ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ನಾನು ಫಕೀರಿ ಮಾತಾಡ್ತಾ ಇದೀನಿ…

03:30 AM Oct 17, 2024 IST | Samyukta Karnataka

ವಾಳದ ಫಕೀರಿ ಖಾಸಗಿ ಬ್ಯಾಂಕಿನಲ್ಲಿ ಭಾರೀ ಕೆಲಸ ಮಾಡುತ್ತಿದ್ದಳು. ಪ್ರತಿದಿನ ಅವರಿವರಿಗೆ ಕರೆ ಮಾಡಿ.. ನಾನು ಫಕೀರಿ ಮಾತಾಡ್ತಾ ಇದೀನಿ. ನಿಮಗೆ ಲೋನ್ ಬೇಕಾ… ಹದಿನೈದೇ ದಿನಗಳಲ್ಲಿ ಎಲ್ಲ ರೆಡಿ ಮಾಡಿ ಕೊಡುತ್ತೇವೆ. ಎಂದು ಸುಂದರವಾಗಿ ಮಾತನಾಡುತ್ತಿದ್ದಳು. ಆಕೆ ಎಷ್ಟೊಂದು ಫೇಮಸ್ ಆಗಿದ್ದಳು ಎಂದರೆ.. ಆಕೆಯ ಕಾಲ್‌ಗಾಗಿಯೇ ಕಾಯುವ ಒಂದು ವರ್ಗವಿತ್ತು. ಅವರಿವರಿಗೆ ಹೇಳಿಸಿ ಆಕೆಯಿಂದ ಕರೆ ಮಾಡಿಸಿಕೊಳ್ಳುವ ಜನರೂ ಇದ್ದರು. ಊರಿನಲ್ಲಿ ಹೊರಟರೆ ಸಾಕು… ಇವಳೇ ನೋಡಿ ಲೋನ್‌ಗೆ ಫೋನ್ ಮಾಡೋಳು ಎಂದು ದೂರದಿಂದ ನೋಡಿ ಮಾತನಾಡಿಕೊಳ್ಳುತ್ತಿದ್ದರು. ಆಕೆಯ ಓಣಿಯ ಪಡ್ಡೆ ಹುಡುಗರೆಲ್ಲ ಆಕೆಯ ಅಪ್ಪನನ್ನು ನಿಲ್ಲಿಸಿ ಮಾತನಾಡಿಸುತ್ತಿದ್ದರು. ಪಕ್ಕದ ಮನೆಯ ಲೊಂಡೆನುಮ ಈಕೆಯ ಕ್ಲಾಸ್‌ಮೆಟ್ ಆಗಿದ್ದ. ಮೊದಲಿಗೆ ಮಾತನಾಡಿಸುತ್ತಿದ್ದಳು. ಯಾವಾಗ ಬ್ಯಾಂಕಿನಲ್ಲಿ ಲೋನ್ ಬೇಕಾ ಎಂಬ ನೌಕರಿ ಸಿಕ್ಕಿತೋ ಆವಾಗಿನಿಂದ ಲೊಂಡೆನುಮನನ್ನು ಇಗ್ನೋರ್ ಮಾಡುತ್ತಿದ್ದಳು. ಇದು ಲೊಂಡೆನುಮನಿಗೂ ತಿಳಿಯಿತು. ಗೆಳೆಯರ ಮುಂದೆ ಮನಸ್ಸಿನ ನೋವನ್ನು ಹೇಳಿಕೊಳ್ಳುತ್ತಿದ್ದ. ಗೆಳೆಯರೂ ಸಹ ಲೊಂಡೆನುಮನ ಸ್ಥಿತಿಗೆ ಮರುಗಿ ಕೆಲವೊಂದು ಸಲಹೆ ಕೊಡುತ್ತಿದ್ದರು. ಆಕೆಯನ್ನು ಖೆಡ್ಡಾಕ್ಕೆ ಕೆಡವಬೇಕು ಎಂದು ಪ್ರತಿದಿನ ಲೊಂಡೆನುಮ ಯೋಚಿಸುತ್ತಿದ್ದ. ಕೆಲವೊಂದು ಬಾರಿ ಗೆಳೆಯರ ಸಲಹೆಯನ್ನು ಇಂಪ್ಲಿಮೆಂಟ್ ಮಾಡಿದರೂ ಸಹ ಪ್ರಯೋಜನವಾಗಲಿಲ್ಲ. ಆಕೆಯ ಬ್ಯಾಂಕಿನಲ್ಲಿ ಒಬ್ಬನನ್ನು ಹಿಡಿದು ಪ್ರತಿದಿನ ಆಕೆ ಬರುವ ಮುಂಚೆಯೇ ಹಾಳೆಯಲ್ಲಿ ಮೊಬೈಲ್‌ನಂಬರ್ ಬರೆದು.. ಇದಕ್ಕೆ ಮಾಡಬೇಕಂತೆ, ಏನೋ ಲೋನಿನ ಸಂಬಂಧವಂತೆ ಎಂದು ಹೇಳಿ ಹೋಗುತ್ತಿದ್ದ. ಅದರಂತೆ ಆಕೆ ಒಂದು ದಿನ ಕರೆ ಮಾಡಿ… ನಾನು ಫಕೀರಿ ಮಾತಾಡ್ತಾ ಇದೀನಿ ಅಂದಳು. ಅದಕ್ಕೆ ಆ ಕಡೆಯಿಂದ ಹೇಳಿ… ಏನ್ಬೇಕಾಗಿತ್ತು ಎಂದು ಲೊಂಡೆನುಮ ಕೇಳಿದ. ಸಾರ್ ನೀವು ಲೋನ್ ತೆಗೆದುಕೊಳ್ಳಲು ಇಷ್ಟಪಡುತ್ತೀರಾ? ಅಂದಾಗ ಹೌದು ಅಂದ. ಸಾರ್ ಯಾವುದಕ್ಕೆ ಲೋನ್ ಬೇಕಾಗಿತ್ತು ಅಂದಾಗ… ಮೇಡಂ ನೀವು ಯಾವುದಕ್ಕಾದರೂ ಕೊಡುತ್ತೀರಾ ಎಂದು ಕೇಳಿದ. ಆಕೆ ಹೂಂ ಅಂದಳು. ಅದಕ್ಕೆ ಲೊಂಡೆನುಮ ಏನಿಲ್ಲ ಮೇಡಂ…. ನನಗೆ ನಾಲ್ಕು ತೆಗೆದುಕೊಳ್ಳುವುದಿದೆ. ಅವುಗಳನ್ನು ರೂಟಿನಲ್ಲಿ ಓಡಿಸಲು ಬಿಡುತ್ತೇನೆ. ಇನ್‌ಕಂ ಜಾಸ್ತಿನೇ ಇರುತ್ತದೆ. ನಿಮ್ಮ ಲೋನ್ ಬೇಗನೇ ತೀರುತ್ತದೆ ಅಂದಾಗ… ಖುಷಿಯಾದ ಆಕೆ ಹೌದಾ ಸಾರ್… ಏನು ತಗಳೋಕೆ ಸಾರ್ ಅಂದಳು.. ಅದಕ್ಕೆ ಲೊಂಡೆನುಮ ಅಯ್ಯೋ ನಾನು ಟ್ರೇನ್ ತೆಗೆದುಕೊಳ್ಳಬೇಕೆಂದು ಮಾಡಿದ್ದೆ ಅಂದಾಗ ಫಕೀರಿ ಅಯ್ಯೋ ಎಂದು ಫೋನ್ ಕಟ್ ಮಾಡಿದಳು. ಇದು ಪ್ರತಿದಿನ ಮುಂದುವರೆಯಿತು. ಪರಫಾರ್ಮನ್ಸ್ ಇಲ್ಲ ಅಂದು ಫಕೀರಿಯನ್ನು ಬೇರೆ ಸೆಕ್ಷನ್‌ಗೆ ವರ್ಗಾಯಿಸಲಾಯಿತು.

Next Article