಎತ್ತಿ ತೋರಿಸುವ ಗುರಿಯನ್ನು ಹೊಂದಿದೆ ಎಂದು ಇದೇ ವೇಳೆ ಪ್ರತಿಪಾದಿಸಿದರು.

Next Article