ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ನಿಜವಾದ ಯಶಸ್ಸು ಎಂದರೇನು

04:00 AM Feb 24, 2024 IST | Samyukta Karnataka

ನಿಜವಾದ ಯಶಸ್ಸೆಂದರೇನು? ಜಗತ್ತಿನಾದ್ಯಂತ ಅನೇಕ ಯಶಸ್ವಿ ಜನರನ್ನು ಕಂಡಾಗ, ಇವರೆಲ್ಲರೂ ಮುಗುಳ್ನಕ್ಕು ಎಷ್ಟೋ ದಶಕಗಳಾಗಿ ಬಿಟ್ಟಿದೆಯೋನೊ ಎನ್ನಿಸುತ್ತದೆ. ಇವರಿಗೆ ಅಧಿಕ ರಕ್ತದೊತ್ತಡ, ಮಧುಮೇಹ, ಹೊಟ್ಟೆಯ ಸಮಸ್ಯೆಗಳು, ನಿದ್ರಾಹೀನತೆ, ಇತ್ಯಾದಿ ಕಾಯಿಲೆಗಳಿರುತ್ತವೆ. ಅನೇಕರು ಈಗಾಗಲೇ ಸ್ಮಶಾನದತ್ತ ಮುಖ ಮಾಡಿ ಜೀವನ ನಡೆಸುತ್ತಿರುವರೇನೊ ಎನ್ನಿಸುತ್ತದೆ.
ಯಶಸ್ಸಿನ ಹಿಂದೆ ಓಡುತ್ತಾ ಜೀವನವು ಬಲು ಭಾರಿಯಾಗಿ ಬಿಡುತ್ತದೆ. ಸ್ವಲ್ಪವೂ ಶಕ್ತಿ, ಉತ್ಸಾಹ ಮತ್ತು ವಿಶ್ವಾಸವಿರುವುದಿಲ್ಲ. ಒಂದು ಉನ್ನತ ಪದವಿಯನ್ನು ಪಡೆದುಕೊಳ್ಳಲು ಬಹಳ ಕಷ್ಟಪಟ್ಟು ದುಡಿಯುತ್ತಾರೆ. ಆ ಪದವಿ ದೊರೆತ ನಂತರ ಸದಾ ಅದನ್ನು ಕಳೆದುಕೊಳ್ಳುವ ಭೀತಿಯಲ್ಲಿ ಜೀವಿಸುತ್ತಾರೆ ಮತ್ತು ತಮ್ಮ ಎಲ್ಲಾ ಸಮಯವನ್ನೂ ಇತರರನ್ನು ದೂಷಿಸುವುದರಲ್ಲಿ ಅಥವಾ ಸಂಶಯಿಸುವುದರಲ್ಲಿ ಕಳೆಯುತ್ತಾರೆ.
ಆದರೆ ನಮ್ಮ ಅಭಿಮತದಲ್ಲಿ ಯಶಸ್ಸಿನ ಲಕ್ಷಣಗಳೇ ಬೇರೆ. ಏನೇ ಆದರೂ ಮಾಸದೇ ಇರುವ ಮುಗುಳ್ನಗೆ ಯಶಸ್ಸಿನ ಚಿಹ್ನೆ. ಏನೇ ಆದರೂ ಕುಗ್ಗದ ವಿಶ್ವಾಸವೇ ಯಶಸ್ಸಿನ ಚಿಹ್ನೆ. ಸಣ್ಣಪುಟ್ಟ ವಿಷಯಗಳಿಗೆ ಜನರು ವಿಚಲರಾಗಿ ಬಿಡಿತ್ತಾರೆ. ಇದನ್ನು ಹೇಗೆ ಯಶಸ್ಸು ಎನ್ನುವುದು? ನಿರ್ಭೀತಿಯೇ ಯಶಸ್ಸಿನ ಲಕ್ಷಣ.
