For the best experience, open
https://m.samyuktakarnataka.in
on your mobile browser.

ನಾಡಗೀತೆಯ ಜತೆಗೆ ರಾಷ್ಟ್ರಗೀತೆ ಹಾಡು, ಇಲ್ಲದಿದ್ದಲ್ಲಿ ಸರ್ಕಾರದ ವಿರುದ್ಧ ದಂಗೆ ಖಂಡಿತ

12:53 PM Feb 21, 2024 IST | Samyukta Karnataka
ನಾಡಗೀತೆಯ ಜತೆಗೆ ರಾಷ್ಟ್ರಗೀತೆ ಹಾಡು  ಇಲ್ಲದಿದ್ದಲ್ಲಿ ಸರ್ಕಾರದ ವಿರುದ್ಧ ದಂಗೆ ಖಂಡಿತ

ಬೆಂಗಳೂರು: ನಾಡಗೀತೆಯ ಜತೆಗೆ ರಾಷ್ಟ್ರಗೀತೆ ಹಾಡುವಂತೆ ಕಡ್ಡಾಯಗೊಳಿಸಿ ಆದೇಶಿಸಬೇಕು. ಇಲ್ಲದಿದ್ದಲ್ಲಿ ಈ ನಾಡದ್ರೋಹಿ ಸರ್ಕಾರದ ವಿರುದ್ಧ ದಂಗೆಯೇಳುವುದು ಖಂಡಿತ ಎಂದು ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಎಚ್ಚರಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ನಾಡದ್ರೋಹಿ ಕಾಂಗ್ರೆಸ್ ಸರ್ಕಾರ ಪ್ರತಿದಿನ ಕನ್ನಡ ಮತ್ತು ಕರ್ನಾಟಕದ ವಿರೋಧಿ ಆದೇಶಗಳನ್ನು ನೀಡುತ್ತಾ ಕನ್ನಡಿಗರನ್ನು ಕಾಲಕಸದಂತೆ ಕಾಣುತ್ತಿದೆ.

ಮೊನ್ನೆಯಷ್ಟೇ ರಾಜ್ಯದ ಶಾಲೆಗಳ ದ್ವಾರದಲ್ಲಿರುವ ರಾಷ್ಟ್ರಕವಿ ಶ್ರೀ ಕುವೆಂಪು ಅವರ "ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ" ಎಂಬ ವಾಕ್ಯವನ್ನೇ ತಿರುಚಿ ಅವಮಾನಿಸಿತ್ತು. ಈಗ ರಾಜ್ಯದಲ್ಲಿ ಖಾಸಗಿ ಶಾಲೆಗಳಲ್ಲಿ ನಮ್ಮ ನಾಡು ನುಡಿ ಪರಂಪರೆಗಳ ಹಿರಿಮೆಯನ್ನು ಎತ್ತಿ ಹಿಡಿದು ಭಾರತಾಂಬೆಯ ಮಗಳು ಕರ್ನಾಟಕ ಎಂದು ಬಿಂಬಿತವಾಗಿರುವ ನಮ್ಮ ನಾಡಗೀತೆಯನ್ನು ಹಾಡುವುದು ಕಡ್ಡಾಯವಲ್ಲ ಎಂದು ಆದೇಶಿಸಿದೆ ಕಾಂಗ್ರೆಸ್ ಸರ್ಕಾರ. ನಾಡಿನಲ್ಲಿರುವ ಎಲ್ಲ ಶಾಲೆಗಳಲ್ಲಿಯೂ ನಾಡಗೀತೆಯ ಜತೆಗೆ ರಾಷ್ಟ್ರಗೀತೆಯನ್ನು ಹಾಡುವಂತೆ ಕಡ್ಡಾಯಗೊಳಿಸಿ ಆದೇಶಿಸಬೇಕು. ಇಲ್ಲದಿದ್ದಲ್ಲಿ ಈ ನಾಡದ್ರೋಹಿ ಸರ್ಕಾರದ ವಿರುದ್ಧ ದಂಗೆಯೇಳುವುದು ಖಂಡಿತ ಎಂದಿದ್ದಾರೆ.