For the best experience, open
https://m.samyuktakarnataka.in
on your mobile browser.

ನಿನ್ನ ಧರ್ಮದಿಂದ ನಿನಗೆ ಶುಭವಾಗಲಿ

02:15 AM Mar 01, 2024 IST | Samyukta Karnataka
ನಿನ್ನ ಧರ್ಮದಿಂದ ನಿನಗೆ ಶುಭವಾಗಲಿ

ಇನ್ನೊಂದು ಧರ್ಮದ ಅಧ್ಯಯನ ಮಾಡುವಾಗ ಆಗಲಿ ಅಥವಾ ಅದರ ತತ್ವಗಳನ್ನು ಕುರಿತು ಮಾತನಾಡುವಾಗ ಆಗಲಿ, ಕುರಾನಿನ ವಿವಿಧ ಅಧ್ಯಾಯಗಳು ಹಾಗೂ ಹಲವಾರು ಶ್ಲೋಕಗಳು ಮಾರ್ಗದರ್ಶಿಯಾಗುತ್ತವೆ.
ಕುರಾನಿನ ಈ ಚಿಕ್ಕ ಅಧ್ಯಾಯ ಕಾಫಿರೂನ್ (೧೦೯- ೧ರಿಂದ೬ ಶ್ಲೋಕಗಳು) ನೋಡಿ. ನಾವು ಒಬ್ಬರಿಗೊಬ್ಬರು ಬೇರೆ ಬೇರೆ ಧರ್ಮದವರಾಗಿ ಬೇರೆ ಬೇರೆ ದೇವರನ್ನು ಪೂಜಿಸುತ್ತೇವೆ. ನಿಮ್ಮ ಧರ್ಮ ನಿಮಗೆ ಶುಭವಾಗಲಿ ನಮ್ಮ ಧರ್ಮ ನಮಗೆ ಶುಭವಾಗಲಿ' ಎಂಬ ಸಂದೇಶವನ್ನು ನೀಡುತ್ತದೆ. ಕುರಾನಿನ ಈ ಅಧ್ಯಾಯ ಮಾಯದ (೫:೬೯) ಶ್ಲೋಕದಲ್ಲಿಯಾರು ದೇವರಲ್ಲಿ, ಪ್ರಳಯ ಕಾಲದಲ್ಲಿ ನಂಬಿಕೆಯನ್ನಿಟ್ಟು ಒಳ್ಳೆಯ ಕಾಯಕದಲ್ಲಿ ತೊಡಗಿದ್ದರೆ ಅವರು ಯಾರೇ ಆಗಲಿ ಚಂದ್ರನನ್ನು ಪೂಜಿಸುವವರಾದರೂ ಅವರಿಗೆ ಕೊನೆಯ ವಿಚಾರಣೆಯ ದಿನ ಶುಭವಾಗುವುದು'.
ಇನ್ನೊಂದು ಅಧ್ಯಾಯ ಯೂನುಸ್ (೧೦-೧೯) ಶ್ಲೋಕದಲ್ಲಿ ಆರಂಭದಲ್ಲಿ ಮಾನವರೆಲ್ಲರೂ ಒಂದೇ ಸಮುದಾಯದವರಿದ್ದರು. ಅನಂತರ ಅವರು ವಿವಿಧ ತತ್ವ, ಆದರ್ಶಗಳನ್ನು ಮಾಡಿಕೊಂಡರು'. ಹೀಗೆ ಅನೇಕ ಪ್ರಸಂಗಗಳಲ್ಲಿಕುರಾನ್ ನಿಮ್ಮೆಲ್ಲರನ್ನು ಒಬ್ಬ ಪುರುಷ ಹಾಗೂ ಒಬ್ಬ ಸ್ತ್ರೀಯಿಂದ ಸೃಷ್ಟಿಸಲಾಗಿದ್ದು ನೀವು ಪರಸ್ಪರ ಗುರುತಿಸಲು ನಿಮ್ಮನ್ನು ವಿವಿಧ ಜನಾಂಗಗಳಾಗಿ, ಪಂಗಡಗಳಾಗಿ ರೂಪಿಸಿರುವೆವು.' (೪೯:೧೩) ಇಷ್ಟೇ ಅಲ್ಲ. ಪ್ರವಾದಿ ಮೊಹಮ್ಮದ್ (ಸ) ಅವರ, ಇನ್ನೊಂದು ಧರ್ಮವನ್ನು ನೋಡುವ ಅದರ ಸಂತರರನ್ನು ಕುರಿತಾದ ಉಪದೇಶಗಳು ಸಾಕಷ್ಟಿವೆ.
ನೆರೆಹೊರೆಯವರ ಧಾರ್ಮಿಕ ಸಾಮಾಜಿಕ ಆಚರಣೆಗಳಿಗೆ ಅನುವು ಮಾಡಿ ಕೊಡಬೇಕು. ಇತರರ ಧರ್ಮವನ್ನು ಅವರ ಮಹಾತ್ಮರನ್ನು ಹೀಯಾಳಿಸುವ ನಿಂದಿಸುವ ಎಲ್ಲಾ ರೀತಿಯ ಕೃತ್ಯಗಳನ್ನು ಪ್ರವಾದಿ ಮಹಮ್ಮದರು ಖಂಡಿಸಿದ್ದಾರೆ.
ಇತರ ಧರ್ಮೀಯರೊಂದಿಗೆ ವ್ಯವಹರಿಸುವಾಗ ಸಂಕುಚಿತ ಮನೋಭಾವ ಬೇಡ. ಅವರೊಂದಿಗೆ ಜಗಳ ಕಾಯುವ ಮನೋಭಾವ ಇಟ್ಟುಕೊಳ್ಳಬಾರದೆಂದು ಆದೇಶಿಸಲಾಗಿದೆ. ಎಲ್ಲ ಜನಾಂಗದವರ ಶಾಂತಿಯ ತೋಟ ಎಂದು ನಮ್ಮ ಕವಿ ಶ್ರೇಷ್ಠರು ಹಾಡಿ ವರ್ಣಿಸಿರುವ ನಮ್ಮ ನಾಡಿನಲ್ಲಿ ನಿನ್ನ ಧರ್ಮ ನಿನಗೆ ಶುಭವಾಗಲಿ" ಎಂಬ ಹಾರೈಕೆ ಅವಶ್ಯವಾಗಿದೆ. ಇಷ್ಟೆಲ್ಲ ಕೇವಲ ಕುರಾನಿನಲ್ಲಿ ಮಾತ್ರ ಹೇಳಿಲ್ಲ. ಪ್ರಪಂಚದ ಎಲ್ಲಾ ಧರ್ಮಗಳಲ್ಲಿಯ ಆದೇಶ ಉಪದೇಶಗಳು,ಒಂದನ್ನು ಆಚರಿಸು ಉಳಿದವುಗಳನ್ನು ಗೌರವಿಸು' ಎಂಬ ತತ್ವ ಎಂದಿಗಿಂತಲೂ ಇಂದು ಅವಶ್ಯವಿದೆ. ಭಾರತದಂತಹ ಬಹುಮುಖಿ ಸಮಾಜದ ಆಭರಣವೆಂದರೆ ಪರಧರ್ಮ ಸಹಿಷ್ಣುತೆ ಎಂದು ಬೇರೆ ಹೇಳಬೇಕಾಗಿಲ್ಲ.