ಯಶಸ್ವಿಯಾದ ವ್ಯಕ್ತಿಯು ಎಂದಿಗೂ ಇತರರಿಗೆ ಸೇರಿದ್ದನ್ನು ಕದಿಯಲು ಹೋಗುವುದಿಲ್ಲ. ಎಲ್ಲಿ ಹೋದರೂ ಸಂಪತ್ತನ್ನು ಸೃಷ್ಟಿಸುವ ವಿಶ್ವಾಸ ಅವರಲ್ಲಿರುವುದರಿಂದ, ಅನೈತಿಕವಾಗಿ ಸಂಪತ್ತನ್ನು ಗಳಿಸುವ ಮಾರ್ಗವನ್ನೇಕೆ ಅನುಸರಿಸಲು ಹೋಗುತ್ತಾರೆ ? ಯಾರಲ್ಲಿ ಸಂಪತ್ತನ್ನು ಸೃಷ್ಟಿಸಬಲ್ಲೆನು ಎಂಬ ವಿಶ್ವಾಸವಿಲ್ಲವೊ ಅಂತಹವರು ಅನೈತಿಕವಾದ ರೀತಿಯಲ್ಲಿ ಹಣವನ್ನು ಗಳಿಸುವ ಕಾರ್ಯದಲ್ಲಿ ತೊಡಗುತ್ತಾರೆ. ನಂತರ ಸೆರೆವಾಸವನ್ನು ಅನುಭವಿಸುತ್ತಾರೆ.
ಇವರ ಯಶಸ್ಸು ಅಲ್ಪಕಾಲಿಕವಾದದ್ದು. ಇದು ಒಂದು ಸಮಾಜ, ಕುಟುಂಬ ಅಥವಾ ಒಂದು ವ್ಯಕ್ತಿಯ ಯಶಸ್ಸನ್ನು ಸೂಚಿಸುವುದಿಲ್ಲ. ಒಂದು ಪ್ರಗತಿಯುತ, ಯಶಸ್ವಿಯಾದ ಸಮಾಜದ ಲಕ್ಷಣವೆಂದರೆ ಆಸ್ಪತ್ರೆಗಳಲ್ಲಿ ಸದಾ ಹಾಸಿಗೆಗಳು ಲಭ್ಯವಾಗಿರಬೇಕು ಮತ್ತು ಕಾರಾಗೃಹವು ಖಾಲಿಯಾಗಿರಬೇಕು. ಇಂದು ಆಸ್ಪತ್ರೆಗಳೆಲ್ಲವೂ ತುಂಬಿ ಹೋಗಿವೆ ಮತ್ತು ಕಾರಾಗೃಹಗಳಲ್ಲಿ ಸ್ಥಳವಿಲ್ಲದಂತಾಗಿದೆ. ಇದು ಯಶಸ್ವಿಯಾದ ಜೀವನವಲ್ಲ. ನಿಜವಾದ ಸಾರವನ್ನು ಎಲ್ಲೋ ಮರೆತುಬಿಟ್ಟಿದ್ದೇವೆ. ನಮ್ಮ ಯಶಸ್ಸಿನ್ನು ಅಳೆಯುವ ರೀತಿಗಳನ್ನೀಗ ಬದಲಿಸಿಕೊಳ್ಳಬೇಕಾಗಿದೆ.
ನಮ್ಮ ಅರ್ಧ ಆರೋಗ್ಯವನ್ನು ವ್ಯಯ ಮಾಡಿ ಸಂಪತ್ತನ್ನು ಗಳಿಸುತ್ತೇವೆ. ನಂತರ ಅರ್ಧ ಸಂಪತ್ತನ್ನು ವ್ಯಯ ಮಾಡಿ ಆರೋಗ್ಯವನ್ನು ಗಳಿಸುವ ಯತ್ನದಲ್ಲಿ ತೊಡಗುತ್ತೇವೆ. ಹಣವನ್ನು ಗಳಿಸಲು ಬುದ್ಧಿವಂತಿಕೆಯುಳ್ಳ ರೀತಿಯು ಇದಲ್ಲ. ಇದರಿಂದ ನಾವು ಸಂತೋಷವಾಗಿರಲು ಸಾಧ್ಯವೇ ಇಲ್ಲ. ಸಂತೋಷ ಮತ್ತು ಯಶಸ್ಸು ಒಂದಕ್ಕೊಂದು ಪೂರ್ಣವಾಗಿ ಸಂಬಂಧಪಟ್ಟಿರಬೇಕು. ಏರಿಳಿತಗಳು ಆಗುತ್ತಲೇ ಇರುತ್ತವೆ. ಆದದ್ದು ಆಗಿಹೋಯಿತೆಂದು ಬಿಟ್ಟು ವಿಶ್ವಾಸ, ಕರುಣೆಯಿಂದ, ಮುಕ್ತ ಮನಸ್ಸಿನಿಂದ ಮುನ್ನಡೆಯಬೇಕು.

Next Article