For the best experience, open
https://m.samyuktakarnataka.in
on your mobile browser.

ನಾಳೆ ಮೆಟ್ರೋ ಸಂಚಾರ ಬೇಗನೆ ಆರಂಭ

04:13 PM Mar 09, 2024 IST | Samyukta Karnataka
ನಾಳೆ ಮೆಟ್ರೋ ಸಂಚಾರ ಬೇಗನೆ ಆರಂಭ

ವಿಷಯ: ನಮ್ಮ ಮೆಟ್ರೋ ಸೇವೆ ದಿನಾಂಕ ಭಾನುವಾರದಂದು ಬೆಳಗ್ಗೆ 6ರಿಂದಲೇ ಸೇವ ಪ್ರಾರಂಬಿಸಲಿದೆ ಎಂದುಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ.
ಈ ಕುರಿತಂತೆ ಸುತ್ತೋಲೆ ಹೊರಡಿಸಿದ್ದು ಬೆಂಗಳೂರಿನಲ್ಲಿ ದಿನಾಂಕ 10ನೇ ಮಾರ್ಚ್ 2024 ಭಾನುವಾರದಂದು ಕರ್ನಾಟಕ ಪೊಲೀಸ್ ವತಿಯಿಂದ ಆಯೋಜಿಸಲಾಗಿರುವ ರಾಜ್ಯ ಮಟ್ಟದ 10K/5K ರನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸುಗಮವಾಗಿ ಭಾಗವಹಿಸಲು ಬಿಎಂಆರ್‌ಸಿಎಲ್, ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ಎಲ್ಲಾ ನಾಲ್ಕು ಟರ್ಮಿನಲ್‌ಗಳಿಂದ ದಿನಾಂಕ 10.03.2024 ರಂದು ಬೆಳಿಗ್ಗೆ 07.00ರ ಬದಲಾಗಿ 06.00 ಗಂಟೆಗೆ ಪ್ರಾರಂಭಿಸಲಿದೆ ಎಂದು ತಿಳಿಸಿದೆ.